ಶುಕ್ರವಾರ, ಮೇ 20, 2022
27 °C

ಮಾಲ್ಡೀವ್ಸ್ ಕಡಲ ತೀರದಲ್ಲಿ ಕಿಯಾರಾ ಅಡ್ವಾಣಿ: ಹಾಟ್ ಫೋಟೊ, ವಿಡಿಯೊ ವೈರಲ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಮಾಲ್ಡೀವ್ಸ್ ಕಡಲ ತೀರದಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೊ, ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಿಯಾರಾ, ಮಾಲ್ಡೀವ್ಸ್ ಪ್ರವಾಸದ ವೇಳೆ ಬೀಚ್‌ನಲ್ಲಿ ಸಮಯ ಕಳೆದ ಫೋಟೊ ಮತ್ತು ವಿಡಿಯೊವೊಂದನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಓದಿ... ಇದು ಅವಳ ಕೊನೆಯ ಮುತ್ತು: ಸಮನ್ವಿ ಬಗ್ಗೆ ತಾಯಿ ಅಮೃತಾ ರೂಪೇಶ್ ಭಾವುಕ ನುಡಿ

ಫೋಟೊದಲ್ಲಿ ಕಿಯಾರಾ ಸಮುದ್ರದಲ್ಲಿ ತಮ್ಮ ಕೂದಲನ್ನು ನೆನೆಸುತ್ತಾ ಕಣ್ಣು ಮುಚ್ಚಿ ಆಕಾಶದತ್ತ ನೋಡಿದ್ದಾರೆ. ಇದರ ಜೊತೆಗೆ ಬಿಳಿ ಬಣ್ಣದ ಬಿಕಿನಿ, ಸನ್ ಗ್ಲಾಸ್ ತೊಟ್ಟು ದೂರದಿಂದ ಓಡಿ ಬರುತ್ತಿರುವ ಮತ್ತು ಬೋಟ್‍ನಲ್ಲಿ ಪ್ರಯಾಣಿಸುತ್ತಿರುವ ವಿಡಿಯೊವನ್ನು ಬಟರ್ ಫ್ಲೈ ಎಮೋಜಿಯೊಂದಿಗೆ ಹಂಚಿಕೊಂಡಿದ್ದಾರೆ.

ಈ ಫೋಟೊ ಮತ್ತು ವಿಡಿಯೊ ವೀಕ್ಷಿಸಿರುವ ಅಭಿಮಾನಿಗಳು ಫಿದಾ ಆಗಿದ್ದಾರೆ. 19.80 ಲಕ್ಷ ಮಂದಿ ಫೋಟೊವನ್ನು ಲೈಕ್ ಮಾಡಿದ್ದಾರೆ. 9.96 ಲಕ್ಷ ಮಂದಿ ವಿಡಿಯೊ ಇಷ್ಟಪಟ್ಟಿದ್ದಾರೆ.

ಓದಿ... 32ನೇ ವಸಂತಕ್ಕೆ ಕಾಲಿಟ್ಟ ವರುಣ್ ತೇಜ್‌: ಚಿರಂಜೀವಿ ಸೇರಿ ಗಣ್ಯರಿಂದ ಶುಭ ಹಾರೈಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು