ಹಾಂಗ್ಝೌ: ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪುರುಷರ ಫುಟ್ಬಾಲ್ನ ತನ್ನ ಮೊದಲ ಪಂದ್ಯದಲ್ಲೇ ಪ್ರಬಲ ಚೀನಾ ವಿರುದ್ಧ ಭಾರತ 1-5 ಗೋಲುಗಳ ಅಂತರದ ಹೀನಾಯ ಸೋಲು ಕಂಡಿದೆ.
ಅತಿಯಾದ ದಣಿವು ಹಾಗೂ ಒತ್ತಡ, ತಂಡದ ಆಯ್ಕೆಯಲ್ಲಿ ಗೊಂದಲ ಮತ್ತು ಕೊನೆಯ ಕ್ಷಣದಲ್ಲಿ ಪ್ರಯಾಣ ಬೆಳೆಸಿದ್ದ ಸುನಿಲ್ ಛೆತ್ರಿ ನಾಯಕತ್ವದ ಭಾರತ ತಂಡಕ್ಕೆ ಅಭ್ಯಾಸದ ಕೊರತೆ ಎದ್ದು ಕಾಣಿಸಿತ್ತು.
ಇವೆಲ್ಲದರ ಸ್ಪಷ್ಟ ಲಾಭ ಪಡೆದ ಚೀನಾ ಗೆಲುವು ದಾಖಲಿಸಿದೆ.
ಚೀನಾ ಪರ ಜಿಯಾವೊ ಟಿಯಾನಿ (17ನೇ), ಡೈ ವೀಜುನ್ (51), ಟಾವೊ ಕಿಯಾಂಗ್ಲಾಂಗ್ (72 ಹಾಗೂ 75) ಮತ್ತು ಹಾವೊ ಫಾಂಗ್ (90+2) ನಿಮಿಷಗಳಲ್ಲಿ ಗೋಲುಗಳನ್ನು ಬಾರಿಸಿದರು.
ಭಾರತದ ಪರ ಗೋಲು ದಾಖಲಿಸಿದ ರಾಹುಲ್ ಕೆಪಿ (45+1ನೇ ನಿಮಿಷ) ಸೋಲಿನ ಅಂತರವನ್ನು ತಗ್ಗಿಸಿದರು.
ಎರಡನೇ ಸುತ್ತು ಪ್ರವೇಶಿಸಲು ಭಾರತ ತಂಡವೀಗ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ವಿರುದ್ಧ ನಡೆಯಲಿರುವ ಕೊನೆಯ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.