ಹೊಸಪೇಟೆ (ವಿಜಯನಗರ): ಕಳೆದ ವರ್ಷ ಆಗಸ್ಟ್ 10ರಂದು ಕೊಚ್ಚಿಹೋಗಿದ್ದ ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್ಗೇಟ್ ಸ್ಥಳದಲ್ಲಿ ಅಳವಡಿಸಲಿರುವ ನೂತನ ಕ್ರಸ್ಟ್ಗೇಟ್ ಸಿದ್ಧವಾಗಿ ಶನಿವಾರ ಅಣೆಕಟ್ಟೆಯ ಸಮೀಪಕ್ಕೆ ಬಂದಿದ್ದು, ನವೆಂಬರ್ನಲ್ಲಷ್ಟೇ ಅದರ ಅಳವಡಿಕೆ ನಡೆಯಲಿದೆ.
.ಕ್ರಸ್ಟ್ಗೇಟ್ ಸತ್ಯ ತಿಳಿಸಲು ಆಗ್ರಹ.
49 ಟನ್ ತೂಕದ ಈ ಗೇಟ್ ಅನ್ನು ಗದಗ ಸಮೀಪದ ಅಡವಿಸೋಮಾಪುರದಲ್ಲಿ ಸಿದ್ಧಪಡಿಸಲಾಗಿದ್ದು, ಶನಿವಾರ ಮಧ್ಯಾಹ್ನ ಟ್ರಕ್ ಮೂಲಕ ಅದನ್ನು ತರಲಾಯಿತು.

‘ಇದೀಗ ಅಣೆಕಟ್ಟೆಯ ಕ್ರಸ್ಟ್ಗೇಟ್ ಅಳವಡಿಸುವ ಬೆಡ್ ಕಾಂಕ್ರೀಟ್ ಮಟ್ಟಕ್ಕೆ ಜಲಾಶಯದ ನೀರು ತುಂಬಿದೆ. ಈ ಹಂತದಲ್ಲಿ ಗೇಟ್ ಅಳವಡಿಕೆ ಸಾಧ್ಯವಿಲ್ಲ. ಕಳೆದ ವರ್ಷ ಅಳವಡಿಸಿರುವ ಸ್ಟಾಪ್ಲಾಗ್ ಗೇಟ್ ಸುಸ್ಥಿತಿಯಲ್ಲಿದ್ದು, ಈ ಮಳೆಗಾಲ ಅದರಲ್ಲೇ ಸುಧಾರಿಸುವುದು ಸಾಧ್ಯ. ಹೀಗಾಗಿ ಇದೀಗ ಕ್ರಸ್ಟ್ಗೇಟ್ ಬಂದಿದ್ದರೂ ನವೆಂಬರ್ನಲ್ಲಷ್ಟೇ ಅದರ ಅಳವಡಿಕೆ ಆಗಲಿದೆ’ ಎಂದು ತುಂಗಭದ್ರಾ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
.ತುಂಗಭದ್ರಾ ಅಣೆಕಟ್ಟೆ ಕ್ರಸ್ಟ್ಗೇಟ್: ನಾಲ್ಕು ಕಂಪನಿಗಳಿಂದ ಬಿಡ್.
ಅಹಮದಾಬಾದ್ನ ಹಾರ್ಡ್ವೇರ್ ಟೂಲ್ಸ್ ಆ್ಯಂಡ್ ಮೆಷಿನರಿ ಪ್ರೊಜೆಕ್ಟ್ ಕಂಪನಿ 19ನೇ ಗೇಟ್ ಸಹಿತ ಇತರ ಎಲ್ಲಾ ಗೇಟ್ಗಳನ್ನು (ಒಟ್ಟು 33) ಅಳವಡಿಸುವ ಗುತ್ತಿಗೆ ಪಡೆದುಕೊಂಡಿದೆ. ಈ ಬಾರಿ ಮಳೆ ನಿಗದಿತ ಅವಧಿಗೂ ಮೊದಲೇ ಸುರಿದು ಜಲಾಶಯದಲ್ಲಿ ಈಗಾಗಲೇ 41.85 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈ ಹಿಂದಿನ ವರ್ಷಗಳಲ್ಲಿನ ಮಳೆ ಪ್ರಮಾಣ ಲೆಕ್ಕ ಹಾಕಿದ್ದ ಅಧಿಕಾರಿಗಳು, ಜುಲೈ ಮೊದಲ ವಾರದ ಬಳಿಕವಷ್ಟೇ ಅಣೆಕಟ್ಟೆಯ ನೀರಿನ ಮಟ್ಟ 1,611 ಅಡಿ (40 ಟಿಎಂಸಿ ಅಡಿ ನೀರಿನ ಸಂಗ್ರಹ ಮಟ್ಟ) ತಲುಪಬಹುದು, ಹೀಗಾಗಿ ಈ ವರ್ಷವೇ ಕ್ರಸ್ಟ್ಗೇಟ್ ಅಳವಡಿಸಬಹುದು ಎಂದು ಹೇಳಿದ್ದರು. ಆದರೆ ಜೂನ್ ಮೂರನೇ ವಾರದಲ್ಲೇ ಈ ಪ್ರಮಾಣದ ನೀರು ಸಂಗ್ರಹವಾಗಿರುವುದರಿಂದ ಅಧಿಕಾರಿಗಳು, ಎಂಜಿನಿಯರ್ಗಳ ಲೆಕ್ಕಾಚಾರ ತಪ್ಪಿದೆ
.ತುಂಗಭದ್ರಾ ಅಣೆಕಟ್ಟೆಯ ಕ್ರಸ್ಟ್ಗೇಟ್ ಬದಲಾವಣೆ: ಟೆಂಡರ್ ವಿಸ್ತರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.