ನವದೆಹಲಿ: ‘ತನ್ನ ವಿವಿಧ ಶಸ್ತ್ರಾಸ್ತ್ರಗಳ ಪರೀಕ್ಷೆಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ನಾಲ್ಕು ದಿನಗಳ ಸೇನಾ ಸಂಘರ್ಷವನ್ನು ಚೀನಾ ಪ್ರಯೋಗಶಾಲೆಯಂತೆ ಬಳಸಿಕೊಂಡಿತು. ಇಸ್ಲಾಮಾಬಾದ್ಗೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಶತ್ರು ಸೈನ್ಯದ ಮೇಲೆ ಪ್ರಹಾರ ನಡೆಸಲು ಸಾಲ ಪಡೆದ ಚಾಕು ಬಳಸುವ ಪ್ರಾಚೀನ ತಂತ್ರವನ್ನು ಹೆಣೆದಿತ್ತು’ ಎಂದು ಭೂಸೇನೆಯ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್. ಸಿಂಗ್ ಶುಕ್ರವಾರ ಆರೋಪಿಸಿದ್ದಾರೆ.

ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಿಗಳ ಸಂಘ ಆಯೋಜಿಸಿದ್ದ ‘ಹೊಸ ತಲೆಮಾರಿನ ಸೇನಾ ತಂತ್ರಜ್ಞಾನ’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ನಡೆದ ಯುದ್ಧದಲ್ಲಿ ಎದುರಿಗೆ ಕಂಡಿದ್ದು ಪಾಕಿಸ್ತಾನ ಮಾತ್ರ. ಹಿಂದಿನಿಂದ ಎಲ್ಲಾ ರೀತಿಯ ಸಹಕಾರ ನೀಡಿದ್ದು ಚೀನಾ. ಟರ್ಕಿ ಕೂಡಾ ಪ್ರಮುಖ ಸೇನಾ ಉಪಕರಣಗಳನ್ನು ಇಸ್ಲಾಮಾಬಾದ್ಗೆ ನೀಡುವ ಮೂಲಕ ಭಾರತದ ವಿರುದ್ಧ ಯುದ್ಧಕ್ಕೆ ಬೆಂಬಲ ನೀಡಿತ್ತು. ಹೀಗಾಗಿ ಮೇ 7ರಿಂದ 10ರವರೆಗೆ ಭಾರತ ಎದುರಿಸಿದ್ದು ಪಾಕಿಸ್ತಾನ ಮಾತ್ರವಲ್ಲ, ಬದಲಿಗೆ ಮೂರು ರಾಷ್ಟ್ರಗಳನ್ನು ಏಕಕಾಲಕ್ಕೆ ಎದುರಿಸಿತು’ ಎಂದು ಅವರು ಹೇಳಿದ್ದಾರೆ.

‘ಭಾರತೀಯ ಸೇನೆಯ ನಿಯೋಜನೆಯ ಮಾಹಿತಿ ಪಡೆಯಲು ಚೀನಾ ತನ್ನ ಉಪಗ್ರಹವನ್ನು ಇದಕ್ಕಾಗಿ ಮೀಸಲಿಟ್ಟಿತ್ತು. ಇದರಿಂದಾಗಿ ಸೇನಾ ಜನರಲ್ಗಳ ಮಾತುಕತೆಯಲ್ಲಿ ಪಾಕಿಸ್ತಾನ ಸೇನೆಗೆ ಭಾರತೀಯ ಸೇನೆಯ ಸಾಕ್ಷಾತ್ ಮಾಹಿತಿ ಲಭ್ಯವಾಗುತ್ತಿತ್ತು. ಪ್ರಾಚೀನ ಯುದ್ಧ ಕಲೆಯಾದ ‘36 ಸೇನಾ ತಂತ್ರ’ಗಳನ್ನು ಬಳಕೆ ಮಾಡಿದ ಚೀನಾ, ಬೇರೆಯವರಿಂದ ಸಾಲಕ್ಕೆ ‘ಚೂರಿ’ ಪಡೆದು ಭಾರತಕ್ಕೆ ಹಾನಿಯನ್ನುಂಟು ಮಾಡಲು ಪಾಕಿಸ್ತಾನವನ್ನು ಬಳಸಿಕೊಂಡಿತು’ ಎಂದಿದ್ದಾರೆ.

ಮೂರು ದೇಶಗಳನ್ನು ಸಮರ್ಥವಾಗಿ ಎದುರಿಸಿದ ಭಾರತ

‘ಭಾರತದ ವಿರುದ್ಧ ಪಾಕಿಸ್ತಾನ ಸೇನೆ ಬಳಸಿದ ಶಸ್ತ್ರಾಸ್ತ್ರಗಳಲ್ಲಿ ಶೇ 81ರಷ್ಟು ಚೀನಾಗೆ ಸೇರಿದ್ದಾಗಿತ್ತು. ಇವೆಲ್ಲವೂ ಕಳೆದ ಐದು ವರ್ಷಗಳಲ್ಲಿ ಪಾಕಿಸ್ತಾನ ಚೀನಾದಿಂದ ಹಂತಹಂತವಾಗಿ ಪಡೆದಿದ್ದಾಗಿದ್ದವು. ಅದರಂತೆಯೇ ಟರ್ಕಿ ಕೂಡಾ ಪಾಕಿಸ್ತಾನಕ್ಕೆ ಸಹಕರಿಸುವ ಮೂಲಕ ಈ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾರತ ಮತ್ತು ಪಾಕಿಸ್ತಾನ ಸಂಘರ್ಷದಲ್ಲಿ ಹಲವಾರು ಡ್ರೋನ್ಗಳನ್ನು ಭಾರತದತ್ತ ಪಾಕಿಸ್ತಾನ ಹಾರಿಬಿಟ್ಟಿತು. ಇವೆಲ್ಲವೂ ಟರ್ಕಿಯಿಂದ ಪಡೆದವುಗಳಾಗಿದ್ದವು. ಈ ಯುದ್ಧದಲ್ಲಿ ಭಾರತವು ಸಾಕಷ್ಟು ಪಾಠ ಕಲಿಯಬೇಕಿದೆ’ ಎಂದು ರಾಹುಲ್ ಆರ್. ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

‘C4ISR ಭಾರತ ಕಲಿಯಬೇಕಾದ ಆ ಪ್ರಮುಖ ಪಾಠಗಳು. ಅಧಿಪತ್ಯ, ನಿಯಂತ್ರಣ, ಸಂವಹನ, ಕಂಪ್ಯೂಟರ್ಗಳು, ಗುಪ್ತಚರ, ಕಣ್ಗಾವಲು ಮತ್ತು ವಿಚಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಕಲಿಯಲು ಇವೆ. ಸೇನಾ ಮುಖಸ್ಥರ ಸಭೆಯಲ್ಲಿ, ಭಾರತದ ಯಾವೆಲ್ಲ ತುಕಡಿಗಳು ಎಲ್ಲೆಲ್ಲಿ ನಿಯೋಜನೆಗೊಂಡಿವೆ ಎಂಬುದು ಗೊತ್ತು. ಅವುಗಳನ್ನು ಹಿಂದಕ್ಕೆ ಪಡೆಯಿರಿ ಎಂದು ಪಾಕಿಸ್ತಾನದ ಅಧಿಕಾರಿಗಳು ಹೇಳುತ್ತಿದ್ದರು. ಅವರಿಗೆ ಈ ಎಲ್ಲಾ ಮಾಹಿತಿಗಳು ಚೀನಾದಿಂದ ರವಾನೆಯಾಗುತ್ತಿದ್ದವು. ಈ ಒಂದು ಕ್ಷೇತ್ರದಲ್ಲಿ ನಾವು ತ್ವರಿತಗತಿಯಲ್ಲಿ ಹೆಜ್ಜೆ ಹಾಕಬೇಕಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಿದೆ’ ಎಂದು ಅವರು ಹೇಳಿದ್ದಾರೆ.

‘ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ನೆಲೆಗಳ ಮೇಲಿನ ದಾಳಿಯಲ್ಲಿ ಭಾರತದ ಯೋಜನೆ, ನಾಯಕತ್ವದಲ್ಲಿ ಯಾವುದೇ ಗೊಂದಗಳು ಇರಲಿಲ್ಲ. ಏ. 22ರಂದು ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರದ ರೂಪದಲ್ಲಿ ಮೇ 7ರಂದು ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಆರಂಭಿಸಿತು. ನಾಲ್ಕು ದಿನಗಳ ಪ್ರಬಲ ಹೋರಾಟದ ನಂತರ ಮೇ 10ರಂದು ಕದನ ವಿರಾಮ ಘೋಷಿಸಲಾಯಿತು. ಭಾರತದ ಉಗ್ರ ಪ್ರತಿದಾಳಿಗೆ ತತ್ತರಿಸಿದ ಪಾಕಿಸ್ತಾನ, ಕದನ ವಿರಾಮಕ್ಕೆ ಮುಂದಾಗುವಂತೆ ಮಾಡಿತು’ ಎಂದು ಲೆಫ್ಟಿನೆಂಟ್ ಜನರಲ್ ರಾಹುಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.