ಬಾಲಿವುಡ್ ಖ್ಯಾತ ನಟ, ಹೀ–ಮ್ಯಾನ್ ಎಂದೇ ಖ್ಯಾತಿ ಪಡೆದಿದ್ದ ಧರ್ಮೇಂದ್ರ (89) ಅವರು ಇಂದು (ಸೋಮವಾರ) ನಿಧನರಾಗಿದ್ದಾರೆ. ಸುಮಾರು 6 ದಶಕಗಳ ಸುಧೀರ್ಘ ಕಾಲ ಹಿಂದಿ ಸಿನಿಮಾ ರಂಗವನ್ನು ಆಳಿದ್ದ ಅವರು, ತಮ್ಮದೇ ಆದ ವಿಶೇಷ ವ್ಯಕ್ತಿತ್ವದಿಂದ ಹೆಸರುವಾಸಿಯಾಗಿದ್ದರು.
.ನಟ ಧರ್ಮೇಂದ್ರ ನಿಧನ: ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಸೇರಿ ಗಣ್ಯರ ಸಂತಾಪ.ನಟ ಧರ್ಮೇಂದ್ರ ಮತ್ತು ಕರ್ನಾಟಕದ ರಾಮನಗರ: ಚಿತ್ರ ಶೋಲೆ ಬೆಸೆದ ನಂಟು.
ಇದೇ ದಿನ ಅಂದರೆ 2018 ನವೆಂಬರ್ 24 ರಂದು ಕನ್ನಡದ ಖ್ಯಾತ ನಟ ಅಂಬರೀಶ್ ಅವರು ಕೊನೆಯುಸಿರೆಳೆದಿದ್ದರು. ಇದೀಗ ಹಿಂದಿಯ ನಟ ಧರ್ಮೇಂದ್ರ ಅವರು ಕೂಡಾ 2025ರ ನವೆಂಬರ್ 24 ರಂದು ನಿಧನರಾಗಿದ್ದಾರೆ.

ಧರ್ಮೇಂದ್ರ ಹಾಗೂ ಅಂಬರೀಶ್ ಅವರ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು. ಧರ್ಮೇಂದ್ರ ಅವರು ತಮ್ಮ ಸಿನಿ ಬದುಕಿನಲ್ಲಿ 300ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದಾರೆ. ಒಂದೇ ವರ್ಷದಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕೊಟ್ಟ ಕೀರ್ತಿ ಧರ್ಮೇಂದ್ರ ಅವರಿಗೆ ಸಲ್ಲುತ್ತದೆ. ಇವರ ಕೊನೆಯ ಸಿನಿಮಾ ಇದೇ ವರ್ಷ ಡಿಸೆಂಬರ್ 25ರಂದು ಬಿಡುಗಡೆಯಾಗಬೇಕಿತ್ತು.

ಪತ್ನಿ ಹೇಮಾ ಮಾಲಿನಿ, ಪುತ್ರರಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಪುತ್ರಿಯರಾದ ವಿಜೇತಾ, ಅಜೀತಾ, ಇಶಾ ಮತ್ತು ಅಹಾನಾ ಅವರನ್ನು ಅಗಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.