ಚಿಕಿತ್ಸೆಗೆ ಕನಿಷ್ಠ 50,000!
ಶಾಮನೂರು ರಸ್ತೆಯ ಕೇಶ ಕಸಿ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದ ರೋಗಿಯೊಬ್ಬರಿಂದ ₹ 50,000 ವಸೂಲಿ ಮಾಡಿದ ರಸೀದಿಯೊಂದು ಪತ್ತೆಯಾಯಿತು. ಇಲ್ಲಿ ಕೇಶ ಕಸಿ ಚಿಕಿತ್ಸೆಗೆ ಕನಿಷ್ಠ ₹ 50,000ದಿಂದ ₹ 1 ಲಕ್ಷದವರೆಗೆ ದರ ನಿಗದಿಪಡಿಸಲಾಗಿದೆ. ಕೇರಳದಲ್ಲಿ ಕೇಂದ್ರ ಕಚೇರಿ ಹೊಂದಿರುವ ಈ ಚಿಕಿತ್ಸಾಲಯ ಕೆಪಿಎಂಇ ಕಾಯ್ದೆಯಡಿ ಪರವಾನಗಿ ಪಡೆದಿಲ್ಲ. ಮೈಸೂರು ಬೆಂಗಳೂರು ಹುಬ್ಬಳ್ಳಿ ಸೇರಿ ಹಲವೆಡೆ ಚಿಕಿತ್ಸಾಲಯಗಳನ್ನು ಹೊಂದಿದೆ. ಕೇಶ ಕಸಿಗೆ ಶಸ್ತ್ರಚಿಕಿತ್ಸಾ ಕೊಠಡಿ ಕೂಡ ಇದೆ. ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಶುಶ್ರೂಷಕರೊಬ್ಬರು ಇಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.