‘ಕೋಟಿ’ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ಗೆ ನಾಯಕಿಯಾಗಿ ನಟಿಸಿದ್ದ ಮೋಕ್ಷಾ ಕುಶಲ್ ಅವರು ದೀಪಾವಳಿಗೆ ಶುಭಕೋರಿದ್ದಾರೆ. ಹಬ್ಬದ ಪ್ರಯುಕ್ತ ಸಾಮಾಜಿಕ ಮಾಧ್ಯಮದಲ್ಲಿ ಸುಂದರವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಆ ಚಿತ್ರಗಳ ಜೊತೆಗೆ ‘ಬೆಳಕು, ಪ್ರೀತಿ ಮತ್ತು ನಗು. ಅದು ನಿಮಗಾಗಿ ನನ್ನ ದೀಪಾವಳಿ ಹಾರೈಕೆ’ ಎಂದು ಬರೆದುಕೊಂಡಿದ್ದಾರೆ.

‘ಪ್ರೇಮಂ ಪೂಜ್ಯಂ’ ಸಿನಿಮಾ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ನಟಿ ಬೃಂದಾ ಆಚಾರ್ಯ ಹೊಸ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ನಗುವಿನ ಸುಂದರಿ ಎಂದೇ ಖ್ಯಾತಿ ಪಡೆದುಕೊಂಡಿರೋ ಬೃಂದಾ ಆಚಾರ್ಯ ಅವರು ಅಭಿಮಾನಿಗಳಿಗೆ ದೀಪಾವಳಿ ಹಬ್ಬಕ್ಕೆ ಶುಭ ಕೋರಿದ್ದಾರೆ. ‘ಶುಭ ದೀಪಾವಳಿ. ಬೆಳಕಿನ ಹಬ್ಬವು ನಿಮ್ಮ ಜೀವನಕ್ಕೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ’ ಎಂದು ಬರೆದುಕೊಂಡಿದ್ದಾರೆ.

ಚಂದನವನದ ನಟಿ ಆಶಿಕಾ ರಂಗನಾಥ್ ಅವರು ದೀಪಾವಳಿಗೆ ಶುಭ ಕೋರಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಫೋಟೊಗಳನ್ನು ಹಂಚಿಕೊಂಡು ‘ದೀಪಾವಳಿ ಎಲ್ಲರಿಗೂ ಪ್ರೀತಿ ಮತ್ತು ಬೆಳಕು ನೀಡಲಿ’ ಎಂದು ಬರೆದುಕೊಂಡಿದ್ದಾರೆ.

ನಟ ದರ್ಶನ್ ಜೊತೆಗೆ ಡೆವಿಲ್ ಸಿನಿಮಾದಲ್ಲಿ ಕಾಣಿಸಿಕೊಂಡ ನಟಿ ರಚನಾ ರೈ ಕೂಡ ದೀಪಾವಳಿಯನ್ನು ಆಚರಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಂದವಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ‘ಕಷ್ಟಗಳೆಂಬ ಕತ್ತಲೆ ಕಳೆದು, ಎಲ್ಲರ ಜೀವನದಲ್ಲಿ ಬೆಳಕೆಂಬ ಸುಖ, ಶಾಂತಿ, ಸಮೃದ್ಧಿ ನೆಲೆಯಾಗಲಿ‘ ಎಂದು ಶುಭ ಕೋರಿದ್ದಾರೆ.

‘ಕಿಸ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿ ಶ್ರೀಲೀಲಾ ಅವರು ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಇತ್ತಿಚೇಗೆ ತೆರೆಕಂಡ ‘ದುಬಾರಿ’ ಹಾಗೂ ‘ಜೂನಿಯರ್’ ಸಿನಿಮಾಗಳಲ್ಲಿ ನಟಿ ಶ್ರೀಲೀಲಾ ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.