ನವದೆಹಲಿ: ರೋಹಿತ್ ಶರ್ಮಾ ಅವರು ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳುತ್ತಿದ್ದಂತೆ, ತಂಡದ ನಾಯಕತ್ವಕ್ಕಾಗಿ ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಮತ್ತು ಯುವ ಆಟಗಾರ ಶುಭಮನ್ ಗಿಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಟೆಸ್ಟ್ ಕ್ರಿಕೆಟ್ನಲ್ಲಿ ರನ್ ಗಳಿಸಲು ದೀರ್ಘ ಸಮಯದಿಂದ ವಿಫಲರಾಗುತ್ತಿದ್ದ 38 ವರ್ಷದ ರೋಹಿತ್ ಬುಧವಾರ ಈ ಮಾದರಿಗೆ ವಿದಾಯ ಹೇಳಿದ್ದಾರೆ.

2024-25ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಕೇವಲ 1 ಪಂದ್ಯ ಗೆದ್ದಿತ್ತು. ಉಳಿದ ನಾಲ್ಕರಲ್ಲಿ ಒಂದು ಡ್ರಾ ಆದರೆ, ಉಳಿದ ಮೂರರಲ್ಲಿ ಸೋಲು ಎದುರಾಗಿತ್ತು. ಗೆದ್ದ ಒಂದು ಪಂದ್ಯದಲ್ಲಿ ತಂಡ ಮುನ್ನಡೆಸಿದ್ದು ಬೂಮ್ರಾ ಎಂಬುದು ವಿಶೇಷ. ಇದೇ ಕಾರಣಕ್ಕೆ ಬೂಮ್ರಾ ಹೆಸರು ಮುಂಚೂಣಿಯಲ್ಲಿದೆ. ಆದರೆ, ಗಾಯದ ಸಮಸ್ಯೆಯ ಕಾರಣಕ್ಕೆ ಅವರು ದೀರ್ಘ ಸಮಯದವರೆಗೆ ನಾಯಕರಾಗಿ ಮುಂದುವರಿಯುವುದು ಅನುಮಾನ. ಅದೇ ಕಾರಣಕ್ಕೆ ಅವರಿಗೆ ಅವಕಾಶ ಕೈತಪ್ಪಬಹುದು ಎನ್ನಲಾಗುತ್ತಿದೆ.

ಭಾರತ ತಂಡವು ಜೂನ್–ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಆ ವೇಳೆ, ಬೂಮ್ರಾ ತಂಡ ಮುನ್ನಡೆಸಬೇಕು. ಶುಭಮನ್ ಗಿಲ್ ಉಪನಾಯಕರಾಗಿರಲಿ ಎಂದು ಮಾಜಿ ನಾಯಕ ಅನಿಲ್ ಕುಂಬ್ಳೆ ಹೇಳಿದ್ದಾರೆ.

ಈ ಸರಣಿಯೊಂದಿಗೆ ಭಾರತ ತಂಡ ಟೆಸ್ಟ್ ಚಾಂಪಿಯನ್ಷಿಪ್ನ ನೂತನ ಆವೃತ್ತಿಯ ಅಭಿಯಾನ ಆರಂಭಿಸಲಿದೆ.

'ಈ ಸರಣಿಯಲ್ಲಿ ಬೂಮ್ರಾಗೆ ನಾಯಕತ್ವ ನೀಡಿ ನಂತರ ಅವರ ಫಿಟ್ನೆಸ್ ಹೇಗಿರಲಿದೆ ಎಂಬುದನ್ನು ನೋಡಬಹುದು' ಎಂದು ಕುಂಬ್ಳೆ ಹೇಳಿದ್ದಾರೆ.
.Rohit Sharma Retirement: ಟೆಸ್ಟ್ ಕ್ರಿಕೆಟ್ಗೆ ರೋಹಿತ್ ಶರ್ಮಾ ವಿದಾಯ.PHOTOS | ಟೆಸ್ಟ್ ಕ್ರಿಕೆಟ್ಗೆ 'ಹಿಟ್ಮ್ಯಾನ್' ಖ್ಯಾತಿಯ ರೋಹಿತ್ ವಿದಾಯ.
'ವೇಗದ ಬೌಲರ್ ನಾಯಕನಾಗಿ ಮುನ್ನಡೆಯುವುದು ಸುಲಭವಲ್ಲ ಎಂಬುದು ಗೊತ್ತಿದೆ. ಅವರು (ಜಸ್ಪ್ರೀತ್ ಬೂಮ್ರಾ) ಗಾಯದ ಸಮಸ್ಯೆಗಳನ್ನು ಎದುರಿಸಿದ್ದರು. ಆಸ್ಟ್ರೇಲಿಯಾ ಸರಣಿ ಬಳಿಕ ವಿರಾಮ ಪಡೆದಿದ್ದರು. ಇದೀಗ ಐಪಿಎಲ್ನಲ್ಲಿ ಆಡುತ್ತಿದ್ದಾರೆ. ಆದರೂ, ನಾನು ಬೂಮ್ರಾ ಅವರತ್ತ ನೋಡುತ್ತೇನೆ' ಎಂದಿದ್ದಾರೆ.

'ಬೂಮ್ರಾ ಎಲ್ಲ ಟೆಸ್ಟ್ ಪಂದ್ಯಗಳನ್ನು ಆಡಬೇಕು ಎಂದು ಪ್ರತಿಯೊಬ್ಬ ಭಾರತೀಯನೂ ಬಯಸುತ್ತಾನೆ. ಆದರೆ, ಅವರ ಫಿಟ್ನೆಸ್ ಅದಕ್ಕೆ ಅವಕಾಶ ನೀಡದಿರಬಹುದು' ಎಂದಿರುವ ಕುಂಬ್ಳೆ, ನಾಯಕತ್ವ ವಹಿಸಿಕೊಂಡು ಗಾಯಗೊಂಡರೆ, ಉಪನಾಯಕ ತಂಡದ ಹೊಣೆ ಹೊರಬಹುದು ಎಂದು ಪ್ರತಿಪಾದಿಸಿದ್ದಾರೆ. ಆ ಮೂಲಕ, ಬೂಮ್ರಾ ಪರ ಬ್ಯಾಟ್ ಬೀಸಿದ್ದಾರೆ.

ಕಾರ್ಯಭಾರ ನಿರ್ವಹಣೆ ದೃಷ್ಟಿಯಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಶುಭಮನ್ ಗಿಲ್ ಅವರತ್ತ ಮುಖ ಮಾಡುವ ಸಾಧ್ಯತೆ ಇದೆ. ಅವರು, ಐಪಿಎಲ್ನಲ್ಲಿ ಗುಜರಾತ್ ಟೈಟನ್ಸ್ ತಂಡ ಮುನ್ನಡೆಸುತ್ತಿದ್ದಾರೆ. ಈ ತಂಡ ಸದ್ಯ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ, ನಾಯಕತ್ವದ ಸಾಮರ್ಥ್ಯ ಸಾಬೀತು ಮಾಡಿರುವ ಅವರು, ದೀರ್ಘಾವಧಿಗೆ ಉತ್ತಮ ಆಯ್ಕೆಯಾಗಬಲ್ಲರು ಎನ್ನಲಾಗುತ್ತಿದೆ.

ಬೂಮ್ರಾ, ಗಿಲ್ ಜೊತೆಗೆ, ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರ ಹೆಸರುಗಳೂ ಕೇಳಿ ಬರುತ್ತಿವೆ.
.ಉತ್ತಮವಾಗಿ ಆಡುವವರೆಗೆ ರೋಹಿತ್, ಕೊಹ್ಲಿ ತಂಡದಲ್ಲಿರಲಿ: ಗೌತಮ್ ಗಂಭೀರ್.BCCI Central Contracts: ಟಾಪ್ ಗ್ರೇಡ್ನಲ್ಲಿ ರೋಹಿತ್, ಕೊಹ್ಲಿ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.