ನಮ್ಮ ಮೆಟ್ರೊ ಪ್ರಯಾಣದರ ಶೇ 5ರಷ್ಟು ಹೆಚ್ಚಳ ಸೇರಿದಂತೆ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯಕ್ಕೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ್ದಾರೆ.

ಈ ಸಂಬಂಧ ಅವರು ಎಕ್ಸ್ ಪೋಸ್ಟ್ನಲ್ಲಿ ಮಾಹಿತಿ ನೀಡಿದ್ದು, ಕೇಂದ್ರದ ರೈಲ್ವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಾಹಿತಿ ಪ್ರಸಾರ ಖಾತೆ ಸಚಿವರಾದ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಸಂಬಂಧಿಸಿದ ಪ್ರಮುಖ ಅಭಿವೃದ್ಧಿ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಲಾಯಿತು ಎಂದು ತಿಳಿಸಿದ್ದಾರೆ.
.ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ರಾಜ್ಯದ ಯೋಜನೆಗಳ ಬಗ್ಗೆ HDK ಚರ್ಚೆ.
ನಮ್ಮ ಮೆಟ್ರೊ ಪ್ರಯಾಣದರ ಶೇ 5ರಷ್ಟು ಹೆಚ್ಚಳ ಮಾಡುವ ಬಿಎಂಆರ್ಸಿಎಲ್ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಸದ್ಯ ಮೆಟ್ರೊ ಪ್ರಯಾಣದ ಕನಿಷ್ಠ ದರ ₹ 10 ಹಾಗೂ ಗರಿಷ್ಠ ದರ ₹ 90 ಇದೆ. ಈ ಪರಿಷ್ಕರಣೆ ಮೂಲಕ ಮೆಟ್ರೊ ಪ್ರಯಾಣದರ ಮತ್ತಷ್ಟು ಏರಿಕೆಯಾಗಲಿದೆ.
.ಬೆಂಗಳೂರು ಮೆಟ್ರೊ ಪ್ರಯಾಣದರ ಶೇ 5ರಷ್ಟು ಏರಿಕೆ: ಸರ್ಕಾರದ ಸಮ್ಮತಿ .
ಕಲಬುರಗಿ: ಮೊಟ್ಟೆ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ವೇಳೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
.ಮಕ್ಕಳು ತಿನ್ನೋ ಮೊಟ್ಟೆ ಹಣ ಗುಳುಂ ಮಾಡಲು ಹೊರಟ ಇಬ್ಬರು ಲೋಕಾಯುಕ್ತ ಬಲೆಗೆ.
ಭಾರತದೊಂದಿಗಿನ ಹೊಸ ವ್ಯಾಪಾರ ಒಪ್ಪಂದವನ್ನು ಶ್ವೇತಭವನ ಶ್ಲಾಘಿಸಿದ್ದು. ಭಾರತ ಇನ್ನುಮುಂದೆ ರಷ್ಯಾದ ತೈಲವನ್ನು ಖರೀದಿಸುವುದಿಲ್ಲ ಹಾಗೂ ಪ್ರಧಾನಿ ನರೇಂದ್ರ ಮೋದಿ ಕೂಡ ಅಮೆರಿಕದ ಪ್ರಮುಖ ವಲಯಗಳಲ್ಲಿ ಸುಮಾರು ₹41.50 ಲಕ್ಷ ಕೋಟಿ ($500 ಬಿಲಿಯನ್) ಹೂಡಿಕೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಶ್ವೇತಭವನ ಅಧಿಕೃತ ಹೇಳಿಕೆ ನೀಡಿದೆ.
.ಭಾರತ ಇನ್ನು ರಷ್ಯಾದಿಂದ ತೈಲ ಖರೀದಿಸಲ್ಲ: ಶ್ವೇತಭವನ ‘ಅಧಿಕೃತ’ ಹೇಳಿಕೆ.
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕೇಂದ್ರ ಸಚಿವ ರವನೀತ್ ಬಿಟ್ಟು ನಡುವೆ ಬುಧವಾರ ಸಂಸತ್ ಭವನದಲ್ಲಿ ಸಣ್ಣ ಪ್ರಮಾಣದ ಮಾತಿನ ಚಕಮಕಿ ನಡೆಯಿತು.
.‘ನನ್ನ ದೇಶದ್ರೋಹಿ ಸ್ನೇಹಿತ’; ಕೇಂದ್ರ ಸಚಿವರನ್ನು ಹೀಗೆ ಕರೆದಿದ್ದು ಯಾಕೆ ರಾಹುಲ್?.
ಪೊಖಾರಾ (ನೇಪಾಳ): ಭಾರತ ಯುವ ಮಹಿಳಾ ತಂಡವು ತನ್ನ ಕೊನೆಯ ರೌಂಡ್ರಾಬಿನ್ ಪಂದ್ಯದಲ್ಲಿ ಬುಧವಾರ 8–0 ಗೋಲುಗಳಿಂದ ಭೂತಾನ್ ತಂಡವನ್ನು ಸದೆಬಡಿದು ಸ್ಯಾಫ್ 19 ವರ್ಷದೊಳಗಿನರ ಫುಟ್ಬಾಲ್ ಟೂರ್ನಿಯ ಫೈನಲ್ ತಲುಪಿತು. ಶನಿವಾರ ನಡೆಯುವ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.

ನವದೆಹಲಿ: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜ್ಯದ ಪರ ಎತ್ತಿದ್ದಾರೆ.
.ಸುಪ್ರೀಂ ಕೋರ್ಟ್ನಲ್ಲಿ ರಾಜ್ಯದ ಪರ ಧ್ವನಿ ಎತ್ತಿದ ಪ.ಬಂಗಾಳ CM ಮಮತಾ ಬ್ಯಾನರ್ಜಿ.
ನವದೆಹಲಿ: ಬ್ಯಾಟ್ ಹಿಡಿಯಲು ಬಾರದವರೆಲ್ಲಾ ಕ್ರಿಕೆಟ್ ಆಡಳಿತ ಮಾಡಬಾರದು. ಮಾಜಿ ಆಟಗಾರರು ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
.ಬ್ಯಾಟ್ ಹಿಡಿಯಲು ಬಾರದವರೆಲ್ಲಾ ಕ್ರಿಕೆಟ್ ಆಡಳಿತ ಮಾಡಬಾರದು: ಸುಪ್ರೀಂ ಕೋರ್ಟ್.
ಮುಂಬೈ: ಮಾಹಿತಿ ತಂತ್ರಜ್ಞಾನ ವಲಯದ ಕಂಪನಿಗಳ ಷೇರುಗಳು ಮಾರಾಟದ ಒತ್ತಡಕ್ಕೆ ಸಿಲುಕಿದ್ದರಿಂದ ದೇಶದ ಷೇರುಪೇಟೆ ಸೂಚ್ಯಂಕಗಳು ಬುಧವಾರದ ಆರಂಭದ ವಹಿವಾಟಿನಲ್ಲಿ ಗಳಿಸಿದ್ದ ಏರಿಕೆಯನ್ನು ಅಂತ್ಯದವರೆಗೂ ಉಳಿಸಿಕೊಳ್ಳಲಿಲ್ಲ.
.Stock Markets: ಏರಿಳಿತ ಕಂಡ ಷೇರುಪೇಟೆ ಸೂಚ್ಯಂಕ.
ಬೆಂಗಳೂರು: ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕನ ಧ್ವನಿ ಅಡಗಿಸುವ ಪ್ರಯತ್ನ ನಿರಂತರವಾಗಿ ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿರುವ ಆಡಳಿತ ಪಕ್ಷದ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಅವಕಾಶ ನೀಡದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಪೋಸ್ಟ್ ಮೂಲಕ ಕಿಡಿಕಾರಿದ್ದಾರೆ.
.ಸಂಸತ್ತಿನಲ್ಲಿ ವಿಪಕ್ಷ ನಾಯಕನ ಧ್ವನಿ ಅಡಗಿಸುವ ಯತ್ನ ನಡೆಯುತ್ತಿದೆ: ಸಿದ್ದರಾಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.