ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

IPL 2025 | RCB vs KKR: ಇಂದು ನಿರ್ಣಾಯಕ ಆಟವಾಡಬಲ್ಲ ಐವರು ಬೌಲರ್‌ಗಳು

Published : 22 ಮಾರ್ಚ್ 2025, 9:56 IST
Last Updated : 22 ಮಾರ್ಚ್ 2025, 9:56 IST
ಫಾಲೋ ಮಾಡಿ
Comments
ಕೋಲ್ಕತ್ತದ ಸ್ಪಿನ್‌ ಸ್ನೇಹಿ ಪಿಚ್‌ನಲ್ಲಿ ವರುಣ್ ಚಕ್ರವರ್ತಿ ಅಪಾಯಕಾರಿಯಾಗಬಲ್ಲರು. ಮಿಸ್ಟರಿ ಸ್ಪಿನ್ನರ್‌ ಎಂದೇ ಖ್ಯಾತವಾಗಿರುವ ವರುಣ್‌, ಆತಿಥೇಯ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರು. ಕಳೆದ 12 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 11.13 ದರದಲ್ಲಿ 31 ವಿಕೆಟ್‌ಗಳನ್ನು ಕಬಳಿಸಿರುವ ವರುಣ್‌, ಐಪಿಎಲ್‌ನ 2023 ಹಾಗೂ 2024ರ ಆವೃತ್ತಿಗಳಲ್ಲಿ 28 ಇನಿಂಗ್ಸ್‌ಗಳಿಂದ 41 ವಿಕೆಟ್‌ ಉರುಳಿಸಿದ್ದಾರೆ. ಹೀಗಾಗಿ, ವಿಶ್ವಾಸ ಅಲೆಯಲ್ಲಿ ತೇಲುತ್ತಿರುವ ಅವರು, ಆರ್‌ಸಿಬಿಗೆ ಕಾಟ ನೀಡಲು ಸಜ್ಜಾಗಿದ್ದಾರೆ.

ಚಿತ್ರ: ಪಿಟಿಐ

ಐಪಿಎಲ್‌ನಲ್ಲಿ ಕಡಿಮೆ ಎಕಾನಮಿ ದರದಲ್ಲಿ ರನ್‌ ಬಿಟ್ಟುಕೊಟ್ಟ ವೇಗಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಹೆಸರು ಭುವನೇಶ್ವರ್ ಕುಮಾರ್‌ ಅವರದ್ದು. ಈ ಆವೃತ್ತಿಯಲ್ಲಿ ಆರ್‌ಸಿಬಿ ಬೌಲಿಂಗ್‌ನ ಪ್ರಮುಖ ಅಸ್ತ್ರವಾಗಿರುವ ಭುವಿ, ಸ್ವಿಂಗ್, ಸ್ಲೋವರ್‌, ಯಾರ್ಕರ್‌ ಮತ್ತು ಕರಾರುವಕ್‌ ಎಸೆತಗಳ ಮೂಲಕ ಎದುರಾಳಿಯನ್ನು ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 176 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಇವರು, 7.56ರ ದರದಲ್ಲಿ ರನ್‌ ಬಿಟ್ಟುಕೊಟ್ಟು 181 ವಿಕೆಟ್‌ಗಳನ್ನು ಪಡೆದಿದ್ದಾರೆ.

ಚಿತ್ರ: X / @RCBTweets

ಕೆಕೆಆರ್‌ ಪರ ಅತಿಹೆಚ್ಚು ವಿಕೆಟ್‌ ಉರುಳಿಸಿದ ಆಟಗಾರ ಎನಿಸಿರುವ ಸುನಿಲ್ ನಾರಾಯಣ್‌, ಇಂದಿನ ಪಂದ್ಯದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲರು. ವರುಣ್‌ ಚಕ್ರವರ್ತಿಯಂತೆಯೇ ಮಿಸ್ಟರಿ ಬೌಲರ್‌ ಆಗಿರುವ ಸುನಿಲ್, ಆರ್‌ಸಿಬಿಯ ಬ್ಯಾಟಿಂಗ್‌ ಬಲಕ್ಕೆ ಸವಾಲಾಗಬಲ್ಲರು. ಪವರ್‌ ಪ್ಲೇ ಸೇರಿದಂತೆ ಯಾವುದೇ ಹಂತದಲ್ಲಿ ಬೌಲಿಂಗ್‌ ಮಾಡುವ ಸಾಮರ್ಥಯ ನಾರಾಯಣ್‌ಗೆ ಇದೆ. 2012ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಕೆಕೆಆರ್‌ನಲ್ಲೇ ಇರುವ ಈ ಆಟಗಾರ, 175 ಇನಿಂಗ್ಸ್‌ಗಳಲ್ಲಿ 180 ವಿಕೆಟ್‌ಗಳನ್ನು ಪಡೆದಿದ್ದಾರೆ. ಕೇವಲ 6.73ರ ದರದಲ್ಲಿ ರನ್‌ ಬಿಟ್ಟುಕೊಟ್ಟಿರುವುದು ಅವರ ಸಾಮರ್ಥ್ಯಕ್ಕೆ ಸಾಕ್ಷಿ.

ಮೊದಲ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ಆರ್‌ಸಿಬಿ ಪಾಲಿಗೆ ನಿರ್ಣಾಯಕವಾಗಬಲ್ಲ ಮತ್ತೊಬ್ಬ ಆಟಗಾರ ಜೋಶ್ ಹ್ಯಾಜಲ್‌ವುಡ್‌. ಬಲಗೈ ವೇಗಿಯಾಗಿರುವ ಜೋಶ್‌, ವೇಗ, ಸ್ವಿಂಗ್‌ ಹಾಗೂ ಯಾರ್ಕರ್‌ಗಳನ್ನು ಪ್ರಯೋಗಿಸಬಲ್ಲ ಆಟಗಾರ. ಭುವನೇಶ್ವರ್‌ ಕುಮಾರ್‌ ಜೊತೆಗೂಡಿ ವೇಗದ ಬೌಲಿಂಗ್‌ಗೆ ಬಲದ ತುಂಬಲು ಸಜ್ಜಾಗಿದ್ದಾರೆ. ಐಪಿಎಲ್‌ನಲ್ಲಿ ಇದುವೆಗೆ 27 ಪಂದ್ಯ ಆಡಿರುವ ಜೋಶ್‌, 8.06ರ ದರದಲ್ಲಿ ರನ್‌ ಬಿಟ್ಟುಕೊಟ್ಟಿದ್ದು 35 ವಿಕೆಟ್‌ಗಳನ್ನು ಪಡೆದಿದ್ದಾರೆ.

ಕಳೆದ ಆವೃತ್ತಿಯಲ್ಲಿ ಆಡಿದ 11 ಪಂದ್ಯಗಳಲ್ಲಿ 19 ವಿಕೆಟ್‌ಗಳನ್ನು ಉರುಳಿಸಿದ್ದ ಹರ್ಷಿತ್‌ ರಾಣಾ, ಕೆಕೆಆರ್‌ನಲ್ಲಿರುವ ಪ್ರಮುಖ ಬೌಲರ್‌. ವೇಗದ ಜೊತೆಗೆ ನಿಧಾನಗತಿ ಎಸೆತಗಳನ್ನು ಪ್ರಯೋಗಿಸಬಲ್ಲ ಹರ್ಷಿತ್‌, ಯಾವುದೇ ಪರಿಸ್ಥಿತಿಯಲ್ಲೂ ವಿಕೆಟ್‌ ತಂದುಕೊಡಬಲ್ಲ ಆಟಗಾರ. ಕಳೆದ ಆವೃತ್ತಿಯಲ್ಲಿ ಶ್ರೇಯಸ್ ಅಯ್ಯರ್‌ ನಾಯಕತ್ವದಲ್ಲಿ ಕೋಲ್ಕತ್ತ ಚಾಂಪಿಯನ್‌ ಪಟ್ಟಕ್ಕೇರುವಲ್ಲಿ ರಾಣಾ ಪಾತ್ರವೂ ದೊಡ್ಡದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT