ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸಿನ ಬೀಜದ ಖಾದ್ಯಗಳು ವಿಧವಿಧ

Last Updated 30 ಮೇ 2020, 3:07 IST
ಅಕ್ಷರ ಗಾತ್ರ
ADVERTISEMENT
""
""
""

ಹಲಸಿನ ಹಣ್ಣಿನ ಹೆಸರು ಕೇಳಿದಾಕ್ಷಣ ಬಾಯಲ್ಲಿ ನೀರೂರುತ್ತದೆ. ಇದರ ಪರಿಮಳಕ್ಕೆ ಸಾಟಿಯಿಲ್ಲ. ಬರೀ ಹಲಸಿನ ಹಣ್ಣಿನಲ್ಲಿ ಬಗೆ ಬಗೆ ತಿನಿಸುಗಳನ್ನು ತಯಾರಿಸುವುದು ಎಲ್ಲರಿಗೂ ಗೊತ್ತು. ಆದರೆ ಬೀಜದಿಂದಲೂ ಅನೇಕ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದು ರುಚಿಯೂ ಹೌದು, ಪೌಷ್ಟಿಕಾಂಶಗಳ ಆಗರ ಕೂಡ ಎನ್ನುತ್ತಾರೆ ಸೌಖ್ಯ ಮೋಹನ್ ತಲಕಾಲುಕೊಪ್ಪ.

ಹಲಸಿನ ಬೀಜದ ವಡೆ

ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ – 2 ಕಪ್, ಉಪ್ಪು, ಹುರಿದ ಶೇಂಗಾ ಪುಡಿ – ಮೂರು-ನಾಲ್ಕು ಚಮಚ, ಅಕ್ಕಿಹಿಟ್ಟು – 2 ಚಮಚ, ರವೆ – 3-4 ಚಮಚ, ಈರುಳ್ಳಿ – 2, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಎಣ್ಣೆ

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ಬೇಯಿಸಿ, ಸಿಪ್ಪೆ ತೆಗೆದು ಸ್ವಲ್ಪ ನೀರು ಹಾಕಿ ರುಬ್ಬಿ. ಅದಕ್ಕೆ ಶೇಂಗಾಪುಡಿ, ಉಪ್ಪು, ಅಕ್ಕಿಹಿಟ್ಟು, ರವೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು ಹಾಕಿ. ಕಲೆಸುವಾಗ 2 ಚಮಚ ಎಣ್ಣೆ ಸೇರಿಸಿ. ಉಂಡೆ ಮಾಡಿ, ತಟ್ಟಿ ಎಣ್ಣೆಯಲ್ಲಿ ಕರಿಯಿರಿ. ಇದು ತಿನ್ನಲು ಬಲು ರುಚಿ.

ಕರ್ಜಿಕಾಯಿ

ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ – 20, ಬೆಲ್ಲ – ಸಿಹಿಗೆ, ಏಲಕ್ಕಿ ಪುಡಿ, ತುಪ್ಪ, ಒಣಹಣ್ಣುಗಳು (ಬೇಕಾದರೆ), ಚಿಟಿಕೆ ಉಪ್ಪು

ಕಣಕಕ್ಕೆ: ಚಿರೋಟಿ ರವೆ, ಉಪ್ಪು, ಗೋಧಿ ಹಿಟ್ಟು – 2 ಚಮಚ, ಎಣ್ಣೆ – 2 ಚಮಚ, ಕರಿಯಲು ಎಣ್ಣೆ

ಕರ್ಜಿಕಾಯಿ

ತಯಾರಿಸುವ ವಿಧಾನ: ಹೂರಣಕ್ಕೆ– ಹಲಸಿನ ಬೀಜವನ್ನು ಬೇಯಿಸಿ ಸಿಪ್ಪೆ ತೆಗೆದು ರುಬ್ಬಿ ಅದಕ್ಕೆ ಬೆಲ್ಲ ಹಾಕಿ ಒಲೆಯ ಮೇಲಿಟ್ಟು ಗಟ್ಟಿ ಮಾಡಿ. ಇದಕ್ಕೆ ಚಿಟಿಕೆ ಉಪ್ಪು ಹಾಕಿ. ತುಪ್ಪದಲ್ಲಿ ಹುರಿದ ಒಣಹಣ್ಣುಗಳನ್ನು ಹಾಕಿ ಚೆನ್ನಾಗಿ ತಿರುಗಿಸಿ.

ಕಣಕದ ಸಾಮಗ್ರಿಗಳನ್ನು ಗಟ್ಟಿ ಕಲೆಸಿ ಕಣಕ ತಯಾರಿಸಿ. ಅರ್ಧ ಗಂಟೆ ಮುಚ್ಚಿಡಿ. ನಂತರ ಇದನ್ನು ಸಣ್ಣ ಉಂಡೆ ಮಾಡಿ ಚಿಕ್ಕದಾಗಿ ಲಟ್ಟಿಸಿ. ಒಳಗೆ ಹೂರಣವನ್ನು ತುಂಬಿ ಮಡಚಿ ತುದಿಯನ್ನು ಮುಚ್ಚಿ. ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಕರಿಯಿರಿ.

ಮಸಾಲೆ ಚಪಾತಿ

ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ – 2 ಕಪ್, ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ, ಅರಿಸಿನ ಪುಡಿ, ಉಪ್ಪು, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ತುಪ್ಪ/ಎಣ್ಣೆ, ಚಪಾತಿ ಹಿಟ್ಟು

ಮಸಾಲೆ ಚಪಾತಿ

ತಯಾರಿಸುವ ವಿಧಾನ: ಹಲಸಿನ ಬೀಜವನ್ನು ಬೇಯಿಸಿ ಮೇಲಿನ ಸಿಪ್ಪೆ ತೆಗೆದು ರುಬ್ಬಿ. ರುಬ್ಬುವಾಗ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಸಿನ ಪುಡಿ, ಉಪ್ಪು, ಮೆಣಸಿನ ಪುಡಿ ಸೇರಿಸಿ. ಗಟ್ಟಿಯಾದರೆ ಸ್ವಲ್ಪ ನೀರು ಸೇರಿಸಿಕೊಳ್ಳಬಹುದು. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ. ಚೆನ್ನಾಗಿ ಕಲೆಸಿಕೊಳ್ಳಿ. ಇದನ್ನು ಉಂಡೆ ಮಾಡಿಟ್ಟುಕೊಳ್ಳಿ. ಚಪಾತಿಗೆ ಕಲೆಸಿದ ಹಿಟ್ಟಿನ ಉಂಡೆಯ ಒಳಗೆ ತುಂಬಿಸಿ ಲಟ್ಟಿಸಿ. ತುಪ್ಪ/ಎಣ್ಣೆ ಹಾಕಿ ಬೇಯಿಸಿ. ಇದರಲ್ಲಿ ಶುಂಠಿ-ಬೆಳ್ಳುಳ್ಳಿಯ ಬದಲು ಗರಂ ಮಸಾಲವನ್ನೂ ಸೇರಿಸಿಕೊಳ್ಳಬಹುದು.

ಹಲಸಿನ ಬೀಜದ ಹಯಗ್ರೀವ

ಬೇಕಾಗುವ ಸಾಮಗ್ರಿಗಳು: ಹಲಸಿನ ಬೀಜ – 2 ಕಪ್, ಬೆಲ್ಲ – ಮುಕ್ಕಾಲು ಕಪ್, ತುಪ್ಪ – ನಾಲ್ಕೈದು ಚಮಚ, ಚಿಟಿಕೆ – ಉಪ್ಪು, ಗೋಡಂಬಿ

ಹಲಸಿನ ಬೀಜದ ಹಯಗ್ರೀವ

ತಯಾರಿಸುವ ವಿಧಾನ: ಮೊದಲು ಹಲಸಿನ ಬೀಜವನ್ನು ಬೇಯಿಸಿ ಮೇಲಿನ ಬಿಳಿಯ ಸಿಪ್ಪೆಯನ್ನು ತೆಗೆದುಕೊಳ್ಳಬೇಕು. ನಂತರ ಅದನ್ನು ಕತ್ತರಿಸಿ (ಚಿಕ್ಕದಾಗಿ) ಅಥವಾ ಅರೆ ಜಜ್ಜಿದರೂ ಆದೀತು. ಆಮೇಲೆ ಬಾಣಲೆಗೆ ಬೀಜವನ್ನು ಹಾಕಿ ಅದಕ್ಕೆ ಸಿಹಿಯಾಗಲು ಬೇಕಾದಷ್ಟು ಬೆಲ್ಲವನ್ನು ಹಾಕಿ. ಮಲೆನಾಡಿನ ಜೋನಿಬೆಲ್ಲವಾದರೆ ಮುಕ್ಕಾಲು ಕಪ್ ಸಾಕು. ಚೆನ್ನಾಗಿ ಕೈಯಾಡಿಸಿ. ಚಿಟಿಕೆ ಉಪ್ಪು, ತುಪ್ಪ ಹಾಕಿ ಕೈಯಾಡಿಸಿ. ತುಪ್ಪದಲ್ಲಿ ಹುರಿದ ಗೋಡಂಬಿ ಸೇರಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT