ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಂದನ | ಸಹಜ ಹೆರಿಗೆ: ಆತಂಕ ಬೇಡ

Published 17 ಮೇ 2024, 23:30 IST
Last Updated 17 ಮೇ 2024, 23:30 IST
ಅಕ್ಷರ ಗಾತ್ರ

ಮದುವೆಯಾಗಿ ಎರಡು ವರ್ಷವಾಗಿದೆ. ನಾಲ್ಕು ತಿಂಗಳ ಗರ್ಭಿಣಿ. ವೈದ್ಯರು ಕಬ್ಬಿಣ ಮತ್ತು ಕ್ಯಾಲ್ಸಿಯಂ ಮಾತ್ರೆ ಬರೆದುಕೊಟ್ಟಿದ್ದಾರೆ. ಈ ಮಾತ್ರೆ ತೆಗೆದುಕೊಂಡರೆ ಮಗುವಿನ ತೂಕ ಹೆಚ್ಚುತ್ತದೆ ಎಂದು ಹೇಳುತ್ತಿದ್ದಾರೆ. ನನಗೆ ಸಹಜವಾಗಿ ಹೆರಿಗೆ ಆಗಬೇಕು ಅಂತಿದೆ. ಆದರೆ ನೋವಿನ ಬಗ್ಗೆ ಭಯವಿದೆ.

–ಮಹಾಲಕ್ಷ್ಮಿ, ಮೈಸೂರು

ನೋವಿನ ಭಯವೇ ನಿಜವಾದ ನೋವಿಗಿಂತ ಹೆಚ್ಚು ತೊಂದರೆ ಕೊಡುತ್ತದೆ. ಸಹಜ ಹೆರಿಗೆಯ ಬಗ್ಗೆ, ನೋವಿನ ಅನುಭವಗಳ ಬಗ್ಗೆ ಹೆಚ್ಚು ಚಿಂತಿಸದೆ ಸಹಜ ಹೆರಿಗೆಯಾಗುತ್ತದೆ ಎಂದು ದೃಢವಾಗಿ ನಂಬಿ. ಸಹಜ ಹೆರಿಗೆಯು ಹೆರಿಗೆ ಸಮಯದಲ್ಲಿ ಮಗುವಿನ ತೂಕ ಎಷ್ಟಿದೆ? ಮಗುವಿನ ತಲೆಯ ಭಾಗ ಕಿಳ್ಗುಳಿ (ಪೆಲ್ವಿಸ್) ಒಳಹೋಗಿದೆಯೇ? ಗರ್ಭಕೊರಳು ಅಗಲವಾಗಿದೆಯೇ? ನಿಮ್ಮ ಶ್ರೋಣಿ ವ್ಯಾಸಗಳು ಸರಿಯಾಗಿದೆಯೇ? ಎಂಬುದರ ಮೇಲೆ ಅವಲಂಬನೆಯಾಗಿರುತ್ತದೆ. ಇದರ ಜೊತೆಗೆ ಹೆರಿಗೆ ನೋವಿನ ಸಂದರ್ಭದಲ್ಲಿ ಶ್ರೋಣಿಯ ಸ್ನಾಯುಗಳ ಬಲ ಎಷ್ಟಿದೆ, ನೀವು ಅದಕ್ಕೆ ಎಷ್ಟು ಸಹಕರಿಸುತ್ತೀರಾ? ನಿಮ್ಮಲ್ಲಿಯೇ ಹೆಚ್ಚು ಒತ್ತಡದ ಮನಸ್ಥಿತಿ ಇದ್ದರೆ ಚೆನ್ನಾಗಿ ಹೆರಿಗೆ ನೋವು ಬಂದರೂ ಗರ್ಭಕೊರಳು ಅಗಲವಾಗದೇ ಹೆರಿಗೆ ತಡವಾಗಬಹುದು. ಒತ್ತಡರಹಿತ, ಮನಸ್ಥಿತಿಯು ಹೆರಿಗೆಯ ಮುನ್ನ ಹಾಗೂ ಹೆರಿಗೆಯಾಗುವ ಹಂತದಲ್ಲಿ ಸಹಜ ಹೆರಿಗೆಗೆ ಬಹಳ ಮುಖ್ಯ ಎಂಬುದನ್ನು ಗಮನಿಸಿ.

ಇನ್ನು ಕಬ್ಬಿಣಾಂಶವಿರುವ ಮಾತ್ರೆಗಳು ರಕ್ತಹೀನತೆಯನ್ನು ಸರಿಪಡಿಸುತ್ತದೆ ಹೊರತು ಮಗುವಿನ ತೂಕ ಹೆಚ್ಚಾಗುವುದಿಲ್ಲ. ಕ್ಯಾಲ್ಸಿಯಂ ಮಾತ್ರೆಗಳು ಮೂಳೆ ಹಾಗೂ ಸ್ನಾಯುಗಳಿಗೆ ಬಲ ಕೊಡುತ್ತದೆ. ಈ ಮಾತ್ರೆಗಳನ್ನು ಮುಂದುವರಿಸಿ. ಪ್ರೊಟೀನ್‌ಯುಕ್ತ, ನಾರಿನಾಂಶವುಳ್ಳ ಆಹಾರವನ್ನು ಹೆಚ್ಚು ಸೇವಿಸಿ. ನಿತ್ಯ 40 ನಿಮಿಷ ವಾಕಿಂಗ್‌ ಮಾಡಿ. ಬದ್ಧಕೋಣಾಸನ, ಸೇತುಬಂಧಾಸನ, ಚಕ್ಕಿಚಲನಾಸನ ಜತೆಗೆ ದೀರ್ಘ ಉಸಿರಾಟ, ನಾಡಿಶೋಧನ, ಭ್ರಮರಿ ಪ್ರಾಣಾಯಾಮಗಳನ್ನು ತಜ್ಞರಿಂದ ಕಲಿತು ಮಾಡಿ. ಸಹಜ ಹೆರಿಗೆಗೆ ಸಹಾಯವಾಗುತ್ತದೆ.

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT