ಶನಿವಾರ, ಜೂನ್ 19, 2021
21 °C

ಅನಗವಾಡಿ: ಮತ ಚಲಾಯಿಸಿದ 98 ವರ್ಷದ ವೃದ್ಧೆ ದಾನಮ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಬೀಳಗಿ ತಾಲ್ಲೂಕಿನ ಅನಗವಾಡಿಯಲ್ಲಿ ಮಂಗಳವಾರ 98ರ ವಯಸ್ಸಿನ ವೃದ್ಧೆ ಪುತ್ರನ ಸಹಾಯದಿಂದ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು.

ತಾಯಿ ದಾನಮ್ಮ ಬಟಕುರ್ಕಿ ಅವರನ್ನು ಪುತ್ರ ಬಸಯ್ಯ ಮತಗಟ್ಟೆಗೆ ಹೊತ್ತುಕೊಂಡು ಬಂದರು.

ಅನಗವಾಡಿ ಗ್ರಾಮ ಪಂಚಾಯ್ತಿಯ ವಾರ್ಡ್ ನಂಬರ್ 2ರ ಮತಗಟ್ಟೆಯಲ್ಲಿ ದಾನಮ್ಮ ಮತ ಹಾಕಿದರು.

'ಓಟು ಹಾಕೋದು ಎಂದೂ ಬಿಟ್ಟಿಲ್ಲ. ಈಗಲೂ ಬಿಡಬಾರದು ಅಂತ ಬಂದೇನಿ' ಎಂದು ದಾನಮ್ಮ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು