ಒಂದು ಅಂದಾಜಿನ ಪ್ರಕಾರ, ದೇಹದಲ್ಲಿ ಕಂಡುಬರುವ ಗಡ್ಡೆಗಳ ಪೈಕಿ ಶೇ 9ರಷ್ಟು ಮಿದುಳಿನಲ್ಲಿಯೇ ಕಂಡುಬರುತ್ತವೆ.

‘ಮಿದುಳುಗಡ್ದೆ’ (‘ಬ್ರೈನ್ ಟ್ಯೂಮರ್’) – ಈ ಪದವೇ ಜನರಲ್ಲಿ ಭಯವನ್ನು ಮೂಡಿಸುತ್ತದೆ. ಮಿದುಳಿನಲ್ಲಿ ಗಡ್ಡೆ ಬೆಳೆದುಕೊಂಡಿದೆ ಎಂದಾಕ್ಷಣ ರೋಗಿಯ ಜೀವಿತಾವಧಿ ಕಡಿಮೆ ಎಂದು ಭಾವಿಸಬೇಕಿಲ್ಲ. ಎಲ್ಲ ಮಿದುಳುಗಡ್ಡೆಗಳು ಕ್ಯಾನ್ಸರ್ ಅಲ್ಲ. ಕಳೆದೊಂದು ದಶಕದಲ್ಲಿ ನರಶಸ್ತ್ರಚಿಕಿತ್ಸಾ ವಿಧಾನದಲ್ಲಿ ಆಗಿರುವಂಥ ಅದ್ಭುತ ಸಂಶೋಧನೆಗಳಿಂದ ಮಿದುಳುಗಡ್ಡೆಯ ಚಿಕಿತ್ಸಾ ವಿಧಾನಗಳು ಹೆಚ್ಚು ಫಲಕಾರಿಯಾಗುತ್ತಿವೆ.

ಕೆಲವು ಸಲ ತಲೆನೋವು, ವಾಂತಿ, ದೃಷ್ಟಿದೋಷ, ಅಪಸ್ಮಾರದಿಂದ ಬಳಲುತ್ತಿರುವ ರೋಗಿಗಳು ನರತಜ್ಞರಲ್ಲಿ ಪರೀಕ್ಷೆ ಮಾಡಿಸಲೂ ಹೆದರುತ್ತಾರೆ. ಒಂದು ಅಂದಾಜಿನ ಪ್ರಕಾರ, ದೇಹದಲ್ಲಿ ಕಂಡುಬರುವ ಗಡ್ಡೆಗಳ ಪೈಕಿ ಶೇ 9ರಷ್ಟು ಮಿದುಳಿನಲ್ಲಿ ಕಂಡುಬರುತ್ತವೆ.

ರೋಗಲಕ್ಷಣಗಳು

ಮಿದುಳಿನ ಗಡ್ಡೆ ಗಾತ್ರ ದೊಡ್ಡದಾದಂತೆ ತೀವ್ರವಾದ, ನಿರಂತರ ತಲೆನೋವು ಬರಬಹುದು. ಬೆಳಿಗ್ಗೆ ಎದ್ದ ಕೂಡಲೇ ವಾಂತಿಯಾಗುವುದು, ದೃಷ್ಟಿ ಮಂದವಾಗುವುದು; ಜೊತೆಗೆ ಫಿಟ್ಸ್ ಬರಬಹುದು. ಇನ್ನೊಂದು ಗುಂಪಿನ ರೋಗಲಕ್ಷಣಗಳು, ಮಿದುಳಿನ ಯಾವ ಭಾಗದಲ್ಲಿ ಗಡ್ಡೆ ಒತ್ತಡವನ್ನು ಉಂಟುಮಾಡುತ್ತಿದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ. ಗಡ್ಡೆಯು ಕೈ ಅಥವಾ ಕಾಲಿನ ಚಲನವಲನದ ಕ್ಷೇತ್ರದಲ್ಲಿದ್ದರೆ, ಆ ಭಾಗ ನಿಷ್ಕ್ರಿಯವಾಗಿ ಚೈತನ್ಯವನ್ನು ಕಳೆದುಕೊಳ್ಳಬಹುದು. ಗಡ್ಡೆ ಮಾತನಾಡುವ ಕ್ಷೇತ್ರದಲ್ಲಿದ್ದರೆ, ಮಾತಿನಲ್ಲಿ ಏರುಪೇರಾಗಬಹುದು. ಎಷ್ಟೊಂದು ರೋಗಿಗಳು ಇದನ್ನು ಕೇವಲ ಪಾರ್ಶ್ವವಾಯು ಎಂದು ಕಡೆಗಣಿಸಿ, ಬೇರೆ ಚಿಕಿತ್ಸಾ ವಿಧಾನಗಳನ್ನು ತೆಗೆದುಕೊಳ್ಳುವ ಉದಾಹರಣೆಗಳುಂಟು. ಗಡ್ಡೆಯು ಮಿದುಳಿನ ಮುಂಭಾಗದಲ್ಲಿದ್ದರೆ ವ್ಯಕ್ತಿಯ ನಡವಳಿಕೆಯಲ್ಲಿ ವಿಪರೀತ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇದೆ; ವ್ಯಕ್ತಿ ಬುದ್ಧಿಭ್ರಮಣೆಗೆ ಈಡಾದವನಂತೆ ಕಾಣಬಹುದು. ಗಡ್ಡೆ ಪಿಟ್ಯುಟರಿಗ್ರಂಥಿಯಲ್ಲಿ ಕಂಡುಬಂದರೆ, ರಾಸಾಯನಿಕ ರಸದೂತಗಳ ಉತ್ಪತ್ತಿಯಲ್ಲಿ ಏರುಪೇರಾಗಬಹುದು; ಕಣ್ಣಿನ ದೃಷ್ಟಿ ಮಂದವಾಗಬಹುದು.

ಗ್ಲಯೋಮಾ ಗಡ್ಡೆಗಳು

ಪ್ರಾಥಮಿಕ ಗಡ್ಡೆಗಳ ಪೈಕಿ ಮಿದುಳಿನ ಜೀವಕೋಶಗಳಿಂದ ಉದ್ಭವವಾಗುವ ಗ್ಲಯೋಮಾ ಗಡ್ಡೆಗಳು ಬಹುಸಾಮಾನ್ಯ (ಶೇ 60-65). ಕೆಲವೊಂದು ಗಡ್ಡೆಗಳು ಮಿದುಳಿನ ಹೊರಪೊರೆಗಳಿಂದ ಹುಟ್ಟಬಹುದು (ಮೆನಿಂಜಿಯೋಮಾ). ಕೆಲವು ಗಡ್ಡೆಗಳು ಪಿಟ್ಯುಟರಿ ಗ್ರಂಥಿಗಳಿಂದ ಹುಟ್ಟುತ್ತವೆ. ಈ ಗ್ಲಯೋಮಾ ಗಡ್ಡೆಗಳಲ್ಲಿ ಬಹಳಷ್ಟು ವಿಷಮ ಗಡ್ಡೆಗಳಾಗಿ (Malignant) ಬೆಳೆಯುತ್ತವೆ. ಇವು ಮನುಷ್ಯನನ್ನು ಕೆಲವೇ ತಿಂಗಳಲ್ಲಿ ಸಾವಿಗೆ ನೂಕುತ್ತವೆ. ಇವುಗಳು ಗ್ರೇಡ್ ಮೂರು ಅಥವಾ ನಾಲ್ಕನೆಯ ಹಂತದಲ್ಲಿದ್ದರೆ ಶಸ್ತ್ರಚಿಕಿತ್ಸೆಯ ಜೊತೆಗೆ ವಿಕಿರಣ ಚಿಕಿತ್ಸೆ ಹಾಗೂ ಕೀಮೊಥೆರಪಿಗಳ ಮೊರೆ ಹೋಗಬೇಕಾಗುತ್ತದೆ.

ಪರೀಕ್ಷಾವಿಧಾನ

ಮಿದುಳಿನಲ್ಲಿ ಗಡ್ಡೆ ಇದೆ ಎಂದು ಸಾಬೀತಾದಲ್ಲಿ ನರಶಸ್ತ್ರಚಿಕಿತ್ಸಕರು ಸಮರ್ಪಕವಾದ ಚಿಕಿತ್ಸೆಯನ್ನು ನೀಡಬಲ್ಲರು. ರೋಗಿಯಿಂದ ವಿವರವಾದ ರೋಗಲಕ್ಷಣಗಳ ಮಾಹಿತಿ ಪಡೆದುಕೊಂಡ ನಂತರ, ನರಶಸ್ತ್ರಚಿಕಿತ್ಸಕ, ರೋಗಿಯ ದೇಹದ ನರಗಳ ವಿಸ್ತೃತವಾದ ಪರೀಕ್ಷೆ ಮಾಡುತ್ತಾರೆ. ದೇಹದ ಯಾವುದೇ ಭಾಗದಲ್ಲಿ ನಿಷ್ಕ್ರಿಯತೆ ಇದೆಯೇ? ಕಣ್ಣಿನ ಹಾಗೂ ಶ್ರವಣಶಕ್ತಿಯ ವೈಪರೀತ್ಯ ಇದೆಯೇ? ಮಾನಸಿಕ ಕ್ರಿಯೆಗಳಲ್ಲಿ ಏನಾದರೂ ಏರುಪೇರುಗಳಿವೆಯೇ ? ಎಂಬುದನ್ನು ಪರೀಕ್ಷೆಯ ಮುಖಾಂತರ ದೃಢೀಕರಿಸಿಕೊಂಡು, ಮಿದುಳಿನ ಸ್ಕ್ಯಾನಿಂಗ್ ತೆಗೆಸುತ್ತಾರೆ. ‘ಸಿಟಿ’ ಅಥವಾ ‘ಎಂಆರ್ಐ’ ಸ್ಕ್ಯಾನಿಂಗ್ನಲ್ಲಿ ಗಡ್ಡೆಯ ಬಹುಸ್ಪಷ್ಟವಾದ ಮಾಹಿತಿ ದೊರೆಯುತ್ತದೆ. ‘ಫಂಕ್ಷನಲ್ ಎಂಆರ್ಐ.’ ಅತ್ತ್ಯಾಧುನಿಕ ತಪಾಸಣಾ ವ್ಯವಸ್ಥೆ. ಮಿದುಳಿನಲ್ಲಿರುವ ಗಡ್ಡೆ, ಮಾತನಾಡುವ ಕೇಂದ್ರ , ದೃಷ್ಟಿಕೇಂದ್ರ, ಕೈ–ಕಾಲುನಿಯಂತ್ರಣ ಕೇಂದ್ರಗಳಿಗೆ ಎಷ್ಟು ಸನಿಹದಲ್ಲಿದೆ ಎಂಬುದರ ಸ್ಪಷ್ಟ ಚಿತ್ರಣವು ಶಸ್ತ್ರಚಿಕಿತ್ಸೆಯ ಮೊದಲೇ ಲಭಿಸುತ್ತದೆ.

ನರಶಸ್ತ್ರಚಿಕಿತ್ಸೆ

ಕೆಲವೊಮ್ಮೆ ಗಡ್ಡೆಗಳು ಈ ನಿಯಂತ್ರಣ ಕೇಂದ್ರದಲ್ಲಿ ಅಥವಾ ಅದರ ಸನಿಹದಲ್ಲಿದ್ದಾಗ ಅವುಗಳನ್ನು ಶಸ್ತ್ರಚಿಕಿತೆಯ ಮೂಲಕ ತೆಗೆಯುವುದು ಒಂದು ದೊಡ್ಡ ಸವಾಲು. ಶಸ್ತ್ರಕ್ರಿಯೆ ನಂತರ ದೇಹದಲ್ಲಿ ನ್ಯೂನತೆಗಳು ಕಂಡುಬರಬಹುದು. ಹೀಗಾಗಿ ಎಚ್ಚರ ಸ್ಥಿತಿಯಲ್ಲಿ ಇರುವಾಗಲೇ ಮಿದುಳಿನ ಶಸ್ತ್ರಚಿಕಿತ್ಸೆಯನ್ನು ಮಾಡುವುದು ಬಲು ಪ್ರಯೋಜನಕಾರಿ. ಅರವಳಿಕೆ ವಿಧಾನದಲ್ಲಿ ಆಗಿರುವ ಬೆಳವಣಿಗೆಗಳಿಂದ ರೋಗಿ ಎಚ್ಚರದ ಸ್ಥಿತಿಯಲ್ಲಿ ಇದ್ದಾಗಲೂ ಅವನಿಗೆ ನೋವಾಗದಂತೆ ನರಶಸ್ತ್ರಚಿಕಿತ್ಸೆಯನ್ನು ಮಾಡಬಹುದಾಗಿದೆ. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರೋಗಿಯನ್ನು ಮಾತನಾಡಿಸುತ್ತಾ, ಸೂಕ್ಷ್ಮ ವಿದ್ಯುತ್ ತರಂಗಗಳಿಂದ ಮಿದುಳಿನ ಮುಖ್ಯ ಕೇಂದ್ರಗಳನ್ನು ಕಂಡುಹಿಡಿಯಬಹುದಾಗಿದೆ. ‘ನ್ಯೂರೊನಾವಿಗೇಷನ್’ ತಂತ್ರಜ್ಞಾನದ ಆವಿಷ್ಕಾರದಿಂದ ಮಿದುಳುಗಡ್ಡೆಯ 3-ಡಿ ಚಿತ್ರಣ ಲಭ್ಯವಾಗುತ್ತದೆ. ಸುರಕ್ಷಿತ ಹಾಗೂ ಸನಿಹದ ದಾರಿ ತೋರುವ ಈ ವ್ಯವಸ್ಥೆ ನಿಜಕ್ಕೂ ಪರಿಣಾಮಕಾರಿ.

ನರಶಸ್ತ್ರಚಿಕಿತ್ಸೆಯ ನಂತರ, ಗಡ್ಡೆಯನ್ನು ಅದರ ರೋಗಲಕ್ಷಣ ಅಧ್ಯಯನಗೋಸ್ಕರ ಹಿಸ್ಟೊಪೆಥಾಲಾಜಿ ರಿಪೋರ್ಟ್ಗೆ ಕಳಿಸಲಾಗುತ್ತದೆ. ಇವು ಗ್ಲಯೋಮಾ ಆಗಿದ್ದಲ್ಲಿ , ಗ್ರೇಡ್ 3 ಅಥವಾ 4ನೇ ಗಡ್ಡೆಗಳಿಗೆ ವಿಕಿರಣ ಚಿಕಿತ್ಸೆ ಮತ್ತು ಔಷಧಚಿಕಿತ್ಸೆ ಬಹು ಮುಖ್ಯ; ಇಲ್ಲವಾದಲ್ಲಿ ಈ ಕ್ಯಾನ್ಸರ್ ಕಣಗಳು ಮತ್ತೆ ಉಲ್ಬಣಗೊಂಡು ತೊಂದರೆ ಕೊಡಬಹುದು. ಮಿದುಳಿನ ಹೊರಪೊರೆಗಳಿಂದ ಬಂದಿರುವ ಗಡ್ಡೆಗಳಾಗಿದ್ದಲ್ಲಿ , ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು.

ಮೆದುಳಿನ ಗಡ್ಡೆಯ ಶಸ್ತ್ರಚಿಕಿತ್ಸೆ ಆದ ನಂತರ ವ್ಯಕ್ತಿಯಲ್ಲಿ ಕೆಲವು ದೈಹಿಕ ನ್ಯೂನತೆಗಳಿಂದ ಅವನ ಕೆಲವು ಶಕ್ತಿಸಾಮರ್ಥ್ಯಗಳು ಕುಂದಬಹುದು. ಮಾನಸಿಕ ಚಟುವಟಿಕೆಗಳಲ್ಲಿ ಏರುಪೇರು ಕಂಡುಬರಬಹುದು. ಹೀಗಾಗಿ ರೋಗಿಗೆ ಧೈರ್ಯ, ಸ್ಫೂರ್ತಿ ತುಂಬಿ ಸ್ವಾವಲಂಬಿಯಾಗಿ ಬದುಕಲು, ಸರಿಯಾದ ತರಬೇತಿ ಹಾಗೂ ಫಿಸಿಯೋಥೆರಪಿ ಅತಿ ಅವಶ್ಯಕ. ರೋಗಿಯ ಪುನರ್ವಸತಿಯಲ್ಲಿ ಮನೆಯ ಬಂಧುಗಳು, ಸಹೋದ್ಯೋಗಿಗಳು, ಸ್ನೇಹಿತರು ಹಾಗೂ ಸಮಾಜ ಭಾಗಿಯಾದಲ್ಲಿ ರೋಗಿಯು ಸ್ವಾವಲಂಬಿಯಾಗಿ ಬದುಕಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.