ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Video | ರಕ್ತ ಸೈನಿಕರ ತವರು ಅಕ್ಕಿ ಆಲೂರು

Published : 11 ಆಗಸ್ಟ್ 2024, 6:32 IST
Last Updated : 11 ಆಗಸ್ಟ್ 2024, 6:32 IST
ಫಾಲೋ ಮಾಡಿ
Comments

ಹಾವೇರಿ ಜಿಲ್ಲೆಯ ಅಕ್ಕಿ ಆಲೂರಿಗೆ ನೀವು ಕಾಲಿಟ್ಟರೆ, ‘ರಕ್ತ ಸೈನಿಕರ ತವರಿಗೆ ಸ್ವಾಗತ’ ಎಂಬ ಫಲಕ ನಿಮಗೆ ಎದುರಾಗುತ್ತದೆ. ಈ ಊರಿನ ಯುವಸಮೂಹವನ್ನು ಮಾತನಾಡಿಸಿದಾಗ ಈ ಫಲಕ ಅತಿಶಯೋಕ್ತಿಯೂ ಅಲ್ಲ ಎಂಬುದೂ ಸಾಬೀತಾಗುತ್ತದೆ. ಈ ಪೈಕಿ ಎದ್ದುಕಾಣುವ ಹೆಸರು ಕರಬಸಪ್ಪ ಗೊಂದಿ ಅವರದು. ಹಾನಗಲ್‌ನಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿರುವ ಕರಬಸಪ್ಪ, ರಕ್ತದಾನದಂತಹ ಸಮಾಜಮುಖಿ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಸ್ನೇಹಮೈತ್ರಿ ಎಂಬ ರಕ್ತದಾನಿಗಳ ಸಂಘಟನೆ ಕಟ್ಟಿಕೊಂಡಿದ್ದಾರೆ. ಇದರಲ್ಲಿ, 4 ಸಾವಿರಕ್ಕೂ ಹೆಚ್ಚು ರಕ್ತದಾನಿಗಳಿದ್ದು, ಅಗತ್ಯ ಇರುವವರಿಗೆ ರಕ್ತದಾನ ಮಾಡುತ್ತಾ ಬಂದಿದ್ದಾರೆ. 12 ವರ್ಷಗಳಲ್ಲಿ ಗೊಂದಿಯವರ ಈ ತಂಡ 4,200 ಯುನಿಟ್‌ನಷ್ಟು ರಕ್ತವನ್ನು ನೀಡಿದೆ. ಅಕ್ಕಿ ಆಲೂರಿನ ಈ ‘ಬ್ಲಡ್‌ ಆರ್ಮಿ’ಯ ಸ್ಫೂರ್ತಿದಾಯಕ ಕಥನವೇ ಈ ವಿಡಿಯೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT