ಕೋಲ್ಕತ್ತ : ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ಮತ್ತು 20 ವರ್ಷ ವಯಸ್ಸಿನ ಹುಡುಗ ಅಂಗಕ್ರಿಷ್ ರಘುವಂಶಿ ಅವರ ಅರ್ಧಶತಕಗಳ ಬಳಿಕ ವೈಭವ್ ಅರೋರಾ (29ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಗುರುವಾರ ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯದಲ್ಲಿ 80 ರನ್ಗಳಿಂದ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸದೆಬಡಿಯಿತು.

ಹಾಲಿ ಚಾಂಪಿಯನ್ ಕೋಲ್ಕತ್ತ ತಂಡವು ನಾಲ್ಕು ಪಂದ್ಯಗಳಲ್ಲಿ ಎರಡನೇ ಗೆಲುವು ದಾಖಲಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿತು. ಮತ್ತೊಂದೆಡೆ ಹಾಲಿ ರನ್ನರ್ಸ್ ಅಪ್ ಹೈದರಾಬಾದ್ ತಂಡವು ಹ್ಯಾಟ್ರಿಕ್ ಸೋಲಿನೊಡನೆ ಕೊನೆಯ ಸ್ಥಾನಕ್ಕೆ ಜಾರಿತು. ಕಳೆದ ಆವೃತ್ತಿಯ ಫೈನಲ್ ಪಂದ್ಯ ಸೇರಿದಂತೆ ಕೋಲ್ಕತ್ತ ವಿರುದ್ಧ ಸನ್ರೈಸರ್ಸ್ ತಂಡಕ್ಕೆ ಇದು ಸತತ ಐದನೇ ಸೋಲಾಗಿದೆ.

ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಸನ್ರೈಸರ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತ ತಂಡವು ವೆಂಕಟೇಶ್ (60; 29ಎ, 4x7, 6x3) ಮತ್ತು ರಘುವಂಶಿ (50; 32ಎ, 4X5, 6X2) ಅವರ ಅರ್ಧಶತಕಗಳ ಬಲದಿಂದ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 200 ರನ್ ಗಳಿಸಿತು.

ಈ ಸವಾಲಿನ ಗುರಿಯನ್ನು ಬೆನ್ನತ್ತಿದ ಹೈದರಾಬಾದ್ ತಂಡವು 16.4 ಓವರ್ಗಳಲ್ಲಿ 120 ರನ್ಗಳಿಸಿ ಯಾವುದೇ ಹಂತದಲ್ಲಿ ಹೋರಾಟ ತೋರದೆ ಸೋಲೊಪ್ಪಿಕೊಂಡಿತು. ವೇಗಿಗಳಾದ ವೈಭವ್ ಮತ್ತು ಹರ್ಷಿತ್ ಠಾಣಾ (15ಕ್ಕೆ 1) ದಾಳಿಗೆ ಹೈದರಾಬಾದ್ ತಂಡವು ಆರಂಭದಲ್ಲೇ ಕುಸಿಯಿತು. ತಂಡವು 9 ರನ್ ಗಳಿಸುವಷ್ಟರಲ್ಲಿ ಟ್ರಾವಿಸ್ ಹೆಡ್ (4), ಅಭಿಷೇಕ್ ಶರ್ಮಾ (2) ಮತ್ತು ಇಶಾನ್ ಕಿಶನ್ (2) ಪೆವಿಲಿಯನ್ ಸೇರಿದ್ದರು.

ನಿತೀಶ್ ಕುಮಾರ್ ರೆಡ್ಡಿ (19), ಕಮಿಂದು ಮೆಂಡಿಸ್ (27;20ಎ) ಮತ್ತು ಹೆನ್ರಿಚ್ ಕ್ಲಾಸೆನ್ (33;21ಎ) ಕೊಂಚ ಹೋರಾಟ ತೋರಿದರು. ನಂತರದಲ್ಲಿ ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ (22ಕ್ಕೆ 3), ಆಂಡ್ರ್ಯೆ ರಸೆಲ್ (21ಕ್ಕೆ 2) ಮತ್ತು ಸುನಿಲ್ ನಾರಾಯಣ್ (31ಕ್ಕೆ 1) ಕೈಚಳಕದ ಮುಂದೆ ಸನ್ರೈಸರ್ಸ್ ಬ್ಯಾಟರ್ಗಳು ನಿರುತ್ತರರಾದರು.

ಅಯ್ಯರ್ ಆರ್ಭಟ: ಇದಕ್ಕೂ ಮೊದಲು ಕೋಲ್ಕತ್ತ ತಂಡದ ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ ಮತ್ತು ಸುನಿಲ್ ನಾರಾಯಣ್ 3ನೇ ಓವರ್ ಮುಗಿಯುವ ಮುನ್ನವೇ ಪೆವಿಲಿಯನ್ಗೆ ಮರಳಿದರು. ವೇಗಿ ಮೊಹಮ್ಮದ್ ಶಮಿ ಎಸೆತದಲ್ಲಿ ಸುನಿಲ್ ಅವರು ಕ್ಲಾಸೆನ್ಗೆ ಕ್ಯಾಚ್ ಆದರು. ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ನಲ್ಲಿ ಕ್ವಿಂಟನ್ ಡಿಕಾಕ್ ಅವರು ಜೀಶನ್ ಅನ್ಸಾರಿಗೆ ಕ್ಯಾಚಿತ್ತರು.

ಕೋಲ್ಕತ್ತ ತಂಡದ ನಾಯಕ ಅಜಿಂಕ್ಯ ರಹಾನೆ (38; 27ಎ, 4X1, 6X4) ಇನಿಂಗ್ಸ್ಗೆ ಸ್ಥಿರತೆ ಒದಗಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ ರಘುವಂಶಿ ಕೂಡ ಬೀಸಾಗಿ ಆಡಿದರು. ಇವರಿಬ್ಬರೂ 3ನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಸೇರಿಸಿದರು.

ಹಿಂದಿನ ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ವೆಂಕಟೇಶ್ ಈ ಪಂದ್ಯದಲ್ಲಿ ಕೊನೆಗೂ ಲಯ ಕಂಡುಕೊಂಡರು. ವೆಂಕಟೇಶ್ ಮತ್ತು ರಿಂಕು ಸಿಂಗ್ (ಔಟಾಗದೇ 32; 17ಎ, 4X4, 6X1) ಅವರ ಆರ್ಭಟಕ್ಕೆ ರನ್ಗಳು ವೇಗವಾಗಿ ಹರಿದುಬಂದವು. ಅವರ ಆಟದ ವೇಗಕ್ಕೆ ಇನಿಂಗ್ಸ್ನ ಕೊನೆಯ 5 ಓವರ್ಗಳಲ್ಲಿ 78 ರನ್ಗಳು ಸೇರಿದವು. ಇವರಿಬ್ಬರೂ ಐದನೇ ವಿಕೆಟ್ ಜೊತೆಯಾಟದಲ್ಲಿ 91 (41ಎಸೆತ) ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್ಗಳಲ್ಲಿ 6ಕ್ಕೆ 200 (ಅಜಿಂಕ್ಯ ರಹಾನೆ 38, ಅಂಗಕ್ರಿಷ್ ರಘುವಂಶಿ 50, ವೆಂಕಟೇಶ್ ಅಯ್ಯರ್ 60, ರಿಂಕು ಸಿಂಗ್ ಔಟಾಗದೇ 32, ಮೊಹಮ್ಮದ್ ಶಮಿ 29ಕ್ಕೆ1, ಪ್ಯಾಟ್ ಕಮಿನ್ಸ್ 44ಕ್ಕೆ1, ಜೀಶನ್ ಅನ್ಸಾರಿ 25ಕ್ಕೆ1, ಹರ್ಷಲ್ ಪಟೇಲ್ 43ಕ್ಕೆ1, ಕಮಿಂದು ಮೆಂಡಿಸ್ 4ಕ್ಕೆ1). ಸನ್ರೈಸರ್ಸ್ ಹೈದರಾಬಾದ್: 16.4 ಓವರ್ಗಳಲ್ಲಿ 120 (ನಿತೀಶ್ ಕುಮಾರ್ ರೆಡ್ಡಿ 17, ಕಮಿಂದು ಮೆಂಡಿಸ್ 27, ಹೆನ್ರಿಚ್ ಕ್ಲಾಸೆನ್ 33; ವೈಭವ್ ಅರೋರಾ 29ಕ್ಕೆ 3, ವರುಣ್ ಚಕ್ರವರ್ತಿ 22ಕ್ಕೆ 3, ಆಂಡ್ರ್ಯೆ ರಸೆಲ್ 21ಕ್ಕೆ 2). ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ 80 ರನ್ಗಳ ಜಯ. ಪಂದ್ಯದ ಆಟಗಾರ: ವೈಭವ್ ಅರೋರಾ

ಹನ್ನೊಂದರ ಬಳಗ

ಕೋಲ್ಕತ್ತ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್, ಸುನಿಲ್ ನಾರಾಯಣ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಎ.ರಘುವಂಶಿ, ಮೊಯೀನ್ ಅಲಿ, ಆ್ಯಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ

ಸನ್ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ನಿತೀಶ್ ಕುಮಾರ್ ರೆಡ್ಡಿ, ಅಂಕಿತ್ ವರ್ಮಾ, ಹೆನ್ರಿಚ್ ಕ್ಲಾಸೆನ್, ಕಮಿಂದು ಮೆಂಡಿಸ್, ಪ್ಯಾಟ್ ಕಮಿನ್ಸ್, ಹರ್ಷಲ್ ಪಟೇಲ್, ಸಿಮರ್ಜೀತ್ ಸಿಂಗ್, ಮೊಹಮ್ಮದ್ ಸಿರಾಜ್, ಜೀಷನ್ ಅನ್ಸಾರಿ

ಕಮಿಂದು ವಿಶಿಷ್ಟ ದಾಖಲೆ

ಸನ್ರೈಸರ್ಸ್ ಹೈದರಾಬಾದ್ ತಂಡದ ಆಲ್ರೌಂಡರ್ ಕಮಿಂದು ಮೆಂಡಿಸ್ ಐಪಿಎಲ್ ಇತಿಹಾಸದಲ್ಲಿ ವಿಶಿಷ್ಟ ದಾಖಲೆಯನ್ನು ಬರೆದರು.

ಗುರುವಾರದ ಪಂದ್ಯದಲ್ಲಿ ಅವರು ಒಂದೇ ಓವರ್ನಲ್ಲಿ ಎಡಗೈ ಮತ್ತು ಬಲಗೈ ಎರಡರಲ್ಲೂ ಬೌಲಿಂಗ್ ಮಾಡಿದರು. ವೆಂಕಟೇಶ್ ಅಯ್ಯರ್ ಮತ್ತು ಅಂಗಕ್ರಿಷ್ ರಘುವಂಶಿ ಅವರು ಕ್ರೀಸ್ನಲ್ಲಿದ್ದರು. ಈ ಓವರ್ನಲ್ಲಿ ಅವರು ಅಯ್ಯರ್ಗೆ ಕೆಲವು ಎಸೆತಗಳನ್ನು ಬಲಗೈನಲ್ಲಿ ಮತ್ತು ಅಂಗಕ್ರಿಷ್ಗೆ ಎಡಗೈನಲ್ಲಿ ಬೌಲ್ ಮಾಡಿದರು. ಅಂಗಕ್ರಿಷ್ ವಿಕೆಟ್ ಕೂಡ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.