ಶುಕ್ರವಾರ, ಜುಲೈ 30, 2021
28 °C
ಫ್ಯಾಕ್ಟ್‌ಚೆಕ್

ಲಡಾಖ್ ಸಂಘರ್ಷದ್ದು ಎಂದು ಹಂಚಲಾದ ಚಿತ್ರ ನೈಜೀರಿಯಾ ಸೈನಿಕರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Fact check

ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾ ಸೈನಿಕರ ಜತೆ ನಡೆದ ಸಂಘರ್ಷದಲ್ಲಿ ಭಾರತದ 35 ಸೈನಿಕರು ಮೃತಪಟ್ಟಿದ್ದಾರೆ. ಭಾರತೀಯ ಸೇನೆಗೆ ಭಾರಿ ಹಾನಿ ಸಂಭವಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಶ್ಮೀರಿ ಅಪ್‌ಡೇಟ್ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಈ ಸುದ್ದಿಯನ್ನು ಮೊದಲು ಪೋಸ್ಟ್ ಮಾಡಲಾಗಿದೆ. ನೂರಾರು ಸೈನಿಕರ ಶವಗಳನ್ನು ಒಂದೆಡೆ ಸಾಲಾಗಿ ಮಲಗಿಸಿರುವ ಚಿತ್ರವೂ ಈ ಪೋಸ್ಟ್‌ನಲ್ಲಿದೆ. ಈ ಚಿತ್ರವೂ ಫೇಸ್‌ಬುಕ್‌, ಟ್ವಿಟರ್‌ ಮತ್ತು ಟಿಕ್‌ಟಾಕ್‌ನಲ್ಲಿ ವೈರಲ್ ಆಗಿದೆ.

ಆದರೆ, ಈ ಚಿತ್ರಕ್ಕೂ ಲಡಾಖ್‌ನಲ್ಲಿನ ಸಂಘರ್ಷಕ್ಕೂ ಸಂಬಂಧವಿಲ್ಲ ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ. ರಿವರ್ಸ್ ಇಮೇಜ್ ಸರ್ಚ್‌ ಮೂಲಕ ಈ ಚಿತ್ರವನ್ನು ಪರಿಶೀಲಿಸಿದಾಗ, ಅದು ನೈಜೀರಿಯಾಕ್ಕೆ ಸಂಬಂಧಿಸಿದ ಚಿತ್ರ, 2015ರದ್ದು ಎಂಬುದು ಪತ್ತೆಯಾಗಿದೆ. ಬೊಕೊಹರಮ್ ಉಗ್ರರ ಜತೆಗಿನ ಕಾದಾಟದಲ್ಲಿ ಮೃತಪಟ್ಟಿದ್ದ 105 ಸೈನಿಕರ ಶವಗಳ ಅಂತ್ಯಕ್ರಿಯೆಯನ್ನು ಅಲ್ಲಿನ ಸೇನೆ ರಹಸ್ಯವಾಗಿ ನಡೆಸಿತ್ತು. ಈ ಚಿತ್ರವನ್ನೇ ತಿರುಚಿ, ಗಾಲ್ವನ್‌ ಸಂಘರ್ಷಕ್ಕೆ ತಳಕು ಹಾಕಿ ಪೋಸ್ಟ್ ಮಾಡಲಾಗಿದೆ. ಇದು ಸುಳ್ಳು ಸುದ್ದಿ ಎಂದು ಆಲ್ಟ್‌ನ್ಯೂಸ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು