ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು | ಅವಧಿಗೂ ಮೊದಲೇ ನೆರೆದ ವಿದ್ಯಾರ್ಥಿಗಳು

Last Updated 18 ಜೂನ್ 2020, 4:10 IST
ಅಕ್ಷರ ಗಾತ್ರ

ರಾಯಚೂರು: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಅವಧಿಗೂ ಮುನ್ನ ಬೆಳಿಗ್ಗೆ 8 ಗಂಟೆಗೆ ಪರೀಕ್ಷಾ ಕೇಂದ್ರಗಳ ಎದುರು ನೆರೆದಿದ್ದರು.

ಅಂತರ ಪಾಲನೆ ಇರಲಿಲ್ಲ. ಸ್ನೇಹಿತರು, ಪಾಲಕರು ಒಟ್ಟಾಗಿ ಮಾತನಾಡಿಕೊಂಡು, ಪರಸ್ಪರ ಕುಶಲೋಪರಿ ಚರ್ಚೆಗಳು ಕಂಡು ಬಂದವು.

ರಾಯಚೂರು ನಗರ ಮಧ್ಯೆಭಾಗದಲ್ಲಿರುವ ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಎದುರು ಈ ದೃಶ್ಯ ಕಂಡುಬಂತು. ಕೇಂದ್ರದ ಎದುರು ಜನಸಂದಣಿಯೂ ಹೆಚ್ಚಾಗಿತ್ತು.

8.20 ರಿಂದಲೇ ವಿದ್ಯಾರ್ಥಿಗಳನ್ನು ಒಳಗಡೆ ಬಿಡಲಾಯಿತು. ಮಾಸ್ಕ್ ಧರಿಸದ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಣೆ ಮಾಡಲಾಯಿತು.
ಸ್ಯಾನಿಟೈಜರ್ ನೀಡಲಾಯಿತು. ಥರ್ಮಲ್ ತಪಾಸಣೆಯೂ ಇತ್ತು. ಪರೀಕ್ಷಾ ಕೇಂದ್ರದ ಹೊರಗೆ ಒಟ್ಟಾಗಿ ಸರದಿ ನಿಂತಿದ್ದ ವಿದ್ಯಾರ್ಥಿಗಳು, ಒಳಗಡೆ ಹೋಗುವಾಗ ಮಾತ್ರ ಅಂತರ ಪಾಲಿಸಿಕೊಂಡು ಹೆಜ್ಜೆ ಹಾಕಿದರು.

ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30 ರವರೆಗೂ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರದತ್ತ ಬೆಳಿಗ್ಗೆ 8 ಕ್ಕೆ ಬಂದಿರುವವರು ಐದು ತಾಸುಗಳ ಬಳಿಕ ಹೊರಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT