ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL – 2023 LSG vs DC| ಡೆಲ್ಲಿಗೆ 194ರನ್‌ಗಳ ಗುರಿ ನೀಡಿದ ಲಖನೌ

Last Updated 1 ಏಪ್ರಿಲ್ 2023, 16:02 IST
ಅಕ್ಷರ ಗಾತ್ರ

ಲಖನೌ: ಇಂಡಿಯನ್‌ ಪ್ರೀಮಿಯರ್ ಲೀಗ್‌ನ (ಐಪಿಎಲ್‌) 16ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 193ರನ್‌ಗಳ ಸವಾಲಿನ ಮೊತ್ತ ಗಳಿಸಿದೆ.

ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಟಾಸ್‌ ಗೆದ್ದಿದ್ದ ಡೆಲ್ಲಿ ಕ್ಯಾಪಿಟಲ್ಸ್, ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಬ್ಯಾಟಿಂಗ್‌ ಮಾಡಲು ಕಣಕ್ಕೆ ಇಳಿದ ಲಖನೌ ತಂಡಕ್ಕೆ ನಾಯಕ ಕೆ.ಎಲ್‌ ರಾಹುಲ್‌ (8) ಅವರ ವಿಕೆಟ್‌ ಪತನದೊಂದಿಗೆ ಆರಂಭಿಕ ಆಘಾತ ಎದುರಾಗಿತ್ತು.

ಆದರೆ, 38 ಎಸೆತಗಳಿಂದ ಎದುರಿಸಿ 73ರನ್‌ ಗಳಿಸಿ ಕೇಲ್‌ ಮೇಯರ್ಸ್‌ ತಂಡಕ್ಕೆ ಆಸರೆಯಾದರು. ಇನ್ನೊಂದೆಡೆ ನಿಕೊಲಸ್‌ ಪೂರನ್‌ 36 ರನ್‌ ಗಳಿಸಿ ತಂಡಕ್ಕೆ ನೆರವಾದರು. ಕಡೇ ಹಂತದಲ್ಲಿ ಮಿಂಚಿನಾಟ ಪ್ರದರ್ಶಿಸಿದ ಆಯುಷ್‌ ಬದೋನಿ, 7 ಎಸೆತಗಳಿಂದ 18ರನ್‌ ಗಳಿಸಿ ತಂಡದ ಮೊತ್ತ ಹೆಚ್ಚಾಗಲು ಕಾಣಿಕೆ ನೀಡಿದರು.

ಅಂತಿಮವಾಗಿ ಲಖನೌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟದೊಂದಿಗೆ 193ರನ್‌ ಗಳಿಸಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT