ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾಳಕೊಪ್ಪ: ಡೆಂಗಿಯಿಂದ ಮೃತಪಟ್ಟ ಮಗುವಿನ ಮನೆಗೆ ವಿಜಯೇಂದ್ರ ಭೇಟಿ

Published 9 ಜುಲೈ 2024, 15:48 IST
Last Updated 9 ಜುಲೈ 2024, 15:48 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಪಟ್ಟಣದ ಖಾನಿಕೇರಿ ನಿವಾಸಿ ಖಾನಿ ಆಯುಬ್ ಅವರ ಮೊಮ್ಮಗ ಡೆಂಗಿಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮನೆಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು. 

‘ತಾಲ್ಲೂಕಿನಲ್ಲಿ ಡೆಂಗಿ ಹೆಚ್ಚಾಗಿದೆ. ಶಾಸಕ ಮಾಹಿತಿ ಕೇಳಿದರೂ, ಸೂಕ್ತ ಮಾಹಿತಿ ನೀಡಿಲ್ಲ. ಬಡಜನರ ಬಗ್ಗೆ ಆರೋಗ್ಯ ಇಲಾಖೆ ಜಾಗೃತಿ ವಹಿಸಿ ಕೆಲಸ ಮಾಡಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ನವೀದ ಖಾನ್ ಅವರನ್ನು ಬಿ.ವೈ.ವಿಜಯೇಂದ್ರ ತರಾಟೆಗೆ ತೆಗೆದುಕೊಂಡರು. 

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೀರೇಂದ್ರ ಪಾಟೀಲ್, ನಗರ ಘಟಕದ ಅಧ್ಯಕ್ಷ ಚೆನ್ನವೀರ ಶೆಟ್ರು, ಉಪಾಧ್ಯಕ್ಷ ನವೀದ್, ಫ್ರೂಟ್ ಸಾಧಿಕ್, ಕೆಜಿಎನ್ ರಫೀಕ್, ಖಾನಿ ಅಯುಬ್, ಮಕಬೂಲ್ ಸಾಬ್, ಅಬ್ಬಾಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT