ರಾಜ್ಯ, ರಾಷ್ಟ್ರೀಯ, ವಿದೇಶ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ.

ಬೆಂಗಳೂರು: ಹಾಲು ಉತ್ಪಾದಕರಿಗೆ ಕರ್ನಾಟಕ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಲೀಟರ್ಗೆ ₹5 ರಿಂದ ₹ 7ಕ್ಕೆ ಏರಿಸುವ ಕುರಿತು ಈ ಬಾರಿಯ ಬಜೆಟ್ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.ಎರಡು ತಿಂಗಳ ಹಿಂದೆಯೇ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೋತ್ಸಾಹಧನ ಏರಿಸುವುದಾಗಿ ಘೋಷಿಸಿದ್ದರೂ ಅದು ಜಾರಿಯಾಗಿಲ್ಲ. ಅಧಿಕೃತವಾಗಿ ಬಜೆಟ್ ಮೂಲಕವೇ ಪ್ರಕಟಿಸಿ ಜಾರಿಗೊಳಿಸುವ ಸಾಧ್ಯತೆಯಿದೆ.
.ಹಾಲು ಪ್ರೋತ್ಸಾಹಧನ ₹7ಕ್ಕೆ: ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ ಕೆಎಂಎಫ್.
ಭೋಪಾಲ್(ಮಧ್ಯ ಪ್ರದೇಶ): ಭಾರತ–ಅಮೆರಿಕ ವ್ಯಾಪಾರ ಒಪ್ಪಂದವು ಭಾರತೀಯ ರೈತರ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ಈ ಒಪ್ಪಂದವನ್ನು ಪ್ರಧಾನಿ ನರೇಂದ್ರ ಮೋದಿ ಅವರು ರದ್ದುಗೊಳಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಆಗ್ರಹಿಸಿದ್ದಾರೆ.ಇಲ್ಲಿ ನಡೆದ 'ಕಿಸಾನ್ ಮಹಾಚೌಪಾಲ್' ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್, ‘ಇದು ಒಪ್ಪಂದವಲ್ಲ, ಬದಲಾಗಿ ದೇಶದ ರೈತರ ಹೃದಯಕ್ಕೆ ಹೊಡೆದ ಬಾಣ’ ಎಂದಿದ್ದಾರೆ.
.ರೈತ ವಿರೋಧಿ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಿ: ಮೋದಿಗೆ ರಾಹುಲ್ ಆಗ್ರಹ.
ನವದೆಹಲಿ: ಕೇರಳ ಸರ್ಕಾರದ ಮನವಿಯಂತೆ ರಾಜ್ಯದ ಹೆಸರನ್ನು ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ವರ್ಷದ ಏಪ್ರಿಲ್–ಮೇ ತಿಂಗಳಲ್ಲಿ ಕೇರಳದಲ್ಲಿ ಚುನಾವಣೆಗಳು ಜರುಗಲಿದ್ದು, ಅದಕ್ಕೂ ಮುನ್ನ ಈ ಬೆಳವಣಿಗೆಯಾಗಿದೆ.
.ಕೇರಳ ಶೀಘ್ರದಲ್ಲೇ ‘ಕೇರಳಂ‘: ಹೆಸರು ಬದಲಾವಣೆಗೆ ಕೇಂದ್ರ ಸಂಪುಟ ಒಪ್ಪಿಗೆ ಮುದ್ರೆ.
ಮುಂಬೈ: ‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ತಂತ್ರಜ್ಞಾನ ಉದ್ಯಮವು ₹28.64 ಲಕ್ಷ ಕೋಟಿಯಷ್ಟು ವರಮಾನ ಕಾಣುವ ನಿರೀಕ್ಷೆ ಇದೆ’ ಎಂದು ಐ.ಟಿ ಉದ್ಯಮಗಳ ಸಂಘಟನೆ ನಾಸ್ಕಾಂ ಮಂಗಳವಾರ ತಿಳಿಸಿದೆ.
.ತಂತ್ರಜ್ಞಾನ ಉದ್ಯಮ: ₹28 ಲಕ್ಷ ಕೋಟಿ ವರಮಾನ ನಿರೀಕ್ಷೆ.
ಹುಬ್ಬಳ್ಳಿ: ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಮ್ಮು–ಕಾಶ್ಮೀರ ತಂಡವು ಶುಭಂ ಪುಂಡಿರ್ ಅವರ ಅಜೇಯ ಶತಕದ ನೆರವಿನಿಂದ ಮೊದಲ ದಿನ ಮೇಲುಗೈ ಸಾಧಿಸಿದೆ.
.Ranji Trophy| ಶುಭಂ ಪುಂಡಿರ್ ಶತಕ: ಮೊದಲ ದಿನ ಮೇಲುಗೈ ಸಾಧಿಸಿದ ಜಮ್ಮು–ಕಾಶ್ಮೀರ.
ಕೀವ್: ‘ಪುಟಿನ್ ಈ ಯುದ್ಧದಲ್ಲಿ ಗೆದ್ದಿಲ್ಲ ಮತ್ತು ಉಕ್ರೇನ್ ನಾಗರಿಕರ ಆತ್ಮವಿಶ್ವಾಸವನ್ನು ಕುಗ್ಗಿಸಿಲ್ಲ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಂಗಳವಾರ ಹೇಳಿದ್ದಾರೆ. ಉಕ್ರೇನ್ –ರಷ್ಯಾ ನಡುವಿನ ಯುದ್ಧ ಆರಂಭಗೊಂಡು ನಾಲ್ಕು ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಮಾತನಾಡಿರುವ ಅವರು, ಯುದ್ಧ ಆರಂಭವಾದಾಗಿನಿಂದ ಈವರೆಗೆ ನಾವು ನಮ್ಮ ಸ್ವಾತಂತ್ರ್ಯವನ್ನು, ರಾಷ್ಟ್ರ ಸ್ಥಾನಮಾನವನ್ನು ಬಿಟ್ಟುಕೊಟ್ಟಿಲ್ಲ’ ಎಂದಿದ್ದಾರೆ.
.ರಷ್ಯಾ–ಉಕ್ರೇನ್ ಯುದ್ಧಕ್ಕೆ 4 ವರ್ಷ: ಪುಟಿನ್ ಗೆದ್ದಿಲ್ಲ ಎಂದ ಝೆಲೆನ್ಸ್ಕಿ .
ಬೆಂಗಳೂರು: ದೇಶವಿರೋಧಿ ಚಿಂತನೆಯ ಕಾರ್ಯಕ್ರಮಗಳಿಗೆ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ಇರುವ ಅಜೀಂ ಪ್ರೇಮ್ ಜೀ ವಿಶ್ವವಿದ್ಯಾಲಯವು ವೇದಿಕೆ ಕಲ್ಪಿಸುತ್ತಿದೆ ಎಂದು ಆರೋಪಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಸದಸ್ಯರು, ಮಂಗಳವಾರ ಸಂಜೆ ವಿ,ವಿಗೆ ನುಗ್ಗಲು ಯತ್ನಿಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು.
.ಅಜೀಂ ಪ್ರೇಮ್ ಜೀ ವಿ.ವಿ ಆವರಣಕ್ಕೆ ನುಗ್ಗಲು ABVP ಯತ್ನ: ಪ್ರತಿಭಟನಕಾರರು ವಶಕ್ಕೆ.
ಬೆಂಗಳೂರು: ಎಲ್ಲಾ 7 ದಿನಗಳ ಮತ್ತು 15 ದಿನಗಳ ನೋಟಿಸ್ ಅವಧಿ ಹೊಂದಿರುವ ಮ್ಯುಟೇಶನ್ಗಳನ್ನು ನೋಟಿಸ್ ಅವಧಿ ಮುಕ್ತಾಯವಾದ ನಂತರ ತಂತ್ರಾಂಶದ ಮೂಲಕ ಮಾನವ ಹಸ್ತಕ್ಷೇಪ ಇಲ್ಲದೆ ಸರ್ವರ್ ಸಹಿ ಮೂಲಕ ಸ್ವಯಂ ಚಾಲಿತವಾಗಿ ಅನುಮೋದನೆಗೊಳ್ಳುವ ಹೊಸ ವ್ಯವಸ್ಥೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಚಾಲನೆ ನೀಡಿದ್ದಾರೆ.
.ಸ್ವಯಂ ಚಾಲಿತ ಮ್ಯುಟೇಶನ್ಗೆ ಚಾಲನೆ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡ.
ಬೆಂಗಳೂರು: ‘ನೀವು ರಣವೀರ್ ಸಿಂಗ್ ಅಥವಾ ಸೂಪರ್ ಸ್ಟಾರ್ ಇರಬಹುದು. ಆದರೆ, ಸಾರ್ವಜನಿಕರ ಮುಂದೆ ನಿಂತು ಮಾತನಾಡುವಾಗ ನಾಲಗೆ ಮೇಲೆ ಹತೋಟಿ ಇಟ್ಟುಕೊಂಡಿರಬೇಕು. ನೆದರು ತಪ್ಪಿ ಆಡಿದ ಹಗುರ ಮಾತಿಗೆ ಕ್ಷಮೆ ಕೇಳಿದ್ದೇನೆ ಎಂದಾಕ್ಷಣ ಅದು ಮಾಸಿ ಹೋಗುವುದಿಲ್ಲ. ತಪ್ಪನ್ನು ಮನ್ನಿಸಿದಂತಾಗುವುದಿಲ್ಲ. ಜನರ ಮನಸ್ಸಿನಿಂದ ನೆನಪುಗಳನ್ನು ಅಳಿಸಬಹುದು. ಆದರೆ ಇಂಟರ್ನೆಟ್ನಿಂದ ಅಳಿಸಲಾಗದು ಎಂಬುದನ್ನು ಮರೆಯಬೇಡಿ...!
.ಧಾರ್ಮಿಕ ಭಾವನೆಗಳ ಚೇಷ್ಟೆ ಸಲ್ಲ: ನಟ ರಣವೀರ್ ಸಿಂಗ್ಗೆ ಕರ್ನಾಟಕ ಹೈಕೋರ್ಟ್ ತರಾಟೆ.
ಗ್ವಾದಲಹಾರ (ಮೆಕ್ಸಿಕೊ): ಮೆಕ್ಸಿಕೊದ ಡ್ರಗ್ಸ್ ಜಾಲದ ಪಾತಕಿ, ‘ಹಾಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್’ (ಸಿಜೆಎನ್ಜಿ) ಮುಖ್ಯಸ್ಥ ‘ಎಲ್ ಮೆಂಚೊ’ನನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಹಾಗೂ ಆತನ ಹತ್ಯೆ ನಂತರ ನಡೆದ ಹಿಂಸಾಚಾರದಲ್ಲಿ 74 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಭದ್ರತಾ ಪಡೆಯ 27 ಯೋಧರು, 46 ಶಂಕಿತ ಆರೋಪಿಗಳು ಹಾಗೂ ನಾಗರಿಕರೊಬ್ಬರು ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
.ಮೆಕ್ಸಿಕೊ | ಎಲ್ ಮೆಂಚೊ ವಿರುದ್ಧ ಕಾರ್ಯಾಚರಣೆ, ಹಿಂಸಾಚಾರ: 74 ಮಂದಿ ಹತ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.