ಲಖನೌ: ಉತ್ತರ ಪ್ರದೇಶದ ಸಂಭಲ್ನಲ್ಲಿ 1947ರಿಂದ ಇಲ್ಲಿಯವರೆಗೆ ನಡೆದ ಕೋಮುಗಲಭೆಗಳಲ್ಲಿ 209 ಹಿಂದೂಗಳನ್ನು ಹತ್ಯೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.

ಸಂಭಲ್ನ ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ಕೋರ್ಟ್ ಆದೇಶ ನೀಡಿದ ಬಳಿಕ ನ.24ರಂದು ನಡೆದ ಗಲಭೆಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರು. ಚಳಿಗಾಲದ ಅಧಿವೇಶನದ ಮೊದಲ ದಿನವಾದ ಸೋಮವಾರ ವಿಧಾನಸಭೆಯಲ್ಲಿ ಸಂಭಲ್ ಹಿಂಸಾಚಾರದ ಕುರಿತು ಸಿಎಂ ಯೋಗಿ ಆದಿತ್ಯನಾಥ ಮಾತನಾಡಿದ್ದಾರೆ.

‘ಸ್ವಾತಂತ್ರ್ಯ ನಂತರ ಸಂಭಲ್ನಲ್ಲಿ ಅನೇಕ ಕೋಮುಗಲಭೆಗಳು ನಡೆದಿರುವ ಸುದೀರ್ಘ ಇತಿಹಾಸವನ್ನು ಕಾಣಬಹುದಾಗಿದೆ. ಆದೇ ರೀತಿ ಸಮೀಕ್ಷೆ ಮಾಡಲಾದ ಮಸೀದಿಯು ಹಿಂದೂ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಮುಸ್ಲಿಂ ಪ್ರಾಬಲ್ಯದ ಸಂಭಲ್ ಪಟ್ಟಣವು ‘ದೇಶಿ’ ಮತ್ತು ‘ವಿದೇಶಿ’ ಮುಸ್ಲಿಮರು ನಡುವಿನ ಹೋರಾಟಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದ್ದಾರೆ.

‘ಸಂಭಲ್ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರ ಸಾವಿನ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿರುವವರು ವಿಪಕ್ಷ ನಾಯಕರು ಹಿಂದೂಗಳ ಹತ್ಯೆಯ ಬಗ್ಗೆ ಯಾವತ್ತೂ ಮಾತನಾಡಿಲ್ಲ’ ಎಂದು ಯೋಗಿ ವಾಗ್ದಾಳಿ ನಡೆಸಿದ್ದಾರೆ.

ಸಂಭಲ್ನಲ್ಲಿ ಸಾಲ ನೀಡಿದ್ದ ವೈಶ್ಯ ಸಮುದಾಯದ ಉದ್ಯಮಿಯೊಬ್ಬರನ್ನು ಹತ್ಯೆ ಮಾಡಲಾಗಿತ್ತು. ಸಾಲಕ್ಕೆ ಬಡ್ಡಿ ಪಡೆದರು ಎಂಬ ಕಾರಣಕ್ಕೆ ಅವರ (ಉದ್ಯಮಿ) ಕೈಗಳನ್ನು ಕತ್ತರಿಸಿ ಚಿತ್ರಹಿಂಸೆ ನೀಡಲಾಗಿತ್ತು ಎಂಬ ಘಟನೆಯನ್ನು ಯೋಗಿ ಮೆಲುಕು ಹಾಕಿದ್ದಾರೆ.

ಹರಿಹರ ದೇಗುಲವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ. ಈ ಕುರಿತು ಮೊಘಲ್ ಚಕ್ರವರ್ತಿ ಬಾಬರ್ ಕುರಿತಾದ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸಂಭಲ್ನಲ್ಲಿ ಕೆಲವು ದಿನಗಳ ಹಿಂದೆ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶದಲ್ಲಿ ಪತ್ತೆಯಾಗಿರುವ ಪ್ರಾಚೀನ ಭಸ್ಮ ಶಂಕರ್ ದೇವಾಲಯ ಮತ್ತು ಅಲ್ಲಿನ ಬಾವಿಯೊಳಗೆ ಮೂರು ಭಗ್ನ ಮೂರ್ತಿಗಳು ಪತ್ತೆಯಾಗಿವೆ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ.

ಇದೇ ವೇಳೆ ‘ಜೈ ಶ್ರೀರಾಮ್’ ಘೋಷಣೆ ‘ಕೋಮುವಾದ’ ಅಲ್ಲ ಎಂದು ಪ್ರತಿಪಾದಿಸಿರುವ ಯೋಗಿ, ಹಬ್ಬಗಳ ಸಂದರ್ಭದಲ್ಲಿ ಮುಸ್ಲಿಮರ ಮೆರವಣಿಗೆಗಳು ಹಿಂದೂ ಪ್ರದೇಶಗಳಲ್ಲಿ ಶಾಂತಿಯುತವಾಗಿ ಹಾದುಹೋಗುತ್ತವೆ. ಆದರೆ, ಹಿಂದೂಗಳು ನಡೆಸುವ ಮೆರವಣಿಗೆ ಶಾಂತಿಯುತ ವಾತಾವರಣ ಇರುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.
.ಬಡವರ ಭೂಮಿ ಆಕ್ರಮಿಸಿದವರಿಗೆ ತಕ್ಕ ಪಾಠ: ಯೋಗಿ ಆದಿತ್ಯನಾಥ.ನಂಕಾನಾ ಸಾಹಿಬ್ ಇನ್ನೆಷ್ಟು ವರ್ಷ ನಮ್ಮಿಂದ ದೂರ ಇರಬೇಕು: ಯೋಗಿ ಆದಿತ್ಯನಾಥ.ಬಾಬರ್ ಸೇನಾಧಿಪತಿ ಮಾಡಿದ್ದನ್ನೇ ಬಾಂಗ್ಲಾದಲ್ಲೂ ಮಾಡಲಾಗುತ್ತಿದೆ: ಯೋಗಿ ಆದಿತ್ಯನಾಥ.ಮಹಿಳೆಯರ ರಕ್ಷಣೆ ಬದ್ಧ: ತಪ್ಪಿತಸ್ಥರ ಕೈ–ಕಾಲು ಕತ್ತರಿಸುತ್ತೇವೆ: ಯೋಗಿ ಆದಿತ್ಯನಾಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.