ಶುಕ್ರವಾರ, ಅಕ್ಟೋಬರ್ 22, 2021
29 °C

ಲಖಿಂಪುರ: ಪೊಲೀಸರ ವಶದಲ್ಲಿರುವ ಪ್ರಿಯಾಂಕಾ ಉಪವಾಸ ಸತ್ಯಾಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ಸೀತಾಪುರ:  ಉತ್ತರ ಪ್ರದೇಶದ ಲಖಿಂಪುರ–ಖೇರಿಗೆ ತೆರಳುತ್ತಿದ್ದಾಗ ಸೀತಾಪುರ ಜಿಲ್ಲೆಯಲ್ಲಿ ಬಂಧನಕ್ಕೊಳಗಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ  ಅವರನ್ನು ಅತಿಥಿಗೃಹವೊಂದರಲ್ಲಿ ಇರಿಸಲಾಗಿದೆ. ಅವರು ಅಲ್ಲಿಯೇ ಅವರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ವಾದ್ರಾ ಸತ್ಯಾಗ್ರಹ ಆರಂಭಿಸುತ್ತಿದ್ದಂತೆ, ಕಾಂಗ್ರೆಸ್ ನಾಯಕರು ಅತಿಥಿಗೃಹದ ಹೊರಗೆ ಪ್ರತಿಭಟನೆ ನಡೆಸಿದರು ಮತ್ತು ಅವರ ಬಂಧನ ವಿರೋಧಿಸಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಈ ಮಧ್ಯೆ ಪ್ರಿಯಾಂಕಾ ಗಾಂದಿ ಅವರು ತಾವಿರುವ ಕೊಠಡಿಯ ಕಸ ಗುಡಿಸುತ್ತಿರುವ 45 ಸೆಕೆಂಡ್‌ಗಳ ವಿಡಿಯೊವನ್ನು ಉತ್ತರ ಪ್ರದೇಶದ ಕಾಂಗ್ರೆಸ್ ವಕ್ತಾರ ವಿಕಾಸ್ ಶ್ರೀವಾಸ್ತವ ಬಿಡುಗಡೆ ಮಾಡಿದ್ದರು.  ದೃಶ್ಯಗಳು ವೈರಲ್‌ ಆಗುತ್ತಲೇ, ಉತ್ತರ ಪ್ರದೇಶದ ವಕ್ತಾರ ಅಖಿಲೇಶ್ ಸಿಂಗ್ ಸೇರಿದಂತೆ ಹಲವು ನಾಯಕರು ಪ್ರಾಂತೀಯ ಸಶಸ್ತ್ರ ಕಾನ್‌ಸ್ಟ್ಯಾಬುಲರಿ (ಪಿಎಸಿ) 2ನೇ ಬೆಟಾಲಿಯನ್‌ನ ಆವರಣದ ಹೊರಗಿನ ರಸ್ತೆಯನ್ನು ಗುಡಿಸಿ ಪ್ರತಿಭಟನೆ ನಡೆಸಿದರು. 

ನಂತರ ಮಾತನಾಡಿದ್ದ ಶ್ರೀವಾಸ್ತವ, ‘ ಪ್ರಿಯಾಂಕಾ ಗಾಂಧಿ ಅವರದ್ದು ಒಂದೇ ಬೇಡಿಕೆ. ಅದು, ರೈತರನ್ನು ಭೇಟಿಯಾಗಬೇಕು ಎಂಬುದು,‘ ಎಂದು ಹೇಳಿದ್ದಾರೆ. 

‘ಪ್ರಿಯಾಂಕಾ ಗಾಂಧಿಯನ್ನು ಬಂಧಿಸಲಾಗಿದೆ. ಅವರು ಉಪವಾಸ ನಿರತರಾಗಿದ್ದಾರೆ. ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ತಲೆಬಾಗಬೇಕು. ನ್ಯಾಯಕ್ಕಾಗಿ ಧ್ವನಿಯನ್ನು ಎತ್ತುತ್ತೇವೆ’ ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು