ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

IPL 2025 | RCB vs KKR: ಇಂದು ಈ ಐವರು ಬ್ಯಾಟರ್‌ಗಳ ಮೇಲೆ ನಿರೀಕ್ಷೆ

Published : 22 ಮಾರ್ಚ್ 2025, 10:54 IST
Last Updated : 22 ಮಾರ್ಚ್ 2025, 10:54 IST
ಫಾಲೋ ಮಾಡಿ
Comments
ಐಪಿಎಲ್‌ ಆರಂಭವಾದಾಗಿನಿಂದಲೂ ಆರ್‌ಸಿಬಿ ತಂಡದಲ್ಲೇ ಆಡುತ್ತಿರುವ ವಿರಾಟ್‌ ಕೊಹ್ಲಿ, ಪ್ರತಿ ಬಾರಿಯೂ ತಂಡದ ಪ್ರಮುಖ ಬ್ಯಾಟರ್‌ ಆಗಿ ಪ್ರದರ್ಶನ ನೀಡಿದ್ದಾರೆ. ಕೆಕೆಆರ್‌ ವಿರುದ್ಧವೂ ಅಮೋಘ ಆಟವಾಡಿದ ದಾಖಲೆ ಹೊಂದಿರುವ ಕೊಹ್ಲಿ, ಇಂದೂ ಉತ್ತಮವಾಟವಾಡುವ ಯೋಜನೆಯಲ್ಲಿದ್ದಾರೆ. ಒಟ್ಟು 244 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ, 8 ಶತಕ 55 ಅರ್ಧಶತಕ ಸಹಿತ 8,004 ರನ್‌ ಕಲೆಹಾಕಿದ್ದಾರೆ.

ಚಿತ್ರ: X / @RCBTweets

ಕಳೆದ ಆವೃತ್ತಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ಪರ ಆಡಿದ್ದ ಕ್ವಿಂಟನ್‌ ಡಿ ಕಾಕ್‌ ಈ ಸಲ ಕೆಕೆಆರ್‌ ಪರ ಕಣಕ್ಕಿಳಿಯುತ್ತಿದ್ದಾರೆ. ಐಪಿಎಲ್‌ನಲ್ಲಿ ಈವರೆಗೆ 107 ಪಂದ್ಯಗಳಲ್ಲಿ ಆಡಿರುವ ಈ ಬ್ಯಾಟರ್‌, ಎರಡು ಶತಕ ಮತ್ತು 23 ಅರ್ಧಶತಕ ಸಹಿತ 3,157 ರನ್‌ ಕಲೆಹಾಕಿದ್ದಾರೆ. ಕಳೆದ ಆವೃತ್ತಿಯಲ್ಲಿ ಕೆಕೆಆರ್‌ ಚಾಂಪಿಯನ್‌ ಪಟ್ಟಕ್ಕೇರಲು ನಿರ್ಣಾಯಕ ಪಾತ್ರ ವಹಿಸಿದ್ದ ಫಿಲ್‌ ಸಾಲ್ಟ್‌ ಸ್ಥಾನ ತುಂಬಲು ಡಿ ಕಾಕ್‌ ಸಜ್ಜಾಗಿದ್ದಾರೆ.

ಚಿತ್ರ: X / @KKRiders

ನಾಯಕನಾಗಿ ಬಡ್ತಿ ಪಡೆದಿರುವ ರಜತ್ ಪಾಟಿದಾರ್‌ ಅವರ ಮುಂದೆ, ಆರ್‌ಸಿಬಿಯ ಬ್ಯಾಟಿಂಗ್‌ಗೆ ಬಲ ತುಂಬುವ ಸವಾಲು ಇದೆ. ಸ್ಪಿನ್ನರ್‌ಗಳೆದುರು ಸಮರ್ಥ ಆಟವಾಡಬಲ್ಲ ರಜತ್‌, ಕೆಕೆಆರ್‌ನ ವರುಣ್‌ ಚಕ್ರವರ್ತಿ ಮತ್ತು ಸುನಿಲ್‌ ನಾರಾಯಣ್‌ ಸವಾಲನ್ನು ಮೀರಬೇಕಿದೆ. ಇದುವರೆಗೆ 27 ಪಂದ್ಯಗಳಲ್ಲಿ ಆಡಿರುವ ಈತ, 158.85 ಸ್ಟ್ರೈಕ್‌ರೇಟ್‌ನಲ್ಲಿ 799 ರನ್‌ ಬಾರಿಸಿದ್ದಾರೆ. ಅವರ ಬ್ಯಾಟ್‌ನಿಂದ ಒಂದು ಶತಕ ಮತ್ತು ಏಳು ಅರ್ಧಶತಕಗಳೂ ಬಂದಿವೆ.

ಅವಕಾಶ ಸಿಕ್ಕಾಗಲೆಲ್ಲ ಸಾಮರ್ಥ್ಯ ಸಾಬೀತು ಮಾಡಿರುವ ರಿಂಕು ಸಿಂಗ್, ಕೆಕೆಆರ್‌ ಬಳಗದಲ್ಲಿರುವ ಪ್ರಮುಖ ಬ್ಯಾಟರ್‌. ಶ್ರೇಷ್ಠ ಬೌಲರ್‌ಗಳ ಎದರೂ ಲೀಲಾಜಾಲವಾಗಿ ರನ್‌ ಗಳಿಸಬಲ್ಲ ರಿಂಕು, ಪಂದ್ಯವನ್ನು ಏಕಾಂಗಿಯಾಗಿ ಗೆದ್ದುಕೊಡಬಲ್ಲ ಆಟಗಾರ. ಮಧ್ಯಮ ಕ್ರಮಾಂಕದಲ್ಲಿ ತಂಡದ ಶಕ್ತಿಯಾಗಿರುವ ಈ ಆಟಗಾರ, ಐಪಿಎಲ್‌ನಲ್ಲಿ ಆಡಿರುವ 45 ಪಂದ್ಯಗಳ 40 ಇನಿಂಗ್ಸ್‌ಗಳಲ್ಲಿ 143.34ರ ಸ್ಟ್ರೈಕ್‌ರೇಟ್‌ನಲ್ಲಿ 893 ರನ್ ಕಲೆಹಾಕಿದ್ದಾರೆ.

2024ರ ಆವೃತ್ತಿಯಲ್ಲಿ ಆಡಿದ 12 ಪಂದ್ಯಗಳಲ್ಲಿ 4 ಅರ್ಧಶತಕ ಸಹಿತ 435 ರನ್ ಗಳಿಸಿದ್ದ ಫಿಲ್‌ ಸಾಲ್ಟ್‌, ಕೆಕೆಆರ್‌ ಚಾಂಪಿಯನ್‌ಪಟ್ಟಕ್ಕೇರಲು ನೆರವಾಗಿದ್ದರು. ಅದೇ ರೀತಿಯನ್ನು ಅವರು ಈ ಬಾರಿ ಆರ್‌ಸಿಬಿ ಪರ ಆಡಬೇಕಿದೆ. ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಐಸಿಸಿ ಬ್ಯಾಟರ್‌ಗಳ  ರ‌್ಯಾಂಕಿಂಗ್‌ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸಾಲ್ಟ್‌, ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿ. ಐಪಿಎಲ್‌ನಲ್ಲಿ ಆಡಿರುವ 21 ಪಂದ್ಯಗಳಲ್ಲಿ 653 ರನ್‌ ಬಾರಿಸಿರುವ ಅವರ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್‌ 175.54.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT