ಗುರುವಾರ , ಮಾರ್ಚ್ 23, 2023
30 °C

ಹೊಳೆನರಸೀಪುರದಲ್ಲಿ ಬಿಜೆಪಿಯಿಂದ ಭವಾನಿ ಕಣಕ್ಕಿಳಿಸುವ ಆಸೆ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಹಾಸನ ಜಿಲ್ಲೆಯ ಹೊಳೆನರಸೀಪುರ ಕ್ಷೇತ್ರದಲ್ಲಿ ಸ್ಪರ್ಧಿಸಲು ಭವಾನಿ ಹೊರತು ಅತ್ಯುತ್ತಮ ಅಭ್ಯರ್ಥಿ ಬೇರಾರೂ ಇಲ್ಲ, ಬಿಜೆಪಿಯಿಂದ ಕಣಕ್ಕಿಳಿಯುವಂತೆ ಅವರನ್ನು ಆಹ್ವಾನಿಸುವ ಮನಸ್ಸಿತ್ತು. ಆದರೆ, ಭವಾನಿ ಅಕ್ಕ ಮತ್ತು ಎಚ್‌.ಡಿ.ರೇವಣ್ಣ ನಡುವೆ ಜಗಳ ಹಚ್ಚಬಾರದು ಎಂದು ಹೇಳಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಚಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಾಸನದಲ್ಲಿ ಸ್ಪರ್ಧೆಗೆ ಸಂಬಂಧಿಸಿದಂತೆ ಜೆಡಿಎಸ್‌ ಪಕ್ಷದ ಎಚ್‌.ಡಿ. ಕುಮಾರಸ್ವಾಮಿ ಮತ್ತು ಭವಾನಿ ಹೇಳಿಕೆಗಳನ್ನು ಗಮನಿಸಿದ್ದೇನೆ. ಅವರ ಮನೆಯಲ್ಲಿ ಜಗಳ ಹಚ್ಚಲು ನಾನು ಬಯಸಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು