ಬಾಹ್ಯಾಕಾಶದಲ್ಲಿ ಮನುಷ್ಯರ ಜನನ ಸಾಧ್ಯವೇ? ಅಲ್ಲಿ ಜನಿಸುವ ಶಿಶು ಭ್ರೂಣಾವಸ್ಥೆಯಿಂದ ಜನನದ ನಂತರದಲ್ಲಿ ಏನೆಲ್ಲಾ ಅಪಾಯಗಳನ್ನು ಎದುರಿಸಬೇಕು ಎಂಬುದರ ಕುರಿತು ಪ್ರಯೋಗಗಳು ಆರಂಭಗೊಂಡಿವೆ.

ಲೀಡ್ಸ್: ಮಂಗಳಯಾನ ಯೋಜನೆ ರೂಪುಗೊಳ್ಳುತ್ತಿದ್ದಂತೆ ಮನುಷ್ಯರ ದೇಹವು ಆ ಗ್ರಹದ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳಲಿದೆ ಎಂಬ ಚರ್ಚೆ, ಅಧ್ಯಯನಗಳು ನಡೆದಿವೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ತೆಗೆದುಕೊಂಡು ಹೋದ ಹೆಸರುಕಾಳು ಬೀಜಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಮೊಳಕೆಯೊಡೆಸಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ಅವರ ಪ್ರಯೋಗ ಸುದ್ದಿಯಾಗಿತ್ತು. ಇದೀಗ ಬಾಹ್ಯಾಕಾಶದಲ್ಲಿ ಮನುಷ್ಯರ ಜನನ ಸಾಧ್ಯವೇ? ಅಲ್ಲಿ ಜನಿಸುವ ಶಿಶು ಭ್ರೂಣಾವಸ್ಥೆಯಿಂದ ಜನನದ ನಂತರದಲ್ಲಿ ಏನೆಲ್ಲಾ ಅಪಾಯಗಳನ್ನು ಎದುರಿಸಬೇಕು ಎಂಬುದರ ಕುರಿತು ಪ್ರಯೋಗಗಳು ಆರಂಭಗೊಂಡಿವೆ.

ಕೆಂಪು ಗ್ರಹಕ್ಕೆ ಹೋಗಿ, ಮರಳುವ ಸಮಯದಲ್ಲಿ ಮಹಿಳೆಯೊಬ್ಬರು ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಬಹುದು. ಬಾಹ್ಯಾಕಾಶದಲ್ಲಿ ಗರ್ಭ ಧರಿಸುವುದು, ಜನಿಸಿದ ಮಗುವನ್ನು ಸುರಕ್ಷಿತವಾಗಿ ಕರೆತರುವುದು ಸಾಧ್ಯವೇ? ಭೂಮಿಯಿಂದ ಬಹುದೂರ ಬೇರೊಂದು ಗ್ರಹದಲ್ಲಿ ಶಿಶು ಜನಿಸಿದರೆ ಏನೆಲ್ಲಾ ಸವಾಲುಗಳು ಎದುರಾಗಲಿವೆ? ಎಂಬಿತ್ಯಾದಿ ವಿಷಯಗಳ ಕುರಿತು ಬ್ರಿಟನ್ನ ತಜ್ಞರು ಅಧ್ಯಯನ ನಡೆಸಿದ್ದಾರೆ.

ಶಿಶು ಹುಟ್ಟುವ ಮೊದಲೇ ಭ್ರೂಣವೇ ನಾಶವಾದ ಉದಾಹರಣೆಗಳು ಹೆಚ್ಚು. ಇದರ ಪ್ರಮಾಣ ಮೂರನೇ ಎರಡರಷ್ಟು ಎಂದರೆ ಅಚ್ಚರಿಯಾಗಬಹುದು. ಅದರಲ್ಲೂ ಕೆಲ ಮಹಿಳೆಯರು ತಾವು ಗರ್ಭಿಣಿ ಎಂದು ತಿಳಿಯುವ ಮೊದಲೇ ಭ್ರೂಣವನ್ನು ಕಳೆದುಕೊಂಡಿರುತ್ತಾರೆ. ಭ್ರೂಣವು ಸರಿಯಾಗಿ ಅಭಿವೃದ್ಧಿಯಾಗದಿದ್ದಲ್ಲಿ ಅಥವಾ ಗರ್ಭಾಶಯದಲ್ಲಿ ಸರಿಯಾದ ಸ್ಥಳದಲ್ಲಿ ಸ್ಥಾನ ಕಂಡುಕೊಳ್ಳದಿದ್ದಲ್ಲಿ ಇವೆಲ್ಲಾ ಸಾಧ್ಯತೆಗಳಿವೆ.

ಗರ್ಭಧಾರಣೆಯನ್ನು ಜೈವಿಕ ಮೈಲಿಗಲ್ಲುಗಳ ಸರಪಳಿಯೆಂದೇ ಅರ್ಥೈಸಿಕೊಳ್ಳಬಹುದು. ಇಲ್ಲಿ ಪ್ರತಿಯೊಂದು ಸರಿಯಾದ ಕ್ರಮದಲ್ಲೇ ಆಗಬೇಕು ಹಾಗೂ ಇಲ್ಲಿ ಯಶಸ್ಸಿಗೆ ಸಿಗುವುದು ಕೆಲವೇ ಅವಕಾಶಗಳು. ಭೂಮಿ ಮೇಲೆ ಹಲವಾರು ಕ್ಲಿನಿಕಲ್ ಸಂಶೋಧನೆಗಳು ಮತ್ತು ಜೈವಿಕ ಮಾದರಿಗಳನ್ನು ಆಧರಿಸಿ ಇಂಥ ಕೆಲ ಸಮಸ್ಯೆಗಳನ್ನು ಅವಲೋಕಿಸಬಹುದು. ಆದರೆ ಅಂತರಗ್ರಹದ ವಿಪರೀತ ಎಂಬಂತಹ ಪರಿಸ್ಥಿತಿಯಲ್ಲಿ ಈ ಇಡೀ ಪ್ರಕ್ರಿಯೆ ಹೇಗಿರಲಿದೆ ಎಂಬುದರ ಅಧ್ಯಯನ ನಡೆಯುತ್ತಿದೆ.

ಬಾಹ್ಯಾಕಾಶ ಯಾನದಲ್ಲಿ ಮೊದಲು ಅನುಭವಕ್ಕೆ ಬರುವುದು ತೂಕ ಕಳೆದುಕೊಳ್ಳುವ ಸ್ಥಿತಿ. ಇದನ್ನು ಮೈಕ್ರೊಗ್ರ್ಯಾವಿಟಿ ಎನ್ನುತ್ತಾರೆ. ಇದರಿಂದ ದೈಹಿಕ ಸಮತೋಲನ ಕಾಪಾಡಲು ತುಸು ಕಷ್ಟವೆಂದೆನಿಸಬಹುದು. ಹೀಗಿದ್ದೂ ಭ್ರೂಣವನ್ನು ಗರ್ಭಾಶಯದೊಳಗೆ ಸೇರಿಸಿದ ನಂತರ ಗರ್ಭಿಣಿಗೆ ಹೆಚ್ಚು ಸಮಸ್ಯೆ ಆಗದು ಎಂದು ಅಂದಾಜಿಸಿದ್ದಾರೆ ತಜ್ಞರು.

ಬಾಹ್ಯಾಕಾಶದಲ್ಲಿ ಮಗುವಿನ ಲಾಲನೆ ಪಾಲನೆ...

ಹೆರಿಗೆ ನಂತರ ನವಜಾತ ಶಿಶುವಿನ ಆರೈಕೆಯು ಈ ಶೂನ್ಯ ಗುರುತ್ವಾಕರ್ಷಣ ಶಕ್ತಿ ಇರುವ ಪ್ರದೇಶದಲ್ಲಿ ತುಸು ಕಷ್ಟದ ಕೆಲಸ. ಏಕೆಂದರೆ ಬಾಹ್ಯಾಕಾಶದಲ್ಲಿ ಸ್ಥಿರವಾಗಿ ಯಾವುದೂ ಇರದು. ದ್ರವವೂ ಇಲ್ಲಿ ತೇಲುತ್ತದೆ. ಮನುಷ್ಯರೂ ಹಾಗೇ. ಮಗುವನ್ನು ಹೆರುವುದು ಮತ್ತು ಲಾಲನೆಪಾಲನೆ ಭೂಮಿಗಿಂತ ಕಷ್ಟದ ಕೆಲಸ. ಭೂಮಿಯಲ್ಲಾದರೆ ಮಗುವನ್ನು ಹಿಡಿದುಕೊಳ್ಳುವುದರಿಂದ ಹಿಡಿದು, ಹಾಲುಣಿಸುವವರೆಗೂ ಎಲ್ಲದಕ್ಕೂ ಗುರುತ್ವಾಕರ್ಷಣ ಶಕ್ತಿ ನೆರವಾಗುತ್ತಲಿರುತ್ತದೆ.

ಅದೇ ಸಮಯಕ್ಕೆ, ಬಾಹ್ಯಾಕಾಶದಲ್ಲಿ ಭ್ರೂಣದ ಬೆಳವಣಿಗೆಯೂ ಮೈಕ್ರೊಗ್ರ್ಯಾವಿಟಿಯಲ್ಲೇ ನಡೆಯುತ್ತದೆ. ಗರ್ಭಾಶಯದಲ್ಲಿ ತಟಸ್ಥವಾಗಿರುವ ಆಮ್ನಿಯಾಟಿಕ್ ಫ್ಲ್ಯೂಯಿಡ್ನಲ್ಲಿ ಭ್ರೂಣ ತೇಲುತ್ತಿರುತ್ತದೆ. ಇದು ಒಂದು ರೀತಿಯಲ್ಲಿ ಮೆತ್ತನೆಯ ಅನುಭವ ನೀಡುತ್ತದೆ.

ಬಾಹ್ಯಾಕಾಶ ಯಾನಕ್ಕೂ ಮೊದಲು ಗಗನಯಾನಿಗಳು ನೀರಿನ ತೊಟ್ಟಿಯಲ್ಲಿ ನಡಿಗೆಯನ್ನು ಅಭ್ಯಾಸ ಮಾಡಬೇಕು. ತೂಕ ರಹಿತವಾಗಿ ಜೀವಿಸುವುದು ಹೇಗೆ ಎಂಬ ತರಬೇತಿ ನೀಡಲಾಗುತ್ತದೆ. ಆದರೆ ಭ್ರೂಣವು ಈಗಾಗಲೇ ಗರ್ಭಾಶಯದಲ್ಲಿರುವ ನೀರಿನಲ್ಲಿ ತೇಲುತ್ತಿರುತ್ತದೆ. ಇದರಿಂದ ಅನ್ಯಗ್ರಹದಲ್ಲಿ ಭ್ರೂಣಕ್ಕೆ ಹೆಚ್ಚಿನ ವ್ಯತ್ಯಾಸವಾಗದು ಎಂಬುದು ತಜ್ಞರ ಲೆಕ್ಕಾಚಾರ.

ಭೂಮಿಯ ಹೊರ ರಕ್ಷಣಾ ಪದರದ ಹೊರಗೆ ಕಾಸ್ಮಿಕ್ ಕಿರಣಗಳಿದ್ದು, ಅತಿ ಹೆಚ್ಚು ಶಕ್ತಿಯನ್ನು ಉತ್ಪಾದಿಸುವ ಇವು ಜೀವಕ್ಕೆ ಹಾನಿಕಾರಕ. ಬೆಳಕಿನ ವೇಗದಲ್ಲಿ ಪ್ರವಹಿಸುವ ಇವು ಬಾಹ್ಯಾಕಾಶದ ತುಂಬೆಲ್ಲಾ ತುಂಬಿರುತ್ತವೆ. ಎಲೆಕ್ಟ್ರಾನ್ಸ್ ತುಂಬಿರುವ ಅಣುಗಳು ಇವು. ಪ್ರೊಟಾನ್ಸ್ ಮತ್ತು ನ್ಯೂಟ್ರಾನ್ಸ್ಗಳನ್ನು ತನ್ನೊಳಗೆ ಹೊಂದಿರುತ್ತವೆ. ಇವು ಮನುಷ್ಯರ ದೇಹಕ್ಕೆ ಅಪ್ಪಳಿಸಿದ ತಕ್ಷಣ ಜೀವಕೋಶಗಳು ತೀವ್ರವಾಗಿ ಹಾನಿಗೀಡಾಗುತ್ತವೆ.

ಭೂಮಿಯ ಹೊರಮೈಯಲ್ಲಿರುವ ರಕ್ಷಣಾ ಕವಚವು ಈ ಬಾಹ್ಯಾಕಾಶ ವಿಕರಣವನ್ನು ಇಲ್ಲಿಯ ವಾತಾವರಣ ಪ್ರವೇಶಿಸುವುದರಿಂದ ತಡೆಯುತ್ತದೆ. ಭೂಮಿಯ ಕಾಂತಕ್ಷೇತ್ರದಿಂದ ಹತ್ತಾರು ಮೈಲಿ ದೂರದವರೆಗೂ ಈ ರಕ್ಷಣಾ ಕವಚವನ್ನು ಭೂಮಿ ಹೊಂದಿದೆ. ಅಲ್ಲಿಂದ ಆಚೆಗೆ ಇದು ಇಲ್ಲ. ಅಲ್ಲಿನ ವಿಕರಣವು ದೇಹವನ್ನು ಹೊಕ್ಕು ಡಿಎನ್ಎಗೆ ಬಡಿದಲ್ಲಿ, ಅದು ರೂಪಾಂತರವನ್ನೇ ನಾಶ ಮಾಡಬಲ್ಲದು. ಇದರಿಂದ ಕ್ಯಾನ್ಸರ್ ಅಪಾಯವೂ ಹೆಚ್ಚು.

ಜೀವಕೋಶಗಳು ಬದುಕುಳಿದರೂ, ವಿಕರಣಗಳು ಉರಿಯೂತವನ್ನು ಹೆಚ್ಚಿಸುತ್ತದೆ. ಅಂದರೆ ದೇಹದ ರೋಗನಿರೋಧಕ ಶಕ್ತಿ ಅತಿಯಾಗಿ ಕೆಲಸ ಮಾಡಲಾರಂಭಿಸುತ್ತದೆ. ಅನಗತ್ಯವಾಗಿ ಪ್ರತಿರೋಧ ರಾಸಾಯನಿಕಗಳನ್ನು ಉತ್ಪತ್ತಿ ಮಾಡಿ ದೇಹದ ಜೀವಕೋಶಗಳನ್ನೇ ನಾಶಪಡಿಸುತ್ತದೆ. ಇದರಿಂದ ಅಂಗಾಂಗಗಳ ಕೆಲಸಗಳಿಗೇ ಮಾರಕವಾಗಲಿದೆ.

ಗರ್ಭ ಧರಿಸಿದ ಮೊದಲ ಕೆಲ ವಾರಗಳಲ್ಲಿ ಭ್ರೂಣದ ಜೀವಕೋಶಗಳು ಅತ್ಯಂತ ತ್ವರಿತವಾಗಿ ವಿಭಜನೆಗೊಳಗಾಗುತ್ತಿರುತ್ತವೆ. ಇದರಿಂದ ಜೀವಕೋಶಗಳು ವೇಗವಾಗಿ ರಚನೆಯಾಗುತ್ತಿರುತ್ತದೆ. ದೇಹದ ರಚನೆ ರೂಪುಗೊಳ್ಳುತ್ತಿರುತ್ತದೆ. ಇಂಥ ಅತ್ಯಂತ ನಾಜೂಕಿನ ಕ್ರಿಯೆಯಲ್ಲೂ ಗರ್ಭಾಶಯವು ಸಮರ್ಪಕವಾಗಿರಬೇಕು. ಅದರಲ್ಲೂ ಫಲವಂತಿಕೆಯ ಮೊದಲ ತಿಂಗಳು ಅತ್ಯಂತ ದುರ್ಬಲ ಸಮಯ.

ಬಾಹ್ಯಾಕಾಶದಲ್ಲಿ ಗರ್ಭಧರಿಸಿದ ಮೊದಲ ತಿಂಗಳಲ್ಲೇ ಕಾಸ್ಮಿಕ್ ಕಿರಣಗಳು ದೇಹಕ್ಕೆ ಸೋಕಿದಲ್ಲಿ ಭ್ರೂಣಕ್ಕೆ ಭಾರೀ ಪ್ರಮಾಣದ ನಷ್ಟ ಉಂಟಾಗಲಿದೆ. ಅಪಾಯಕಾರಿ ವಿಕಿರಣಕ್ಕೆ ಹೋಲಿಸಿದರೆ ಭ್ರೂಣ ಬಾರೀ ಸಣ್ಣದು. ಗರ್ಭಪಾತವೂ ಆಗಬಹುದು.

ಅನ್ಯಗ್ರಹದಲ್ಲಿನ ಗರ್ಭಧಾರಣೆಯ ಅಪಾಯಗಳು

ಭ್ರೂಣ ಬೆಳೆಯುತ್ತಾ ಸಾಗಿದಂತೆ ಅಪಾಯದ ಮಟ್ಟವೂ ಹೆಚ್ಚಾಗುತ್ತಲೇ ಸಾಗುತ್ತದೆ. ಗರ್ಭ ಧರಿಸಿದ ಮೊದಲ ಮೂರು ತಿಂಗಳಲ್ಲಿ ತಾಯಿ ಮತ್ತು ಮಗುವನ್ನು ಸಂಪರ್ಕಿಸುವ ರಕ್ತದ ಪರಿಚಲನೆ ವ್ಯವಸ್ಥೆ ಆರಂಭವಾಗುತ್ತದೆ. ಇದರ ನಂತರದಲ್ಲಿ ಗರ್ಭಾಶಯ ಮತ್ತು ಭ್ರೂಣ ಎರಡೂ ವೇಗವಾಗಿ ಬೆಳವಣಿಗೆ ಕಾಣುತ್ತವೆ.

ಇಂಥ ಸಂದರ್ಭದಲ್ಲಿ ಕಾಸ್ಮಿಕ್ ಕಿರಣಗಳು ಗರ್ಭಾಶಯದ ಮಾಂಸಖಂಡಗಳಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚು. ಇದರಿಂದ ಗರ್ಭಾಶಯವು ಸಂಕುಚಿತಗೊಂಡು, ಅವಧಿಪೂರ್ವ ಹೆರಿಗೆಯಾಗುವ ಸಾಧ್ಯತೆಗಳೇ ಹೆಚ್ಚು. ಹೀಗಾದಲ್ಲಿ ನವಜಾತ ಶಿಶುವನ್ನು ಬಾಹ್ಯಾಕಾಶದಲ್ಲಿ ರಕ್ಷಿಸಿಕೊಳ್ಳುವುದು ಬಹುದೊಡ್ಡ ಸವಾಲಿನ ಕೆಲಸ. ಇಂಥ ಮಕ್ಕಳ ರಕ್ಷಣೆಗೆ ಭೂಮಿಯಲ್ಲೇ ಹರಸಾಹಸಪಡಬೇಕು. ಬಾಹ್ಯಾಕಾಶದಲ್ಲಿ ಸವಾಲು ಹಲವು ಪಟ್ಟು ದೊಡ್ಡದಾಗಿರುತ್ತದೆ.

ಯಾವುದೇ ಅಭಿವೃದ್ಧಿಯು ಜನನವನ್ನು ತಡೆಯಲು ಸಾಧ್ಯವಿಲ್ಲ. ಬಾಹ್ಯಾಕಾಶದಲ್ಲಿ ಮಗು ಜನಿಸಿದರೆ ಅದು ಶೂನ್ಯ ಗುರುತ್ವಾಕರ್ಷಣದಲ್ಲೇ ಬೆಳವಣಿಗೆ ಕಾಣಲಿದೆ. ಇದು ದೇಹದ ಭಂಗಿ ಮತ್ತು ಸಂವಹನ ಕ್ರಿಯೆಗೆ ತೊಡಕಾಗಬಹುದು. ಪರಿಸ್ಥಿತಿಯು ಮಗುವನ್ನು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಉತ್ತೇಜಿಸಲಿದೆ. ಕೂರುವುದು, ನಿಲ್ಲುವುದು, ತೆವಳುವುದು ಮತ್ತು ನಡೆಯುವುದನ್ನೂ ಒಳಗೊಂಡು ಗುರುತ್ವಾಕರ್ಷಣ ಶಕ್ತಿಗೆ ಅನುಗುಣವಾಗಿ ಬೆಳವಣಿಗೆ ಕಾಣಲಿದೆ. ಭೂಮಿಯಲ್ಲಿದ್ದಂತೆ ಆಗದಿದ್ದರೂ, ಇರುವ ವಾತಾವರಣಕ್ಕೆ ಹೊಂದಿಕೊಂಡು ಮಗು ಬೆಳವಣಿಗೆ ಕಾಣಲಿದೆ.

ಇಷ್ಟೆಲ್ಲಾ ಆದರೂ, ವಿಕರಣದಿಂದ ಪಾರಾಗುವುದು ಅಸಾಧ್ಯ. ಮಗು ಜನನದ ನಂತರ ಅದರ ಮಿದುಳು ಬೆಳವಣಿಗೆ ಆಗುತ್ತದೆ. ನಿರಂತರವಾಗಿ ಕಾಸ್ಮಿಕ್ ಕಿರಣಗಳಿಗೆ ಒಡ್ಡಿಕೊಂಡಲ್ಲಿ ಅವಧಿಗೆ ಮೊದಲೇ ಹಾನಿಯ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಸ್ಮೃತಿ ಸಾಮರ್ಥ್ಯ, ವರ್ತನೆ ಮತ್ತು ದೀರ್ಘ ಕಾಲದ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಹಾಗಿದ್ದರೆ, ಬಾಹ್ಯಾಕಾಶದಲ್ಲಿ ಮಗು ಜನಿಸಲು ಸಾಧ್ಯವೇ?

ವಿಕರಣಗಳಿಂದ ಭ್ರೂಣವನ್ನು, ಅವಧಿಪೂರ್ವ ಹೆರಿಗೆಯನ್ನು ಮತ್ತು ಮೈಕ್ರೊಗ್ರಾವಿಟಿಯಲ್ಲಿ ಮಗುವಿನ ಬೆಳವಣಿಗೆ ಖಾತ್ರಿಯಾದಲ್ಲಿ ಇದು ಸಾಧ್ಯ. ಆದರೆ ಬಾಹ್ಯಾಕಾಶದಲ್ಲಿ ಗರ್ಭಧರಿಸುವ ಪ್ರಯೋಗ ಅತ್ಯಂತ ಅಪಾಯಕಾರಿ. ಇದಕ್ಕೆ ಇನ್ನಷ್ಟೇ ನಾವು ಸಿದ್ಧವಾಗಬೇಕು ಎನ್ನುತ್ತಾರೆ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.