ಬೆಂಗಳೂರು: ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್(ಹಿಂದಿನ ಕಥೆ) ಅ.2ರಂದು ಬಿಡುಗಡೆಯಾಗಲಿದೆ. ಆದರೆ ಇಂದಿನಿಂದ (ಶುಕ್ರವಾರ) ಸಿನಿಮಾದ ಮುಂಗಡ ಬುಕಿಂಗ್ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟ ರಿಷಬ್ ಶೆಟ್ಟಿ, ಮೊದಲ ಅಧ್ಯಾಯ ಆರಂಭವಾಗಿದ್ದು, ಕಾಂತಾರ ಜಗತ್ತಿಗೆ ಪ್ರವೇಶಿಸಲು ಸಿನಿಮಾದ ಬುಕಿಂಗ್ ಆರಂಭವಾಗಲಿದೆ ಎಂದಿದ್ದಾರೆ.

ಇಂದು ಮಧ್ಯಾಹ್ನ 12.29ಕ್ಕೆ ಕಾಂತಾರ ಚಿತ್ರದ ಮುಂಗಡ ಬುಕಿಂಗ್ ಶುರುವಾಗಲಿದೆ ಎಂದು ರಿಷಬ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
.‘ಕಾಂತಾರ ಅಧ್ಯಾಯ–1’ ಚಿತ್ರ ಅ.2ರಂದು ತೆರೆಗೆ: ದಸರಾಗಿಲ್ಲ ಸಿನಿಮಾಗಳ ಅಬ್ಬರ.ಸಂದರ್ಶನ | 'ಕಾಂತಾರ' ಮನಸಿಗೆ ಹತ್ತಿರದ ಸಿನಿಮಾ: ನಟಿ ರುಕ್ಮಿಣಿ ವಸಂತ್.
ಬಹುನಿರೀಕ್ಷಿತ ‘ಕಾಂತಾರ– ಅಧ್ಯಾಯ 1’ ಟ್ರೇಲರ್ ಈಚೆಗೆ ಬಿಡುಗಡೆಯಾಗಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಚಿತ್ರ ಅ.2ರಂದು ತೆರೆ ಕಾಣಲಿದೆ. ‘ಬನವಾಸಿಯ ಕದಂಬರೊಂದಿಗೆ ತುಳುನಾಡಿನ ದೈವದ ಕಥೆ ಪ್ರಾರಂಭವಾಗುತ್ತದೆ. ನಾಗಾ ಸಾಧುವಾಗಿ, ಯೋಧನಾಗಿ ಮನುಷ್ಯ ಮತ್ತು ದೈವದ ನಡುವೆ ಸಂಪರ್ಕ ಬೆಸೆಯುವ ಪಾತ್ರದಲ್ಲಿ ರಿಷಬ್ ಕಾಣಿಸಿಕೊಂಡಿದ್ದಾರೆ’ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಅಜನೀಶ್ ಲೋಕನಾಥ್ ಸಂಗೀತ ಸಿನಿಮಾಕ್ಕಿದೆ. ಹೋರಾಟದ ಹಾದಿಯಲ್ಲಿ ನವಿರಾದ ಪ್ರೇಮಕಥೆಯನ್ನೂ ಹೆಣೆದಿರುವುದನ್ನು ಟ್ರೇಲರ್ನಲ್ಲಿ ಕಾಣಬಹುದು. ರುಕ್ಮಿಣಿ ವಸಂತ್, ರಿಷಬ್ ಶೆಟ್ಟಿಗೆ ಜತೆಯಾಗಿದ್ದಾರೆ.
.ಕಾಂತಾರ ಅಧ್ಯಾಯ–1 ಟ್ರೇಲರ್: ಒಂದೇ ದಿನದಲ್ಲಿ 5.5 ಕೋಟಿ ಹೆಚ್ಚು ವೀಕ್ಷಣೆ.ಕನ್ನಡ ಜನತೆಯಿಂದ ಕಾಂತಾರ ಅಧ್ಯಾಯ–1 ಟ್ರೇಲರ್ ಬಿಡುಗಡೆ: ಹೊಂಬಾಳೆ ಫಿಲ್ಮ್ಸ್.7 ಸಾವಿರ ತೆರೆಗಳಲ್ಲಿ ಕಾಂತಾರ ಪ್ರೀಕ್ವೆಲ್: ಮೇಕಿಂಗ್ ಬಗ್ಗೆ ರಿಷಬ್ ಹೇಳಿದ್ದೇನು?.ರಿಷಬ್ ಶೆಟ್ಟಿ ನಟನೆಯ ‘ಕಾಂತಾರ ಅಧ್ಯಾಯ1‘ ಟ್ರೇಲರ್ಗೆ ಮೆಚ್ಚುಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.