ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ‘ಮಸ್ತ್ ಮಲೈಕಾ’ ಹಾಡು ಇಂದು (ಸೋಮವಾರ) ಸರೆಗಮ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಕಿಚ್ಚನ ಜತೆ ನಿಶ್ವಿಕಾ ನಾಯ್ಡು ಹಾಗೂ ಅನೇಕ ಕಲಾವಿದರು ಭರ್ಜರಿ ನೃತ್ಯ ಮಾಡಿದ್ದಾರೆ.
.ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ.
ನಿಶ್ವಿಕಾ ಹಾಗೂ ಕಿಚ್ಚನ ನೃತ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಈ ಹಾಡಿನ ಇನ್ನೊಂದು ವಿಶೇಷ ಎಂದರೆ, ಮಸ್ತ್ ಮಲೈಕಾ’ ಹಾಡಿಗೆ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಅವರು ಧ್ವನಿ ನೀಡಿದ್ದಾರೆ.

ಹಾಡು ಬಿಡುಗಡೆ ಕುರಿತು ನಟ ಕಿಚ್ಚ ಸುದೀಪ್, ನನ್ನ ಎಲ್ಲಾ ಬಾದ್ಶಾಗಳಿಗೆ..ನಿಮ್ಮ ಕುಟುಂಬದ ಸದಸ್ಯರಾದ ಸಾನ್ವಿ ಅವರ ಮೊದಲ ಹಾಡನ್ನು ಪ್ರಸ್ತುತಪಸುತ್ತಿದ್ದೇವೆ. ಮಾರ್ಕ್ ಚಿತ್ರತಂಡಿಂದ ಈ ಹಾಡನ್ನು ಕ್ರಿಸ್ಮಸ್ ಮತ್ತು ಹೊಸ ವರ್ಷದ ಉಡುಗೊರೆಯಾಗಿ ನೀಡುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.

‘ಮಸ್ತ್ ಮಲೈಕಾ‘ ಹಾಡನ್ನು ಅಜನೀಶ್ ಲೋಕನಾಥ್ ಸಂಯೋಜಿಸಿದ್ದರೆ, ನಕಾಶ್ ಅಜೀಝ್ ಹಾಗೂ ಸಾನ್ವಿ ಸುದೀಪ್ ಹಾಡಿದ್ದಾರೆ. ಅನೂಪ್ ಭಂಡಾರಿ ಅವರ ಸಾಹಿತ್ಯ ನೀಡಿದ್ದಾರೆ.
.ವಿವಾದದ ನಡುವೆಯೂ ಯಶಸ್ಸು: ₹ 300 ಕೋಟಿ ಬಾಚಿಕೊಂಡ ರಣವೀರ್ ಸಿಂಗ್ 'ಧುರಂಧರ್'.
'ಸತ್ಯಜ್ಯೋತಿ ಫಿಲ್ಮ್ಸ್' ಮತ್ತು 'ಕಿಚ್ಚ ಕ್ರಿಯೇಷನ್ಸ್' ಮೂಲಕ 'ಮಾರ್ಕ್' ಸಿನಿಮಾ ನಿರ್ಮಾಣಗೊಂಡಿದೆ. ಮಾರ್ಕ್ ಚಿತ್ರವು ಡಿಸೆಂಬರ್5ರಂದು ಬಿಡುಗಡೆಯಾಗಲಿದೆ.

ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಚಿತ್ರಗ್ರಹಣವಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.