ಬೆಂಗಳೂರಿನ ಮಹಿಳೆಯರು ದೇಶದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಕ್ಯಾನ್ಸರ್ ಬಾಧಿತರಾಗಿದ್ದು, ಸ್ತನ ಕ್ಯಾನ್ಸರ್ ಪ್ರಕರಣಗಳು ಅತಿ ಹೆಚ್ಚು ಇರುವ ದೇಶದ ಮೊದಲ ಮೂರು ನಗರಗಳಲ್ಲಿ ಕರ್ನಾಟಕದ ರಾಜಧಾನಿಯೂ ಒಂದಾಗಿದೆ ಎಂದು ಅಧ್ಯಯನ ವರದಿ ಹೇಳಿದೆ. ಸ್ತನ ಕ್ಯಾನ್ಸರ್ ಮಾತ್ರವಲ್ಲ, ಗರ್ಭಕಂಠ ಕ್ಯಾನ್ಸರ್ ಮತ್ತು ಬಾಯಿ ಕ್ಯಾನ್ಸರ್ ಪ್ರಕರಣಗಳಲ್ಲೂ ದೇಶದ ಮೊದಲ ಹತ್ತು ನಗರಗಳಲ್ಲಿ ಬೆಂಗಳೂರಿನ ಹೆಸರು ಇದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ವಿಶ್ಲೇಷಣೆಯ ಪ್ರಕಾರ, ಮಹಿಳೆಯರಲ್ಲಿ ಕಂಡು ಬರುತ್ತಿರುವ ಕ್ಯಾನ್ಸರ್ ಪ್ರಕರಣಗಳಲ್ಲಿ ಮಿಜೋರಾಂ ರಾಜಧಾನಿ ಐಜ್ವಾಲ್ ಮೊದಲನೆಯದಾಗಿದ್ದರೆ, ಬೆಂಗಳೂರು ಆರನೆಯದ್ದಾಗಿದೆ. ಇದಕ್ಕೂ ಮೊದಲಿನ ಸ್ಥಾನದಲ್ಲಿ ಹೈದರಾಬಾದ್ ಇದೆ.

ಗರ್ಭಕಂಠ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಹೆಚ್ಚಳ ಬೆಂಗಳೂರಿನ ಮಹಿಳೆಯರಿಗಷ್ಟೇ ಸೀಮಿತವಾಗಿಲ್ಲ. ಇಡೀ ದೇಶದಲ್ಲೇ ಈ ಪ್ರವೃತ್ತಿ ಕಂಡು ಬರುತ್ತಿದೆ ಎಂದು ಅಧ್ಯಯನದ ಅಂಕಿ ಅಂಶಗಳು ಹೇಳಿವೆ.

‘ಭಾರತದ 43 ಕ್ಯಾನ್ಸರ್ ನೋಂದಣಿ ಕೇಂದ್ರಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಮತ್ತು ಮರಣ’ ಎನ್ನುವ ಅಂತರ್ ಶಾಖಾ ಅಧ್ಯಯನ ವರದಿಯಲ್ಲಿ ಮಹಿಳಾ ಮತ್ತು ಪುರುಷ ಕ್ಯಾನ್ಸರ್ ಬಾಧಿತರ ಪ್ರಮಾಣದ ಬಗ್ಗೆ ವಿವರಿಸಲಾಗಿದೆ. ಐಸಿಎಂಆರ್ನ ನ್ಯಾಷನಲ್ ಕ್ಯಾನ್ಸರ್ ರಿಜಿಸ್ಟ್ರಿ ಪ್ರೋಗ್ರಾಮ್ ಇನ್ವೆಸ್ಟಿಗೇಟರ್ ಗ್ರೂಪ್ ದೇಶದ 43 ಜನಸಂಖ್ಯಾ ಆಧಾರಿತ ಕ್ಯಾನ್ಸರ್ ನೋಂದಣಿ ಕೇಂದ್ರಗಳ (ಪಿಬಿಸಿಆರ್) 2015 ಮತ್ತು 2019ರ ನಡುವಿನ ದತ್ತಾಂಶ ಆಧಾರದಲ್ಲಿ ಕ್ಯಾನ್ಸರ್ ಪ್ರಕರಣಗಳ ಪ್ರಮಾಣ ಮತ್ತು ಪ್ರವೃತ್ತಿಗಳನ್ನು ವಿಶ್ಲೇಷಿಸಿದೆ. ಕ್ಯಾನ್ಸರ್, ಜಾಗತಿಕ ಮಟ್ಟದ ಆರೋಗ್ಯ ಸಮಸ್ಯೆಯಾಗಿದ್ದು, ವಾರ್ಷಿಕ ಒಂದು ಕೋಟಿ ಮಂದಿ ಕ್ಯಾನ್ಸರ್ನಿಂದ ಸಾಯುತ್ತಿದ್ದಾರೆ. 2045ರ ಹೊತ್ತಿಗೆ ಜಗತ್ತಿನಲ್ಲಿ ಕ್ಯಾನ್ಸರ್ಪೀಡಿತರ ಸಂಖ್ಯೆ 3.26 ಕೋಟಿಗೆ ಏರಲಿದೆ. ಕ್ಯಾನ್ಸರ್ಪೀಡಿತರ ಪ್ರಮಾಣದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಮೂರನೆಯದಾಗಿದ್ದರೆ, ಏಷ್ಯಾದಲ್ಲಿ ಎರಡನೆಯದ್ದಾಗಿದೆ. ರೋಗದ ಪ್ರಭಾವ ಅಳೆಯುವ ಮತ್ತು ಅದರ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ದೇಶದಲ್ಲಿ ಕ್ಯಾನ್ಸರ್ಗೆ ಸಂಬಂಧಿಸಿದ ಅಂಕಿಅಂಶವನ್ನು ದಾಖಲಿಸುವುದು, ಅದನ್ನು ನಿಯಮಿತವಾಗಿ ಪರಾಮರ್ಶಿಸುವುದು ಮುಖ್ಯವಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಕ್ಯಾನ್ಸರ್ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿಯೂ ದೇಶಕ್ಕೆ ಹೊರೆಯಾಗಿದ್ದು, ಅದನ್ನು ತಪ್ಪಿಸಬಹುದಾಗಿದೆ. ಈ ಮಹಾಮಾರಿಗೆ ಕಾರಣವಾಗಬಹುದಾದ ಧೂಮಪಾನ, ಸ್ಥೂಲಕಾಯ, ಬೊಜ್ಜು ಮತ್ತು ಸೋಂಕು ಮುಂತಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನ ಹರಿಸಿ, ಅವುಗಳ ನಿಯಂತ್ರಣಕ್ಕೆ ಒತ್ತು ನೀಡಬೇಕು. ಈ ಮೂಲಕ ಕ್ಯಾನ್ಸರ್ನಿಂದ ಸಂಭವಿಸುವ ಲಕ್ಷಾಂತರ ಸಾವುಗಳನ್ನು ತಡೆಯಬಹುದು ಎಂದು ವರದಿ ವಿಶ್ಲೇಷಿಸಿದೆ.

ಪ್ರದೇಶವಾರು ವ್ಯತ್ಯಾಸ

ಭಾರತದಲ್ಲಿ ಕ್ಯಾನ್ಸರ್ ಬಾಧಿತರ ಸಂಖ್ಯೆ ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕಂತೆ ಕ್ಯಾನ್ಸರ್ ಸಂಬಂಧಿ ಸಾವುಗಳೂ ಹೆಚ್ಚುತ್ತಿವೆ. ಪುರುಷರಲ್ಲಿ ಬಾಯಿ, ಶ್ವಾಸಕೋಶ ಮತ್ತು ಪ್ರೋಸ್ಟೇಟ್ ಕ್ಯಾನ್ಸರ್ ಹೆಚ್ಚುತ್ತಿದ್ದರೆ, ಮಹಿಳೆಯರಲ್ಲಿ ಸ್ತನ, ಗರ್ಭಕಂಠ ಮತ್ತು ಅಂಡಾಶಯದ ಕ್ಯಾನ್ಸರ್ ವ್ಯಾಪಕವಾಗಿವೆ. ಇವು ದೇಶದಲ್ಲಿ ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕ್ರಮಗಳ ಅಗತ್ಯವನ್ನು ಒತ್ತಿಹೇಳುತ್ತಿವೆ. ಕ್ಯಾನ್ಸರ್ ಪ್ರಕರಣಗಳು ಮತ್ತು ಸಾವುಗಳಲ್ಲಿ ದೇಶದ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿದ್ದರೆ, ಕೆಲವು ಪ್ರದೇಶಗಳಲ್ಲಿ ಕಡಿಮೆ ಇದೆ. ಜತೆಗೆ, ಮಹಾನಗರಗಳಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ.

ದಕ್ಷಿಣದ ನಗರಗಳಲ್ಲಿ...

ಬೆಂಗಳೂರು ಮಾತ್ರವಲ್ಲದೇ, ಹೈದರಾಬಾದ್, ಚೆನ್ನೈ ಹಾಗೂ ಕೇರಳದ ತಿರುವನಂತಪುರ, ಕೊಲ್ಲಂ, ಆಲಪ್ಪುಳ, ಕಾಸರಗೋಡು ಸೇರಿದಂತೆ ದಕ್ಷಿಣ ಭಾರತದ ಹಲವು ನಗರಗಳಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವುದನ್ನು
ವರದಿ ಉಲ್ಲೇಖಿಸಿದೆ.

ಬೆಂಗಳೂರು, ಚೆನ್ನೈ, ವಿಶಾಖಪಟ್ಟಣ, ತಿರುವನಂತಪುರದಂತಹ ಮಹಾನಗರಗಳ ಪುರುಷರಲ್ಲಿ ಶ್ವಾಸಕೋಶ ಕ್ಯಾನ್ಸರ್ ಹೆಚ್ಚು ಪತ್ತೆಯಾಗುತ್ತಿದೆ. ದೆಹಲಿಯಲ್ಲೂ ಈ ಕ್ಯಾನ್ಸರ್ ಪುರುಷರಲ್ಲಿ ಹೆಚ್ಚು ಕಂಡುಬರುತ್ತಿದೆ.

ಬೆಂಗಳೂರಿನಲ್ಲಿ ಪ್ರತಿ ಲಕ್ಷ ಮಹಿಳೆಯರಲ್ಲಿ ಸುಮಾರು 150 ಮಂದಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಲಕ್ಷ ಪುರುಷರಲ್ಲಿ 125ರಷ್ಟು ಜನ ಈ ಕಾಯಿಲೆಗೆ ತುತ್ತಾಗುತ್ತಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.