ಚಿತ್ರಕಲಾ ಸ್ಪರ್ಧೆ ವಿಜೇತರಾದ ಕೆ.ಆರ್. ಧನುಷ್ ರಾಜ್ (ಪ್ರಥಮ) ವಿಷ್ಣು ವೈಭವ್ (ದ್ವಿತೀಯ) ಹಾಗೂ ಸುಧೀಕ್ಷಾ (ತೃತೀಯ)
ಶೀತಲ್
ನೀರಜ್
ಯಕ್ಷ ಯೋಗೇಂದ್ರ
ಮಹದೇವ್
ಜ್ಞಾನಸಿರಿ
ಅಂಬೇಡ್ಕರ್ ಜೀವನ ಕುರಿತ ರಸಪ್ರಶ್ನೆ ಬಹುಮಾನ ಪುಸ್ತಕ ಗಿಟ್ಟಿಸಿದ ಪುಟಾಣಿಗಳು | ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಣೆ
ಬಾಬಾ ಸಾಹೇಬರು ನಮಗಾಗಿ ಎಷ್ಟೆಲ್ಲ ಕಷ್ಟಪಟ್ಟಿದ್ದಾರೆ ಎಂಬುದು ಕಾರ್ಯಕ್ರಮದಿಂದ ಗೊತ್ತಾಯಿತು. ಚಿತ್ರದಲ್ಲಿ ಮಾತ್ರ ನೋಡಿದ್ದೆ. ನಾನೂ ಅವರಂತೆ ಓದಬೇಕು ಎಂಬ ಆಸೆಯಾಗಿದೆ
ಎಸ್.ಶೀತಲ್, 4ನೇ ತರಗತಿ, ಮಹಾವೀರ್ ಜೈನ್ ವಿದ್ಯಾಲಯ
‘ಮಹಾನಾಯಕ’ ಟಿ.ವಿ ಧಾರವಾಹಿ ನೋಡುತ್ತಿದ್ದೆ. ಅಲ್ಲಿಂದಲೂ ಅವರೆಂದರೆ ಇಷ್ಟ. ಕಮ್ಮಟದಿಂದ ಅವರ ಬಗ್ಗೆ ಇನ್ನಷ್ಟು ತಿಳಿದುಕೊಂಡೆ. ಜ್ಞಾನದ ಜ್ಯೋತಿ ಎಂದು ಕರೆಯುವ ಅವರೀಗ ನನ್ನ ಮಾರ್ಗದರ್ಶಕ
ಬಿ.ನೀರಜ್, ಪ್ರಥಮ ಪಿಯು, ಜವಾಹರ ನವೋದಯ ವಿದ್ಯಾಲಯ, ಮಂಡ್ಯ
ಚಿತ್ರಕಲೆ ಬರೆಯಲು ಬಂದೆ. ಮೊದಲೆಲ್ಲ ಮಹಿಳೆಯರು– ಮಕ್ಕಳಿಗೆ ಹಕ್ಕುಗಳು ಇರಲಿಲ್ಲ ಎಂಬುದು ಕಾರ್ಯಕ್ರಮದಿಂದ ಗೊತ್ತಾಯಿತು. ಚೆನ್ನಾಗಿ ಓದಿ, ಕಷ್ಟದಲ್ಲಿದ್ದವರಿಗೆ ಸೇವೆ ಮಾಡಬೇಕು.
ಯಕ್ಷ ಯೋಗೇಂದ್ರ, 5ನೇ ತರಗತಿ, ಆಚಾರ್ಯ ವಿದ್ಯಾಕುಲ, ಮೈಸೂರು
ಅಂಬೇಡ್ಕರ್ ಜೀವನ ಕಥೆಯನ್ನೇ ಇಲ್ಲಿ ಕೇಳಿದೆವು. ಅವಮಾನ, ಕಷ್ಟದ ನಡುವೆಯೂ ಓದಿ, ಸಂವಿಧಾನವನ್ನು ನಮಗೆ ಕೊಟ್ಟಿದ್ದಾರೆ. ದೇಶದ ಒಳ್ಳೆಯ ನಾಗರಿಕ ಆಗುವ ಗುರಿಯಿದೆ. ಜನರ ಹಕ್ಕುಗಳನ್ನು ಕಾಪಾಡುವೆ
ಮಹದೇವ್, 6ನೇ ತರಗತಿ, ಎಸ್‌ಜಿವಿಕೆ ಶಾಲೆ, ಕಡಕೊಳ
ದೇಶದ ಜನರಿಗೆ ಉತ್ತಮ ಸಂವಿಧಾನ ಕೊಟ್ಟಿದ್ದಾರೆ. ಶಿಕ್ಷಣದ ಹಕ್ಕು ನೀಡಿದ್ದಾರೆ. ಸಾಕ್ಷ್ಯಚಿತ್ರ, ನಾಟಕ, ಉಪನ್ಯಾಸ ಎಲ್ಲವೂ ಚೆನ್ನಾಗಿತ್ತು. ದೇಶಪ್ರೇಮ ಹೆಚ್ಚಾಗಿದೆ. ಅವರಂತೆಯೇ ಓದುವೆ