ತೆಲುಗಿನ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ‘ಅಖಂಡ 2’ ಸಿನಿಮಾ ಡಿ.12ರಂದು ಬಿಡುಗಡೆಯಾಗಿದೆ. ಬೋಯಪತಿ ಶ್ರೀನು ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಟ ಬಾಲಯ್ಯ ಅವರು ‘ಅಖಂಡ 2’ ಸಿನಿಮಾದಲ್ಲಿ ಕನ್ನಡದ ಮೇಲಿರುವ ತಮ್ಮ ಪ್ರೀತಿ ಹಾಗೂ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಡೈಲಾಗ್ ಹೇಳುವ ಬರದಲ್ಲಿ ಕನ್ನಡ ಉಚ್ಚಾರಣೆಯನ್ನು ತಪ್ಪಾಗಿ ಮಾಡಿರೋದು ಈಗ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಆಗುತ್ತಿದೆ.
.ಅಖಂಡ 2 ಸಿನಿಮಾ ಬಿಡುಗಡೆ: ಬಾಲಯ್ಯ ನಟನೆಗೆ ಪ್ರೇಕ್ಷಕರು ಫುಲ್ ಫಿದಾ.ಬಾಲಯ್ಯ ಪಕ್ಕದಲ್ಲಿ ನಿಂತುಕೊಂಡಿದ್ದ ಈ ಬಾಲಕ ಇಂದು ಕನ್ನಡದ ಜನಪ್ರಿಯ ನಿರೂಪಕ.
ನಂದಮೂರಿ ಬಾಲಕೃಷ್ಣ ಅವರು ಡಾ. ರಾಜ್ಕುಮಾರ್ ಕುಟುಂಬದ ಜೊತೆಗೆ ನಂಟಿದೆ. ಅದರಲ್ಲೂ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಜೊತೆಗೆ ಬಾಲಯ್ಯ ಉತ್ತಮ ಒಡನಾಟ ಹೊಂದಿದ್ದಾರೆ. ಹೀಗಾಗಿಯೇ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಹೊರವಲಯದಲ್ಲಿ ನಟ ಶಿವರಾಜ್ ಕುಮಾರ್ ಸಮ್ಮುಖದಲ್ಲಿ ‘ಅಖಂಡ-2’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿತ್ತು.

ಆದರೆ ನಟ ಬಾಲಯ್ಯ ಅವರು ‘ಕನ್ನಡವೇ ಸತ್ಯ.. ಕನ್ನಡವೇ ನಿತ್ಯ’ ಅಂತ ಹೇಳುವ ಬದಲು ತಪ್ಪಾಗಿ ‘ಕನ್ನಡವೇ ಸಚ್ಚ.. ಕನ್ನಡವೇ ನಿಚ್ಚ’ ಎಂದಿದ್ದಾರೆ. ಇದೇ ವಿಡಿಯೊವನ್ನು ಇಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಆದರೆ ಕನ್ನಡದ ಮೇಲೆ ಅಷ್ಟು ಅಭಿಮಾನ ಉಳ್ಳವರು ಕನ್ನಡವನ್ನು ತಪ್ಪು ತಪ್ಪಾಗಿ ಉಚ್ಚಾರಣೆ ಮಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಡಬ್ಬಿಂಗ್ನಲ್ಲಾದರೂ ಸರಿ ಪಡಿಸಬೇಕಿತ್ತು ಎಂದು ಕನ್ನಡಿಗರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.