‘ಬ್ರಶ್ಶು, ಬಣ್ಣ ಕೊಡಿಸಿದ್ದರೆ ನಾನೂ ಛಂದ ಚಿತ್ರ ಬಿಡಿಸ್ತಿದ್ದೆ. ನಾ ಏನು ಕೇಳಿದ್ರೂ ನೀ ಕೊಡಿಸಂಗಿಲ್ಲ’ ಎಂದು ಬೆಕ್ಕಣ್ಣ ಮೂತಿಯುಬ್ಬಿಸಿತು.

‘ಮೊದ್ಲು ಇಲಿ ಹಿಡಿಯೂದು ಸರಿಯಾಗಿ ಕಲಿಯಲೇ. ನಿನ್ನ ಕೆಲಸ ಏನಿರತದ ಅದನ್ನ ಸರಿಯಾಗಿ ಮಾಡೂದು ಕಲಿ...’ ಎಂದು ಬೈದೆ.

ಡಾಲಿ ಎಂಬ ನಾಯಿ ಬಾಯಿಯಲ್ಲಿ ಬ್ರಶ್ ಹಿಡಿದು ಪೇಂಟಿಂಗ್ ಮಾಡುವುದನ್ನು ಕಲಿತು, ಈಗ ಕಲಾವಿದೆ ಆಗಿದೆಯಂತೆ. ಹಿಂದೂಸ್ತಾನ್ ಪೆನ್ಸಿಲ್ ಕಂಪನಿಯ ಅಪ್ಸರಾ ಬ್ರಾಂಡಿಗೆ ಡಾಲಿಯು ಬ್ರಾಂಡ್ ಅಂಬಾಸಡರ್, ಅಂದರೆ ‘ಅಂಬಾಸಾ–ಡಾಗ್’ ಆಗಿದೆಯೆಂಬ ಸುದ್ದಿಯನ್ನು ಬೆಕ್ಕಣ್ಣ ಓದಿತು.

‘ಬೀದಿ ನಾಯಿಮರಿಯಾಗಿದ್ದ ಆಕಿನ ಗಂಡ ಹೆಂಡತಿ ಸಾಕಿ, ಡಾಲಿ ಅಂತ ಹೆಸರಿಟ್ಟು, ಪೇಂಟಿಂಗ್ ಮಾಡೂದು ಕಲಿಸಿ, ಕಲಾವಿದೆ ಮಾಡ್ಯಾರೆ. ಎಂಥಾ ಅದೃಷ್ಟವಂತೆ ಡಾಲಿ! ಈಗ ಬ್ರಾಂಡ್ ಅಂಬಾಸಡರ್ ಆಗಿ ಲಕ್ಷಗಟ್ಟಲೆ ರೊಕ್ಕ ಗಳಿಸ್ತಾಳ!’ ಬೆಕ್ಕಣ್ಣ ಹೆಮ್ಮೆಯಿಂದ ಹೇಳಿತು.

‘ಅಂಬಾಸಾ–ಡಾಗ್’ ಚಿತ್ರ ಬಿಡಿಸುವ ವಿಡಿಯೋ ನೋಡುತ್ತ, ಬೆಕ್ಕಣ್ಣ ಸಾದಾ ಪೆನ್ಸಿಲ್ಲನ್ನು ಬಾಯಲ್ಲಿ ಕಚ್ಚಿ ಹಿಡಿದು ಹಾಳೆಯ ಮೇಲೆ ಚಿತ್ರ ಬಿಡಿಸಲು ಶುರು ಮಾಡಿತು.

‘ನಿರ್ಮಲಕ್ಕ ಪೆನ್ಸಿಲ್ಲು, ಅಳಿಸೋ ರಬ್ಬರಿನ ಜಿಎಸ್ಟಿ ಇಳಿಸ್ಯಾಳೆ. ಈಗರೆ ನನಗೆ ಬಣ್ಣದ ಪೆನ್ಸಿಲು ತಂದುಕೊಡು’ ಎಂದು ವರಾತ ಹಚ್ಚಿತು.

‘ನವಿಲು ನೋಡಿ ಕೆಂಬೂತ ಕುಣೀತು ಅಂತಾರಲ್ಲ, ಹಂಗೆ ನೀನೀಗ ಅಂಬಾಸಾ–ಕ್ಯಾಟ್ ಆಗತೀಯೇನು’ ಎಂದು ಕಿಚಾಯಿಸಿದೆ.

‘ಈಗ ಎಐ ಉಪಯೋಗಿಸಿ ಬೇಕಾದಂಥ ಚಿತ್ರ ಬಿಡಿಸಬೌದು. ಅದ್ರ ಜೊತಿಗಿ ನಾವು ಪ್ರಾಣಿಗಳೂ ಹಿಂಗೆ ಚಿತ್ರ ಬಿಡಿಸಾಕೆ ಶುರು ಮಾಡಿದರೆ ಮನುಷ್ಯ ಕಲಾವಿದರಿಗೆ ಕೆಲಸಾನೇ ಇರಂಗಿಲ್ಲ. ಇನ್ನು ಬರಬರತಾ ಎಐ, ರೊಬಾಟ್ಗಳು ಮತ್ತು ನಾವು ಪ್ರಾಣಿಗಳೇ ಎಲ್ಲಾ ಕೆಲಸ ಮಾಡತೀವಿ. ನೀವು ಖಾಲಿ ಕುಂದ್ರತೀರಿ, ತಿಳಕೋ!’ ಎಂದು ಬೆಕ್ಕಣ್ಣ ಗುರುಗುಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.