ಚಿತ್ರಗಳಲ್ಲಿ: ಸಿಡ್ನಿಯಲ್ಲಿ ಮರುಕಳಿಸಿದ ಜನಾಂಗೀಯ ನಿಂದನೆ ಎಪಿಸೋಡ್
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪ್ರೇಕ್ಷಕ ಗ್ಯಾಲರಿಯಿಂದ ಭಾರತೀಯ ಆಟಗಾರರ ವಿರುದ್ಧ ಜನಾಂಗೀಯ ನಿಂದನೆ ಎದುರಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಅಧಿಕೃತ ದೂರನ್ನು ಸಲ್ಲಿಸಿದೆ. ನಾಲ್ಕನೇ ದಿನದಾಟದಲ್ಲೂ ಮೊಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಪ್ರಸಂಗ ಎದುರಾಗಿತ್ತು. ಬಳಿಕ ನಾಯಕ ಅಜಿಂಕ್ಯ ರಹಾನೆ ಮುಖಾಂತರ ಅಂಪೈರ್ಗೆ ದೂರು ಸಲ್ಲಿಸಲಾಯಿತು. ತದಾ ನಂತರ ಭದ್ರತಾ ಸಿಬ್ಬಂದಿಗಳ ಸಹಾಯದೊಂದಿಗೆ ಆಪಾದಿತ ಆರು ಪ್ರೇಕ್ಷಕರನ್ನು ಗ್ಯಾಲರಿಯಿಂದ ಹೊರಹಾಕಲಾಯಿತು. ಚಿತ್ರ ಕೃಪೆ (ಎಎಫ್ಬಿ)
India vs Australia | Sydney | Racism | Mohammed Siraj |ಮೊಹಮ್ಮದ್ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ
ಅಂಪೈರ್ಗೆ ದೂರು ನೀಡುತ್ತಿರುವ ಅಜಿಂಕ್ಯ ರಹಾನೆ
ಮೂರನೇ ದಿನದಾಟದಲ್ಲೂ ಸಿರಾಜ್ ವಿರುದ್ಧ ಜನಾಂಗೀಯ ನಿಂದನೆ ಎದುರಾಗಿತ್ತು.
ಆಪಾದಿತ ಪ್ರೇಕ್ಷಕರನ್ನು ಗ್ಯಾಲರಿಯಿಂದ ಹೊರಹಾಕುತ್ತಿರುವ ಭದ್ರತಾ ಸಿಬ್ಬಂದಿಗಳು
ಆಸೀಸ್ ಅಭಿಮಾನಿಗಳ ಗುಂಪಿನಿಂದ ಭಾರತೀಯ ಮನೋಬಲ ಕುಗ್ಗಿಸುವ ಪ್ರಯತ್ನ
ಸಹ ಆಟಗಾರರ ಬೆಂಬಲಕ್ಕೆ ನಿಂತ ನಾಯಕ ಅಜಿಂಕ್ಯ ರಹಾನೆ
ಪಾನಮತ್ತರಾದ ಪ್ರೇಕ್ಷಕರಿಂದ ಅಸಭ್ಯ ವರ್ತನೆ
ಜಸ್ಪ್ರೀತ್ ಬೂಮ್ರಾ ವಿರುದ್ಧವೂ ಜನಾಂಗೀಯ ನಿಂದನೆ ನಡೆದಿದೆ
ಭಾರತ ಕ್ರಿಕೆಟ್ ತಂಡದ ಕ್ಷಮೆ ಕೋರಿದ ಕ್ರಿಕೆಟ್ ಆಸ್ಟ್ರೇಲಿಯಾ
ಪ್ರಕರಣದ ಬಗ್ಗೆ ಐಸಿಸಿ ತನಿಖೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಗಳಲ್ಲಿ: ಲಾಬುಷೇನ್ ಸೆಂಚುರಿ; ಸುಂದರ್-ನಟರಾಜನ್ ಪದಾರ್ಪಣೆ
ಭಾರತದ ಅನನುಭವಿ ಬೌಲಿಂಗ್ ಪಡೆಯ ಸ್ಪಷ್ಟ ಲಾಭವೆತ್ತಿರುವ ಆತಿಥೇಯ ಆಸ್ಟ್ರೇಲಿಯಾ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಮಾರ್ನಸ್ ಲಾಬುಷೇನ್ ಆಕರ್ಷಕ ಶತಕದ (108) ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 274 ರನ್ ಗಳಿಸಿದೆ. ಭಾರತದ ಪರ ವಾಷಿಂಗ್ಟನ್ ಸುಂದರ್ ಹಾಗೂ ಟಿ. ನಟರಾಜನ್ ಪದಾರ್ಪಣೆ ಮಾಡಿದರು. ಮೊದಲ ದಿನದಾಟದ ರೋಚಕ ಕ್ಷಣಗಳನ್ನು ಇಲ್ಲಿ ಕೊಡಲಾಗಿದೆ. ಚಿತ್ರ ಕೃಪೆ (ಎಎಫ್ಪಿ)
India vs Australia | Test cricket | Team India |ಪ್ರಥಮ ಓವರ್ನಲ್ಲೇ ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್
ಶಾರ್ದೂಲ್ ಠಾಕೂರ್ಗೆ ಚೊಚ್ಚಲ ಟೆಸ್ಟ್ ವಿಕೆಟ್
ಅತ್ಯುತ್ತಮ ಕ್ಯಾಚ್ ಹಿಡಿದ ರೋಹಿತ್ ಶರ್ಮಾ
ಗಾಯದ ಸಮಸ್ಯೆಗೆ ತುತ್ತಾದ ನವದೀಪ್ ಸೈನಿ
ಚೊಚ್ಚಲ ಪಂದ್ಯದಲ್ಲೇ ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್
ನೆಟ್ ಬೌಲರ್ ಆಗಿ ಕಾಣಿಸಿಕೊಂಡ ಬಳಿಕ ಎಲ್ಲ ಮಾದರಿಯಲ್ಲೂ ಪದಾರ್ಪಣೆ ಮಾಡಿದ ಟಿ. ನಟರಾಜನ್
ಬ್ಯಾಟಿಂಗ್ನಲ್ಲಿ ಮಿಂಚುವಲ್ಲಿ ವಿಫಲರಾದ ಕಳೆದ ಪಂದ್ಯದ ಹೀರೊ ಸ್ಟೀವನ್ ಸ್ಮಿತ್
ಅಮೋಘ ಶತಕ ಸಾಧನೆ ಮಾಡಿದ ಮಾರ್ನಸ್ ಲಾಬುಷೇನ್
ಗಾಬಾದಲ್ಲಿ ಬ್ರಾಡ್ಮನ್ ದಾಖಲೆ ಮುರಿದ ಲಾಬುಷೇನ್
ಅನನುಭವಿ ಬೌಲಿಂಗ್ ಪಡೆಯನ್ನು ನಿಭಾಯಿಸುತ್ತಿರುವ ನಾಯಕ ಅಜಿಂಕ್ಯ ರಹಾನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
ಚಿತ್ರಾವಳಿ: ಸಿಡ್ನಿಯಲ್ಲಿ ಸ್ಮರಣೀಯ 'ಡ್ರಾ' ಪಂದ್ಯದ ರೋಚಕ ಕ್ಷಣಗಳನ್ನು ಮಿಸ್ ಮಾಡದಿರಿ!
ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾ ಫಲಿತಾಂಶದಲ್ಲಿ ಅಂತ್ಯಕಂಡಿದೆ. ಜನಾಂಗೀಯ ನಿಂದನೆ, ಗಾಯದ ಸಮಸ್ಯೆ ಸೇರಿದಂತೆ ಹಲವಾರು ಸವಾಲುಗಳನ್ನು ಮೆಟ್ಟಿ ನಿಂತಿರುವ ಟೀಮ್ ಇಂಡಿಯಾ, ದಿಟ್ಟ ಹೋರಾಟ ನೀಡುವ ಮೂಲಕ ಐದನೇ ದಿನದಾಟದಲ್ಲಿ ಪಂದ್ಯವನ್ನು ಡ್ರಾಗೊಳಿಸುವಲ್ಲಿ ಯಶಸ್ವಿಯಾಗಿದೆ. (ಚಿತ್ರಕೃಪೆ: ಎಎಫ್ಪಿ)
India vs Australia | Sydney | Test cricket | Rishabh Pant |ಹನುಮ ವಿಹಾರಿ ಅವರನ್ನು ಅಪ್ಪಿಕೊಳ್ಳುತ್ತಿರುವ ನಾಯಕ ಅಜಿಂಕ್ಯ ರಹಾನೆ
ಹನುಮ ವಿಹಾರಿ-ರವಿಚಂದ್ರನ್ ಅಶ್ವಿನ್ ಅಜೇಯ ಜೊತೆಯಾಟ
ಚೇತೇಶ್ವರ ಪೂಜಾರ ಕಲಾತ್ಮಕ ಬ್ಯಾಟಿಂಗ್
ಮೂರು ರನ್ ಅಂತರದಿಂದ ಶತಕ ಮಿಸ್ ಮಾಡಿಕೊಂಡ ರಿಷಭ್ ಪಂತ್
ಚೇತೇಶ್ವರ ಪೂಜಾರ ಕ್ಲೀನ್ ಬೌಲ್ಡ್ ಮಾಡಿದ ಜೋಶ್ ಹ್ಯಾಜಲ್ವುಡ್
ಸುಲಭ ಕ್ಯಾಚ್ ಕೈಚೆಲ್ಲಿದ ಆಸೀಸ್ ನಾಯಕ ಟಿಮ್ ಪೇನ್
ಅಶ್ವಿನ್ಗೂ 'ಭಲೇ ಭೇಷ್' ಎಂದ ನಾಯಕ ರಹಾನೆ
ಸರಣಿ 1-1ರಲ್ಲಿ ಸಮಬಲ. ಗಾಬಾದತ್ತ ದೃಷ್ಟಿ ಹಾಯಿಸಿದ ಇತ್ತಂಡಗಳ ನಾಯಕರು
ಸಿಡ್ನಿ ಟೆಸ್ಟ್ ಪಂದ್ಯದ ರೋಚಕ ಕ್ಷಣ
ಸ್ಮರಣೀಯ ಡ್ರಾದಲ್ಲಿ ಭಾಗಿಯಾದ ವಿಹಾರಿ, ಅಶ್ವಿನ್
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
PHOTOS: ಸಿಡ್ನಿಯಲ್ಲಿ ಸಿಡಿದ ಸ್ಮಿತ್; ಗಿಲ್ ಚೊಚ್ಚಲ ಫಿಫ್ಟಿ
ಸಿಡ್ನಿ ಟೆಸ್ಟ್ನಲ್ಲಿ ಸ್ಟೀವನ್ ಸ್ಮಿತ್ ಅಮೋಘ ಶತಕದ (131) ಹೊರತಾಗಿಯೂ ಆಸೀಸ್ ತಂಡವನ್ನು 338 ರನ್ಗಳಿಗೆ ನಿಯಂತ್ರಿಸುವಲ್ಲಿ ಭಾರತ ಯಶಸ್ವಿಯಾಯಿತು. ಬಳಿಕ ಉತ್ತರ ನೀಡಿದ ಟೀಮ್ ಇಂಡಿಯಾ, ಶುಭಮನ್ ಗಿಲ್ ಚೊಚ್ಚಲ ಅರ್ಧಶತಕದ ನೆರವಿನಿಂದ ಎರಡನೇ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 96 ರನ್ ಗಳಿಸಿದೆ. ಪ್ರಸ್ತುತ ಪಂದ್ಯದ ರೋಚಕ ಚಿತ್ರಗಳ ಸಂಗ್ರಹ ಇಲ್ಲಿದೆ.
India vs Australia | Sydney | Steve Smith | Shubman Gill |27ನೇ ಟೆಸ್ಟ್ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಸ್ಟೀವನ್ ಸ್ಮಿತ್
ಭಾರತದ ವಿರುದ್ಧ ಸ್ಟೀವನ್ ಸ್ಮಿತ್ 8ನೇ ಶತಕ ಸಾಧನೆ
ಟಿಮ್ ಪೇನ್ ಕ್ಲೀನ್ ಬೌಲ್ಡ್ ಮಾಡಿದ ಜಸ್ಪ್ರೀತ್ ಬೂಮ್ರಾ
ನಾಲ್ಕು ವಿಕೆಟ್ ಕಬಳಿಸಿದ ಆಲ್ರೌಂಡರ್ ರವೀಂದ್ರ ಜಡೇಜ
ಕೋವಿಡ್-19 ಭೀತಿಯ ನಡುವೆಯೂ ಭಾರತೀಯ ಅಭಿಮಾನಿಗಳ ಬೆಂಬಲ
ಟೆಸ್ಟ್ ರನ್ ಬೇಟೆಯಲ್ಲೂ ಕೊಹ್ಲಿ ಹಿಂದಿಕ್ಕಿದ ಸ್ಮಿತ್
ಶುಭಮನ್ ಗಿಲ್ ಚೊಚ್ಚಲ ಅರ್ಧಶತಕ ಸಾಧನೆ
ಗಿಲ್ ಜೊತೆಗೆ 70 ರನ್ಗಳ ಜೊತೆಯಾಟದಲ್ಲಿ ಭಾಗಿಯಾದ ರೋಹಿತ್ ಶರ್ಮಾ
ಅಜಿಂಕ್ಯ ರಹಾನೆಯ ಕ್ಯಾಚ್ ಹಿಡಿಯಲು ವಿಫಲ ಯತ್ನ
ಅಂಪೈರ್ ಜೊತೆ ಆಸೀಸ್ ನಾಯಕ ಟಿಮ್ ಪೇನ್ ಸಮಾಲೋಚನೆ
ಇನ್ನಷ್ಟು ಆಲ್ಬಮ್ಗಳು
ಮುಂದಿನ ಆಲ್ಬಮ್
IND vs AUS: ಸಿಡ್ನಿ ಪಿಂಕ್ ಟೆಸ್ಟ್ನ 10 ರೋಚಕ ಕ್ಷಣಗಳನ್ನು ಆನಂದಿಸಿರಿ
ಚೊಚ್ಚಲ ಪಂದ್ಯ ಆಡುತ್ತಿರುವ ವಿಲ್ ಪುಕೊವಸ್ಕಿ (62) ಹಾಗೂ ಮಾರ್ನಸ್ ಲಾಬುಷೇನ್ (67*) ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯಾ ತಂಡವು ಭಾರತ ವಿರುದ್ಧ ಸಿಡ್ನಿಯಲ್ಲಿ ನಡೆಯುತ್ತಿರುವ ಮಳೆ ಬಾಧಿತ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿದೆ. ಪ್ರಸ್ತುತ ಪಂದ್ಯದ ಮೊದಲ ದಿನದ 10 ರೋಚಕ ಕ್ಷಣಗಳನ್ನು ಆನಂದಿಸಿರಿ. (ಚಿತ್ರ ಕೃಪೆ: ಎಎಫ್ಪಿ)
India vs Australia | Sydney | Test cricket |ರಾಷ್ಟ್ರಗೀತೆ ವೇಳೆ ಭಾವುಕರಾದ ಮೊಹಮ್ಮದ್ ಸಿರಾಜ್
ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿದ ವಿಲ್ ಪುಕೊವಸ್ಕಿ
ಭಾರತ vs ಆಸ್ಟ್ರೇಲಿಯಾ ಪಂದ್ಯಕ್ಕೆ ವರುಣನ ಅವಕೃಪೆ
ಚೊಚ್ಚಲ ಟೆಸ್ಟ್ ವಿಕೆಟ್ ಪಡೆದ ನವದೀಪ್ ಸೈನಿ
ಸೈನಿ ಜೊತೆ ಸಂಭ್ರಮ ಹಂಚಿಕೊಳ್ಳುತ್ತಿರುವ ರೋಹಿತ್ ಶರ್ಮಾ
ಭಾರತವನ್ನು ಕಾಡಿದ ಮಾರ್ನಸ್ ಲಾಬುಷೇನ್
ಮೊದಲ ದಿನ ವಿಕೆಟ್ ಪಡೆಯುವಲ್ಲಿ ವಿಫಲರಾದ ಜಸ್ಪ್ರೀತ್ ಬೂಮ್ರಾ
ಸುಲಭ ಕ್ಯಾಚ್ ಕೈಚೆಲ್ಲಿದ ವಿಕೆಟ್ ಕೀಪರ್ ರಿಷಭ್ ಪಂತ್
ಸ್ಟೀವನ್ ಸ್ಮಿತ್ ಹಾಗೂ ಆರ್. ಅಶ್ವಿನ್ ನಡುವೆ ಮುಂದುವರಿದ ಹಣಾಹಣಿ
ತಮ್ಮದೇ ಆದ ವಿಶಿಷ್ಟ ಬ್ಯಾಟಿಂಗ್ ಶೈಲಿಯಲ್ಲಿ ಮಿಂಚುತ್ತಿರುವ ಸ್ಟೀವನ್ ಸ್ಮಿತ್