ನವದೆಹಲಿ: ಸತತ ಐದನೇ ದಿನವಾದ ಶನಿವಾರವೂ ಇಂಡಿಗೊ ಏರ್ಲೈನ್ಸ್ಗೆ ಸೇರಿದ ವಿಮಾನಗಳ ಹಾರಾಟದಲ್ಲಿ ತೀವ್ರ ವ್ಯತ್ಯಯವಾಗಿದ್ದು, ದೆಹಲಿ, ಮುಂಬೈ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.

ಮುಂಬೈಯಲ್ಲಿ 109, ದೆಹಲಿಯಲ್ಲಿ 106 ವಿಮಾನಗಳ ಹಾರಾಟ ರದ್ದಾಗಿದೆ. ಸೋಮವಾರದಿಂದ ಈವರೆಗೆ 1,000ಕ್ಕೂ ಇಂಡಿಗೊ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಡಿಸೆಂಬರ್ 10ರಿಂದ 15ರ ವೇಳೆಗೆ ಸಂಚಾರ ಸಹಜಸ್ಥಿತಿಗೆ ಬರಲಿದೆ’ ಎಂದು ಇಂಡಿಗೊದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್ ಎಲ್ಬರ್ಸ್ ಶುಕ್ರವಾರ ತಿಳಿಸಿದ್ದರು.

‘ವಿಮಾನಗಳ ಹಾರಾಟ ರದ್ದುಗೊಂಡು ಪ್ರಯಾಣಿಕರಿಗೆ ಅಡಚಣೆ ಉಂಟಾದ ಕುರಿತು ವಿಡಿಯೊ ಸಂದೇಶದಲ್ಲಿ ಎಲ್ಬರ್ಸ್ ಕ್ಷಮೆಯಾಚಿಸಿದ್ದರು. ಜತೆಗೆ, ಕಳೆದ ಕೆಲವು ದಿನಗಳಿಂದ ನಾವು ತೆಗೆದುಕೊಂಡ ಕ್ರಮಗಳು ಸಾಕಾಗುವುದಿಲ್ಲ ಎಂದು ಸಾಬೀತಾಗಿದೆ. ಆದ್ದರಿಂದ, ಎಲ್ಲ ವ್ಯವಸ್ಥೆಗಳು ಹಾಗೂ ವೇಳಾಪಟ್ಟಿ ಯನ್ನು ಮರುನಿಗದಿಪಡಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದೂ ಹೇಳಿದ್ದರು.

ವಿಮಾನಗಳ ಹಾರಾಟ ಕಾರ್ಯಾಚರಣೆಯನ್ನು ಸಹಜಸ್ಥಿತಿಗೆ ತರುವ ನಿಟ್ಟಿನಲ್ಲಿ ವಿಮಾನ ಕರ್ತವ್ಯದ ಸಮಯದ ನೀತಿ (ಎಫ್ಡಿಟಿಎಲ್) ಅನುಷ್ಠಾನಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತಾತ್ಕಾಲಿಕ ತಡೆ ನೀಡಿರುವುದು ದೊಡ್ಡಮಟ್ಟದ ಸಹಾಯವಾಗಿದೆ ಎಂದು ಎಲ್ಬರ್ಸ್ ತಿಳಿಸಿದ್ದರು.

ಏತನ್ಮಧ್ಯೆ, ಡಿಜಿಸಿಎ ಇಂಡಿಗೊಗೆ ನೀಡಿದ ಆಯ್ದ ಮತ್ತು ಅಸುರಕ್ಷಿತ ಪರಿಹಾರಕ್ಕೆ ಏರ್ಲೈನ್ಸ್ ಪೈಲಟ್ಗಳ ಸಂಘ (ಎಎಲ್ಪಿಎ) ಬಲವಾದ ಆಕ್ಷೇಪಣೆ ವ್ಯಕ್ತಪಡಿಸಿದೆ. ಡಿಜಿಸಿಎ ಕ್ರಮದಿಂದ ನಿಯಂತ್ರಕ ಸಮಾನತೆಯನ್ನು ನಾಶಪಡಿಸುವುದಲ್ಲದೆ, ಲಕ್ಷಾಂತರ ಪ್ರಯಾಣಿಕರನ್ನು ಹೆಚ್ಚಿನ ಅಪಾಯಕ್ಕೆ ಸಿಲುಕಿಸಿದೆ ಎಂದೂ ಕಿಡಿಕಾರಿದೆ.
.ಸಾವಿರ ಮಾರ್ಗಗಳಲ್ಲಿ 'ಇಂಡಿಗೊ' ಸಂಚಾರ ರದ್ದು: ಹಾರದ ವಿಮಾನ, ಜನ ಹೈರಾಣ.ಇಂಡಿಗೊ ವಿಮಾನ ಸಂಚಾರ ರದ್ದು: ಸಾವಿರ ಮಾರ್ಗಗಳಲ್ಲಿ ಇಂದೂ ಸಂಚಾರ ವ್ಯತ್ಯಯ.Photos| ಹೀಗಿತ್ತು ನೋಡಿ, ಇಂಡಿಗೊ ವಿಮಾನ ಪ್ರಯಾಣಿಕರ ಪರದಾಟ!.ವಿಮಾನ ಸಂಚಾರದಲ್ಲಿ ವ್ಯತ್ಯಯ: ಇಂಡಿಗೊ ಮಾಲೀಕರು ಯಾರು?.ಸಾವಿರಕ್ಕೂ ಅಧಿಕ ಇಂಡಿಗೊ ವಿಮಾನಗಳು ರದ್ದು: ಪ್ರಯಾಣಿಕರ ತೀವ್ರ ಪರದಾಟ– ಕಾರಣ ಏನು?.ಮುಂದುವರಿದ ‘ಇಂಡಿಗೊ’ ಅಡಚಣೆ:ಬೆಂಗಳೂರಿಂದ ಹೊರಡಬೇಕಿದ್ದ 73 ವಿಮಾನಗಳ ಹಾರಾಟ ರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.