ಶನಿವಾರ, ಜನವರಿ 25, 2020
22 °C

ಕ್ರಿಕೆಟ್‌ ಬೆಟ್ಟಿಂಗ್‌: ಒಬ್ಬನ ಬಂಧನ, ₹ 1.51 ಲಕ್ಷ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆನ್‌ಲೈನ್‌ ಮೂಲಕ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ನಿರತನಾಗಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಆರೋಪಿಯಿಂದ ₹ 1.51 ಲಕ್ಷ ನಗದು ಮತ್ತು ಒಂದು ಮೊಬೈಲ್‌ ವಶಪಡಿಸಿಕೊಂಡಿದ್ದಾರೆ.

ಕತ್ರಿಗುಪ್ಪೆ ಬಿಎಸ್‌ಎನ್‌ಎಲ್‌ ಕಚೇರಿ ಬಳಿಯ ನಿವಾಸಿ ಸಾಗರ್‌ (33) ಬಂಧಿತ ವ್ಯಕ್ತಿ. ಆರೋಪಿಯು ಭಾರತ ಮತ್ತು ವೆಸ್ಟ್‌ಇಂಡೀಸ್ ನಡುವೆ ನಡೆದ ಟಿ-20 ಕ್ರಿಕೆಟ್‌ ಪಂದ್ಯ, ಹೊರದೇಶಗಳಲ್ಲಿ ಸ್ಥಳೀಯವಾಗಿ ನಡೆಯುತ್ತಿರುವ ಚುಟುಕು ಕ್ರಿಕೆಟ್‌ ಪಂದ್ಯಗಳ ಸೋಲು, ಗೆಲುವಿನ ಬಗ್ಗೆ ವೆಬ್‌ಸೈಟ್‌ಗಳ ಮೂಲಕ ಬೆಟ್ಟಿಂಗ್ ಅನುಪಾತ ಪರಿಗಣಿಸಿ, ಮೊಬೈಲ್‌ ಸಂಪರ್ಕದ ಮೂಲಕ ಬೆಟ್ಟಿಂಗ್‌ ಆಡುತ್ತಿದ್ದ.

ಈ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಆಧರಿಸಿ ಸಿಸಿಬಿ ವಿಶೇಷ ವಿಚಾರಣಾ ದಳದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು