ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ 7ನೇ ವರ್ಷದ ಪುಣ್ಯಸ್ಮರಣೆ. ಈ ಹಿನ್ನೆಲೆಯಲ್ಲಿ ಇಂದು (ನವೆಂಬರ್ 24) ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಅವರು ಅಭಿಮಾನಿಗಳ ಸಮ್ಮುಖದಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸಿದ್ದಾರೆ.
.PHOTOS: ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿಷೇಕ್ ಅಂಬರೀಶ್-ಅವಿವಾ ಬಿದ್ದಪ್ಪ ಪುತ್ರ.Dharmendra Death | ನವೆಂಬರ್ 24: 7 ವರ್ಷದ ಹಿಂದೆ ಅಂಬಿ, ಇಂದು ಧರ್ಮೇಂದ್ರ ನಿಧನ.
ನಟ ಅಂಬರೀಶ್ ಅವರ 7ನೇ ವರ್ಷದ ಪುಣ್ಯಸ್ಮರಣೆ ದಿನದಂದು ನಟಿ ಸುಮಲತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ‘ಇಂದು ನಿಮ್ಮ ಅಗಲಿಕೆಗೆ ಏಳು ವರ್ಷಗಳು. ನೀವು ಇಲ್ಲ ಎನ್ನುವ ಕೊರಗು ಒಂದು ಕಡೆ ಕಾಡುತ್ತಿದೆ. ಎಲ್ಲೋ ಒಂದು ಕಡೆ ನಮ್ಮೊಂದಿಗೆ ಇದ್ದೀರಿ ಎನ್ನುವ ನಂಬಿಕೆಯೊಂದಿಗೆ ನಾವಿದ್ದೇವೆ. ನೀವು ತೋರಿದ ಪ್ರೀತಿ, ಹೃದಯವಂತಿಕೆ, ಔದಾರ್ಯ ಇವೆಲ್ಲವೂ ನನ್ನಲ್ಲಿ, ಅಭಿಮಾನಿಗಳಲ್ಲಿ, ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಇನ್ನೂ ಜೀವಂತವಾಗಿವೆ.

‘ನೀವು ಒಬ್ಬ ನಟನಾಗಿ ಮಾತ್ರವಲ್ಲ, ಒಬ್ಬ ಮನುಷ್ಯನಾಗಿ ಗೆದ್ದವರು. ಅದಕ್ಕೆ ನಿಮ್ಮನ್ನು ಈ ನಾಡಿನ ಜನತೆ ಕರ್ಣ ಎಂದು ಕರೆದಿದ್ದಾರೆ. ಅಂಬಿ ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ. ನೀವು ಇಲ್ಲದ ಈ 7 ವರ್ಷಗಳಲ್ಲಿ ನಾನೊಬ್ಬಳೇ ಅಲ್ಲ, ಪ್ರತಿ ಅಭಿಮಾನಿಯ ಮನದಲ್ಲಿಯೂ ನಿಮ್ಮ ನೆನಪನ್ನು ಜೀವಂತವಾಗಿ ಇಟ್ಟಿದ್ದಾರೆ. ನಿಮ್ಮನ್ನು ಪ್ರೀತಿಸಿದ ಜನರ ಹೃದಯದಲ್ಲಿ ನೀವು ಎಂದೆಂದಿಗೂ ಜೀವಂತವಾಗಿದ್ದೀರಿ. ಅಂಬಿ ನೀವು ಅಮರ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.