ಅಶ್ವಿನಿ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಆ್ಯಪ್ ಸಂದರ್ಶನದಲ್ಲಿ ನಟ ಯೋಗೇಶ್ ಮಾತನಾಡಿದ್ದು, ಅಪ್ಪು ಅವರ ಸರಳತೆ ಬಗ್ಗೆ ಕೊಂಡಾಡಿದ್ದಾರೆ.

ಅಪ್ಪು ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡಿರುವ ನಟ ಯೋಗೇಶ್, 'ಪುನೀತ್ ರಾಜ್ಕುಮಾರ್ ಅವರಿಗೆ ಕಾರಿನ ವ್ಯಾಮೋಹ ಹೆಚ್ಚು ಇತ್ತು. ಅವರು ಕಾರಿನಲ್ಲಿ ಯಾವಾಗಲೂ ಹಳೆ ಸಿನಿಮಾದ ಹಾಡುಗಳನ್ನು ಕೇಳುತ್ತಿದ್ದರು‘ ಎಂದು ಹೇಳಿದ್ದಾರೆ.

‘ಅಪ್ಪು ಅವರ ಬಳಿ ಇದ್ದ ವಸ್ತುಗಳನ್ನು ಚೆನ್ನಾಗಿ ಇದೆ ಎಂದರೆ ಅವರು ಆ ಕೂಡಲೇ ಅದನ್ನು ನಮಗೆ ಕೊಡುತ್ತಿದ್ದರು. ನಮಗೆ ಇಷ್ಟವಾದ ಅವರ ವಸ್ತುಗಳನ್ನು ಸುಲಭವಾಗಿ ನಾವು ಪಡೆದುಕೊಳ್ಳುತ್ತಿದ್ದೆವು.
.ನೇಣು ಬಿಗಿದ ಸ್ಥಿತಿಯಲ್ಲಿ ಬಂಗಾಳಿ ಚಲನಚಿತ್ರ ಛಾಯಾಗ್ರಾಹಕನ ಮೃತದೇಹ ಪತ್ತೆ.
‘ಶೂಗಳೆಂದರೆ ನನಗೆ ಇಷ್ಟ ಎಂದು ಪುನೀತ್ಗೆ ಹೇಳಿದ್ದೆ . ಅವರು ಸಿನಿಮಾ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋದಾಗ ಅಲ್ಲಿಂದ ನನಗೆ ದುಬಾರಿ ಬೆಲೆಯ ಶೂಗಳನ್ನು ತಂದುಕೊಟ್ಟಿದ್ದರು' ಎಂದು ಅಪ್ಪು ಅವರ ಸಹಾಯದ ಗುಣಗಳನ್ನು ನೆನಪಿಸಿಕೊಂಡಿದ್ದಾರೆ.

ಪುನೀತ್ ರಾಜ್ಕುಮಾರ್ ಹಾಗೂ ನಟ ಯೋಗೇಶ್ ಅವರು 'ಹುಡುಗರು', 'ಯಾರೇ ಕೂಗಾಡಲಿ' ಚಿತ್ರದಲ್ಲಿ ಒಟ್ಟಿಗೆ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.