ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊತೆಯಲ್ಲಿ ಪ್ರವಾಸಕ್ಕೆ ಬಂದ ವ್ಯಕ್ತಿಗೆ ದುಬಾರಿ ಬೈಕ್ ಉಡುಗೊರೆ ನೀಡಿದ ತಮಿಳು ನಟ ಅಜಿತ್

Published 24 ಮೇ 2023, 13:00 IST
Last Updated 24 ಮೇ 2023, 13:00 IST
ಅಕ್ಷರ ಗಾತ್ರ

ಮುಂಬೈ: ತಮಿಳಿನ ಸೂಪರ್‌ ಸ್ಟಾರ್‌ ಅಜಿತ್‌ ಕುಮಾರ್ ವ್ಯಕ್ತಿಯೊಬ್ಬರಿಗೆ ₹ 12 ಲಕ್ಷದ ಬಿಎಂಡಬ್ಲ್ಯು ಸೂಪರ್‌ ಬೈಕ್‌ನನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸುಗತ್‌ ಸತ್‌ಪತಿ ಎಂಬ ಬೈಕ್‌ ರೈಡರ್‌ನೊಂದಿಗೆ ಅಜಿತ್‌ ಕುಮಾರ್‌ 2022ಲ್ಲಿ ಸಿಕ್ಕಿಂಗೆ ಬೈಕ್‌ ಪ್ರವಾಸ ಕೈಗೊಂಡಿದ್ದರು. ನಂತರ ಹಲವು ಬಾರಿ ಜೊತೆಯಾಗಿ ಪ್ರವಾಸ ಕೈಗೊಂಡಿದ್ದ ಇವರು, ಇತ್ತೀಚಿಗೆ ನೇಪಾಳ ಪ್ರವಾಸವನ್ನು ಮುಗಿಸಿ ಬಂದಿದ್ದರು.

ನೇಪಾಳದ ಬೈಕ್‌ ಪ್ರವಾಸದ ಬಳಿಕ ಸುಗತ್‌ ಸತ್‌ಪತಿಗೆ ₹ 12 ಲಕ್ಷದ ಬಿಎಂಡಬ್ಲ್ಯು ಬೈಕ್‌ನನ್ನು ಅಜಿತ್‌ ಕುಮಾರ್‌ ಸರ್ಪ್ರೈಸ್‌ ಗಿಫ್ಟ್‌ ನೀಡಿದ್ದಾರೆ.

ಬೈಕ್‌ ಪ್ರವಾಸವೊಂದರಲ್ಲಿ ತಮಿಳು ನಟ ಅಜಿತ್ ಕುಮಾರ್‌ ಕಾಣಿಸಿಕೊಂಡ ದೃಶ್ಯ. ಚಿತ್ರ ಕೃಪೆ( Ajithkumar_samrajyam)
ಬೈಕ್‌ ಪ್ರವಾಸವೊಂದರಲ್ಲಿ ತಮಿಳು ನಟ ಅಜಿತ್ ಕುಮಾರ್‌ ಕಾಣಿಸಿಕೊಂಡ ದೃಶ್ಯ. ಚಿತ್ರ ಕೃಪೆ( Ajithkumar_samrajyam)

ಈ ದುಬಾರಿ ಉಡುಗೊರೆ ನೋಡಿ ಪ್ರತಿಕ್ರಿಯಿಸಿರುವ ಸುಗತ್‌ ಸತ್‌ಪತಿ, ಯಾವುದು ಪೂರ್ವ ನಿರ್ಧರಿತವಾಗಿರುವುದಿಲ್ಲ. ನಮ್ಮ ಹಿಂದಿನ ಅಡೆತಡೆಗಳು ಹೊಸ ಆರಂಭಕ್ಕೆ ಕಾರಣವಾಗಬಹುದು ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

’ಬಿಎಂಡಬ್ಲ್ಯು ಸೂಪರ್‌ ಬೈಕ್ ಜಗತ್ತನ್ನು ಅನ್ವೇಷಿಸಲು ನೆರವಾಗಲಿದೆ. ಇದು ಪ್ರೀತಿಯ ಅಣ್ಣನಿಂದ (ಅಜಿತ್ ಕುಮಾರ್) ಸಿಕ್ಕ ಉಡುಗೊರೆ. ಏನನ್ನೂ ಅಪೇಕ್ಷಿಸದ ಹಾಗೂ ಒಳ್ಳೆದನ್ನೇ ಬಯಸುವ ಗುಣ ಅವರದ್ದು. ದೊಡ್ಡ ಸ್ಟಾರ್‌ ನಟನೊಂದಿಗೆ ಸಂಪರ್ಕ ಹೊಂದಿರುವುದು ಅದೃಷ್ಟ’ ಎಂದು ಸುಗತ್‌ ಸತ್‌ಪತಿ ಹೇಳಿಕೊಂಡಿದ್ದಾರೆ.

ಈ ಹಿಂದೆ ಸುಗತ್‌ ಸತ್‌ಪತಿ ಡ್ಯೂಕ್ 390 ಬೈಕ್‌ನಲ್ಲಿ ಅಜಿತ್ ಕುಮಾರ್ ಅವರೊಂದಿಗೆ ಪ್ರವಾಸ ಕೈಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT