ನವದೆಹಲಿ: ಬಾಹ್ಯಾಕಾಶ ಕೇಂದ್ರದಲ್ಲಿ 9 ತಿಂಗಳುಗಳ ಕಾಲ ಸಿಲುಕಿದ್ದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ಮರಳಿದ್ದಾರೆ.

9 ತಿಂಗಳು ಅಂದರೆ 286 ದಿನಗಳ ಕಾಲ ಗುರುತ್ವಾಕರ್ಷಣೆ ಇಲ್ಲದೆ ಬಾಹ್ಯಾಕಾಶದಲ್ಲಿ ನೆಲೆಸಿದ್ದ ಕಾರಣ ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಗುರುತ್ವಾಕರ್ಷಣೆಗೆ ಒಳಗಾದ ಮೇಲೆ ಅವರು ತಲೆತಿರುಗುವಿಕೆ, ವಾಕರಿಕೆ ಮತ್ತು ನಡಿಗೆಯಲ್ಲಿ ಸಮಸ್ಯೆ ಅನುಭವಿಸುತ್ತಾರೆ ಎಂದು ವರದಿ ತಿಳಿಸಿದೆ.
.ಸುನಿತಾ ವಿಲಿಯಮ್ಸ್, ಬುಚ್ ಬಂದಿಳಿದ ಕ್ಷಣ ಹೇಗಿತ್ತು?: ವಿಡಿಯೊ ನೋಡಿ.
ಈ ಹಿಂದೆ ಬಾಹ್ಯಾಕಾಶ ಪ್ರಯಾಣಿಸಿದ ಗಗನಯಾತ್ರಿಗಳು ಭುವಿಗೆ ಮರಳಿದ ಮೇಲೆ ನಡೆಯಲು ತೊಂದರೆ, ದೃಷ್ಟಿ ದೋಷ, ತಲೆತಿರುಗುವಿಕೆ ಮತ್ತು ಮಗುವಿನಿಂತೆ ಹೆಜ್ಜೆ ಇಡುವ ಸ್ಥಿತಿಯನ್ನು ಎದುರಿಸಿದ್ದಾರೆ. ಬಾಹ್ಯಾಕಾಶದಲ್ಲಿ ಹೆಚ್ಚು ಕಾಲ ಇದ್ದಾಗ ಕಾಲಿನ ಅಡಿಭಾಗದಲ್ಲಿನ ದಪ್ಪ ಚರ್ಮದ ಭಾಗವನ್ನು ಕಳೆದುಕೊಳ್ಳುತ್ತಾರೆ, ಇದರಿಂದಾಗಿ ಭೂಮಿಗೆ ಮರಳಿದ ಮೇಲೆ ನಡೆಯಲು ಕಷ್ಟವಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
.9 ತಿಂಗಳ ಬಾಹ್ಯಾಕಾಶ ವಾಸ ಅಂತ್ಯ: ಸುರಕ್ಷಿತವಾಗಿ ಭುವಿಗಿಳಿದ ಸುನಿತಾ, ಬುಚ್.
ಗಗನಯಾತ್ರಿ ಭೂಮಿಗೆ ಹಿಂತಿರುಗಿದ ತಕ್ಷಣ, ಅವರು ಭೂಮಿಯ ಗುರುತ್ವಾಕರ್ಷಣೆಗೆ ಮರಳುತ್ತಾರೆ. ನಿಲ್ಲುವುದು, ನೋಡುವುದು, ನಡೆಯುವ ಸಮಸ್ಯೆಗಳನ್ನು ಅನುಭವಿಸಬಹುದು. ಹೀಗಾಗಿ ಅವರು ಬಂದ ತಕ್ಷಣ ಸುರಕ್ಷತೆಗಾಗಿ, ಕುರ್ಚಿಯಲ್ಲಿ ಕೂರಿಸಲಾಗುತ್ತದೆ. ಕಿವಿಯ ಒಳಭಾಗದಲ್ಲಿರುವ ವೆಸ್ಟಿಬುಲರ್ ಎನ್ನುವ ಅಂಗ ಭೂಮಿಯ ಮೇಲೆ ನಡೆಯುವಾಗ ಗುರುತ್ವಾಕರ್ಷಣೆಯ ಬಗ್ಗೆ ಮಾಹಿತಿಯನ್ನು ಮೆದುಳಿಗೆ ಕಳುಹಿಸುವ ಮೂಲಕ ದೇಹವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ ಎಂದು ಹೂಸ್ಟನ್ ಮೂಲದ ಬೇಲರ್ ಕಾಲೇಜ್ ಆಫ್ ಮೆಡಿಸಿನ್ ಬಾಹ್ಯಾಕಾಶದಲ್ಲಿನ ದೇಹದ ಬದಲಾವಣೆಗಳ ಕುರಿತು ಟಿಪ್ಪಣಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
.ನುಡಿದಂತೆ ನಡೆದಿದ್ದೇವೆ: ಭೂಮಿಗೆ ಮರಳಿದ ಸುನಿತಾ, ಬುಚ್ಗೆ ಟ್ರಂಪ್ ಸ್ವಾಗತ.
ಭೂಮಿಯ ಮೇಲೆ, ಗುರುತ್ವಾಕರ್ಷಣೆ ಬಲದಿಂದ ದೇಹದಲ್ಲಿನ ರಕ್ತ ಮತ್ತು ಇತರ ದ್ರವಗಳು ದೇಹದ ಕೆಳಗಿನ ಭಾಗಕ್ಕೆ ಎಳೆಯುತ್ತದೆ, ಆದರೆ ಬಾಹ್ಯಾಕಾಶದಲ್ಲಿ ಗುರುತ್ವಾಕರ್ಷಣೆ ಇಲ್ಲದ ಕಾರಣ ಗಗನಯಾತ್ರಿಗಳಿಗೆ, ಈ ದ್ರವಗಳು ದೇಹದ ಮೇಲ್ಭಾಗಗಳಲ್ಲಿ ಸಂಗ್ರಹವಾಗುತ್ತವೆ, ಇದರಿಂದಾಗಿ ದೇಹದ ಕೆಲವು ಭಾಗಗಳು ಉಬ್ಬಿಕೊಂಡಂತೆ ಕಾಣುತ್ತವೆ. ಅವುಗಳು ಸಹಜ ಸ್ಥಿತಿಗೆ ಮರಳಲು, ಭೂಮಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಅವರಿಗೆ ಹಲವು ವಾರಗಳೇ ಅಗತ್ಯವಿರುತ್ತದೆ ಎನ್ನುತ್ತದೆ ವರದಿ.
.ಸುನಿತಾ ವಿಲಿಯಮ್ಸ್, ಬುಚ್ ಹೊಸ ದಾಖಲೆ; ಬಾಹ್ಯಾಕಾಶದಲ್ಲಿ 5.5 ಗಂಟೆ ನಡಿಗೆ.ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸುವ ಮುನ್ನ ಫೋಟೊಗೆ ಪೋಸ್ ಕೊಟ್ಟ ಸುನಿತಾ, ಬುಚ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.