ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 28 ಸೆಪ್ಟೆಂಬರ್‌ 2023

Published 28 ಸೆಪ್ಟೆಂಬರ್ 2023, 13:23 IST
Last Updated 28 ಸೆಪ್ಟೆಂಬರ್ 2023, 13:23 IST
ಅಕ್ಷರ ಗಾತ್ರ
Introduction

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ, ಏಷ್ಯನ್ ಕ್ರೀಡಾಕೂಟ: ಭಾರತದ ಪುರುಷರ ಶೂಟಿಂಗ್ ತಂಡಕ್ಕೆ ಚಿನ್ನ, ಮಹಿಳಾ ಮೀಸಲು ಮಸೂದೆ ಪೊಳ್ಳು ಭರವಸೆ: ಖರ್ಗೆ ಟೀಕೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.

1

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್.ಸ್ವಾಮಿನಾಥನ್ ನಿಧನ

ಎಂ.ಎಸ್.ಸ್ವಾಮಿನಾಥನ್

ಎಂ.ಎಸ್.ಸ್ವಾಮಿನಾಥನ್

ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎಂದೇ ಪ್ರಸಿದ್ಧರಾಗಿದ್ದ ಎಂ.ಎಸ್.ಸ್ವಾಮಿನಾಥನ್ (98) ಚೆನ್ನೈನಲ್ಲಿ ಗುರುವಾರ ನಿಧನರಾದರು. 

2

ಏಷ್ಯನ್ ಕ್ರೀಡಾಕೂಟ: ಭಾರತದ ಪುರುಷರ ಶೂಟಿಂಗ್ ತಂಡಕ್ಕೆ ಚಿನ್ನ

ಭಾರತದ ಸರಬ್ಜೋತ್ ಸಿಂಗ್  –ಪಿಟಿಐ ಚಿತ್ರ
ಭಾರತದ ಸರಬ್ಜೋತ್ ಸಿಂಗ್  –ಪಿಟಿಐ ಚಿತ್ರ

ಏಷ್ಯನ್ ಕ್ರೀಡಾಕೂಟದ ಶೂಟಿಂಗ್ ರೇಂಜ್‌ನಲ್ಲಿ ಭಾರತದ ಚಿನ್ನದ ಬೇಟೆ ಗುರುವಾರವೂ ಮುಂದುವರಿಯಿತು.  ಪುರುಷರ ಶೂಟಿಂಗ್ ತಂಡವು ಚಿನ್ನ ಗೆದ್ದಿತು.

3

ಮಹಿಳಾ ಮೀಸಲು ಮಸೂದೆ ಪೊಳ್ಳು ಭರವಸೆ: ಖರ್ಗೆ ಟೀಕೆ

ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

‘ಮಹಿಳಾ ಮೀಸಲು ಮಸೂದೆಯು ಬಿಜೆಪಿಯ ಪೊಳ್ಳು ಭರವಸೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

4

ನಾಳೆ ಮೆಟ್ರೊ ನೇರಳೆ ಮಾರ್ಗದಲ್ಲಿ ವ್ಯತ್ಯಯ

ಮೆಟ್ರೊ ರೈಲು
ಮೆಟ್ರೊ ರೈಲು

ಮೆಟ್ರೊ ನೇರಳೆ ಮಾರ್ಗದಲ್ಲಿ ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೊ ನಿಲ್ದಾಣದವರೆಗೆ ನಾಳೆ (ಸೆ.29) ಸುರಕ್ಷತಾ ಪರಿಶೀಲನೆ ಹಮ್ಮಿಕೊಳ್ಳಲಾಗಿದೆ. ಅಂದು ಕೃಷ್ಣರಾಜಪುರ–ಗರುಡಚಾರ್‌ ಪಾಳ್ಯ ಹಾಗೂ ಮೈಸೂರು ರಸ್ತೆ ನಿಲ್ದಾಣ–ಕೆಂಗೇರಿ ನಿಲ್ದಾಣಗಳ ನಡುವೆ ರೈಲು ಸೇವೆ ಸ್ಥಗಿತಗೊಳ್ಳಲಿದೆ.

5

Chandrayaan-3: ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ: ಚೀನಾ ವಿಜ್ಞಾನಿ

ಚಂದ್ರನ  ಮೇಲೆ ಇಳಿಯಲಿರುವ ಬಾಹ್ಯಾಕಾಶ ನೌಕೆ ಮತ್ತು ರೋವರ್‌ನ ಚಿತ್ರ – ಕಲಾವಿದನ ಕಣ್ಣಲ್ಲಿ

ಚಂದ್ರನ ಮೇಲೆ ಇಳಿಯಲಿರುವ ಬಾಹ್ಯಾಕಾಶ ನೌಕೆ ಮತ್ತು ರೋವರ್‌ನ ಚಿತ್ರ – ಕಲಾವಿದನ ಕಣ್ಣಲ್ಲಿ

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಚಂದ್ರಯಾನ–3 ಯೋಜನೆಯ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಿಂದ 619 ಕಿ.ಮೀ. ದೂರದಲ್ಲಿ ಇಳಿದಿದೆ. ಹೀಗಾಗಿ ಇದನ್ನು ದಕ್ಷಿಣ ಧ್ರುವ ಎಂದು ಕರೆಯಲಾಗದು’ ಎಂದು ಚೀನಾದ ಚಂದ್ರಯಾನ ಯೋಜನೆಯ ಹಿರಿಯ ವಿಜ್ಞಾನಿ ಒಯಾಂಗ್ ಝಿಯಾನ್‌ ಹೇಳಿದ್ದಾರೆ.

6

ಕಾವೇರಿ ನೀರು ಹಂಚಿಕೆ | ಸಿಎಂ ನೇತೃತ್ವದಲ್ಲಿ ನಾಳೆ ತಜ್ಞರ ಸಭೆ: ಎಚ್‌.ಕೆ. ಪಾಟೀಲ

ಎಚ್‌.ಕೆ. ಪಾಟೀಲ

ಎಚ್‌.ಕೆ. ಪಾಟೀಲ

‘ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾಳೆ(ಶುಕ್ರವಾರ) ತಜ್ಞರ ಸಭೆ ಕರೆಯಲಾಗಿದ್ದು, ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸಚಿವ ಎಚ್‌.ಕೆ. ಪಾಟೀಲ ತಿಳಿಸಿದರು.

7

ಬಂಗಲೆ ನವೀಕರಣ ಹಗರಣ: ಸಿಬಿಐ ತನಿಖೆಗೆ ಸ್ವಾಗತ; ಯಾವ ಲೋಪವೂ ಸಿಗದು– ಕೇಜ್ರಿವಾಲ್

ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್

ಬಂಗಲೆ ನವೀಕರಣದಲ್ಲಿ ನಡೆದಿದೆ ಎನ್ನಲಾದ ಹಗರಣ ಕುರಿತು ತನಿಖೆ ಆರಂಭಿಸಿರುವ ಸಿಬಿಐಗೆ ಸ್ವಾಗತ ಕೋರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ‘ಯಾವುದೇ ತಪ್ಪು ನಡೆದಿಲ್ಲದ ಕಾರಣ ಅವರಿಗೆ ಏನೂ ಸಿಗದು’ ಎಂದಿದ್ದಾರೆ.

8

ನಾಜಿ ಯೋಧನಿಗೆ ಗೌರವ: ಕ್ಷಮೆ ಕೋರಿದ ಟ್ರುಡೊ

ಜಸ್ಟಿನ್‌ ಟ್ರುಡೊ
ಜಸ್ಟಿನ್‌ ಟ್ರುಡೊ

ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ನಾಜಿ ಯೋಧ ಯರೊಸ್ಲಾವ್‌ ಹುಂಕಾ ಅವರನ್ನು ಕೆನಡಾ ಸಂಸತ್ತಿನಲ್ಲಿ ಗೌರವಿಸಿದ್ದಕ್ಕಾಗಿ ಪ್ರಧಾನಿ ಜಸ್ಟಿನ್‌ ಟ್ರುಡೊ ಕ್ಷಮೆ ಕೋರಿದ್ದಾರೆ. 

9

ಅನಿಮಲ್‌ ಚಿತ್ರದ ಟೀಸರ್‌ ಬಿಡುಗಡೆ: ಮಾಸ್‌ ಲುಕ್‌ನಲ್ಲಿ ರಣಬೀರ್‌ ಕಪೂರ್‌

‘ಅನಿಮಲ್‌’ ಚಿತ್ರದಲ್ಲಿ ರಣಬೀರ್‌ ಕಪೂರ್‌
‘ಅನಿಮಲ್‌’ ಚಿತ್ರದಲ್ಲಿ ರಣಬೀರ್‌ ಕಪೂರ್‌

ರಣಬೀರ್‌ ಕಪೂರ್‌ ಅವರ 41ನೇ ಹುಟ್ಟುಹಬ್ಬದ ಅಂಗವಾಗಿ ಇಂದು( ಸೆಪ್ಟೆಂಬರ್‌ 28) ’ಅನಿಮಲ್‌’ ಸಿನಿಮಾದ ಟೀಸರ್‌ ಅನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

10

ನಿರಂತರ ಪಠ್ಯಪುಸ್ತಕ ಪರಿಷ್ಕರಣೆ: ಕನ್ನಡ ಶಾಲೆ ಕೊಲ್ಲುವ ಯತ್ನ- ಚಕ್ರತೀರ್ಥ

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ

ಅಸಾಂವಿಧಾನಿಕವಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಸರ್ವಾಧಿಕಾರ ಧೋರಣೆ ತೋರಿರುವ ರಾಜ್ಯ ಸರ್ಕಾರವು ಸರ್ಕಾರಿ ಕನ್ನಡ ಶಾಲೆಗಳನ್ನು ಕೊಲ್ಲುವ ಯತ್ನ ಮಾಡುತ್ತಿದೆ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಾಗ್ದಾಳಿ ನಡೆಸಿದರು.