ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಇಲವೆನ್‌ನಲ್ಲಿ ಭಾರತದ 6 ಆಟಗಾರರು: ಪಾಕಿಸ್ತಾನ ಕ್ರಿಕೆಟಿಗರಿಗೆ ಸ್ಥಾನವಿಲ್ಲ

Last Updated 25 ಫೆಬ್ರುವರಿ 2020, 14:42 IST
ಅಕ್ಷರ ಗಾತ್ರ

ನವದೆಹಲಿ:ಬಾಂಗ್ಲಾದೇಶ ಪಿತಾಮಹ ಶೇಖ್‌ ಮುಜಿಬುರ್‌ ರಹ್ಮಾನ್‌ ಅವರ ಜನ್ಮ ಶತಮಾನೋತ್ಸವದ ಸಲುವಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು (ಬಿಸಿಬಿ) ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಲಿದ್ದು, ಏಷ್ಯಾ ಇಲವೆನ್‌ ತಂಡದಲ್ಲಿ ಆಡಲು ಭಾರತದ ಆರು ಆಟಗಾರರ ಹೆಸರನ್ನು ಬಿಸಿಸಿಐ ಸೂಚಿಸಿದೆ.

ಮಾರ್ಚ್‌ 18ರಿಂದ 21ರವರೆಗೆ ನಡೆಯುವ ಈ ಟೂರ್ನಿಯಲ್ಲಿ ವಿಶ್ವ ಇಲವೆನ್‌ ಮತ್ತು ಏಷ್ಯಾ ಇಲವೆನ್‌ ತಂಡಗಳು ಸೆಣಸಲಿವೆ.ಸದ್ಯ ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಏಷ್ಯಾ ಇಲವೆನ್‌ನಲ್ಲಿ ಆಡಲು ಭಾರತ ತಂಡದ ನಾಯಕ ವಿರಾಟ್‌ಕೊಹ್ಲಿ, ಕೆ.ಎಲ್‌.ರಾಹುಲ್‌, ಶಿಖರ್‌ ಧವನ್‌, ರಿಷಭ್‌ ಪಂತ್‌,ಮೊಹಮದ್‌ ಶಮಿ ಮತ್ತು ಕುಲದೀಪ್‌ ಯಾದವ್‌ ಅವರ ಹೆಸರುಗಳನ್ನು ಸೂಚಿಸಿದ್ದಾರೆ.

ಮಾರ್ಚ್‌ 12 ರಿಂದ 18ರ ವರೆಗೆದಕ್ಷಿಣ ಆಫ್ರಿಕಾ ಮತ್ತು ಭಾರತ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿವೆ. ಈ ಟೂರ್ನಿಯ ಕೊನೆ ಪಂದ್ಯವುಮಾರ್ಚ್‌ 18ರಂದು ಕೋಲ್ಕತ್ತದಲ್ಲಿ ನಡೆಯಲಿರುವುದರಿಂದ, ಕೊಹ್ಲಿ ಮತ್ತು ರಾಹುಲ್‌ ಮೊದಲ ಪಂದ್ಯಕ್ಕೆ ಲಭ್ಯರಿರುತ್ತಾರೆಯೇ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಒಂದವೇಳೆ ಮೊದಲ ಪಂದ್ಯಕ್ಕೆ ಅಲಭ್ಯರಾದರೂ, ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಈ ಟೂರ್ನಿಗೆ ಅಂತರರಾಷ್ಟ್ರೀಯ ಸ್ಥಾನಮಾನ ನೀಡುವುದಾಗಿಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು (ಐಸಿಸಿ) ತಿಳಿಸಿದೆಯಾದರೂ, ಟೂರ್ನಿಯಲ್ಲಿ ಪಾಕಿಸ್ತಾನ ಆಟಗಾರರು ಭಾಗವಹಿಸುತ್ತಿಲ್ಲ.

ಭಾರತ ಮತ್ತು ಪಾಕಿಸ್ತಾನ ಆಟಗಾರರು ಒಂದೇ ತಂಡದಲ್ಲಿ (ಏಷ್ಯಾ ಇಲವೆನ್‌) ಆಡುವ ಬಗ್ಗೆ ಸಾಕಷ್ಟು ಗೊಂದಲಗಳು ಮೂಡಿದ್ದವು. ಇದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೇ ಸ್ಪಷ್ಟನೆ ನೀಡಿದ್ದ ಬಿಸಿಸಿಐ ಜಂಟಿ ಕಾರ್ಯದರ್ಶಿ ಜಾಯೆಶ್‌ ಜಾರ್ಜ್‌, ‘ವಿಶ್ವ ಇಲವೆನ್‌ ತಂಡದಲ್ಲಿ ಪಾಕಿಸ್ತಾನದ ಆಟಗಾರರು ಇರುವುದಿಲ್ಲ ಎಂದು ನಮಗೆ ತಿಳಿದು ಬಂದಿದೆ.ಪಾಕ್‌ ಆಟಗಾರರಿಗೆ ಆಹ್ವಾನನೀಡಿಲ್ಲ.ಹಾಗಾಗಿ ಎರಡೂ ತಂಡಗಳ ಆಟಗಾರರು ಒಂದಾಗಿ ಆಡುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದ್ದರು.

ಆದರೆ, ಇದಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡಿದ್ದ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ), ಟೂರ್ನಿಗೆ ಭಾರತದ ಆಟಗಾರರನ್ನು ಆಯ್ಕೆ ಮಾಡಲಾಗಿದೆ ಎಂಬ ಕಾರಣಕ್ಕಾಗಿ ಅಲ್ಲ,ನಮ್ಮ ಆಟಗಾರರು ಆ ವೇಳೆ ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ (ಪಿಎಸ್‌ಎಲ್‌) ಆಡುತ್ತಿರುತ್ತಾರೆ. ಹಾಗಾಗಿ, ಬಿಸಿಬಿ ಟೂರ್ನಿಗೆ ನಮ್ಮಆಟಗಾರರು ಲಭ್ಯರಿರುವುದಿಲ್ಲ ಎಂದಿತ್ತು.

‘ಏಷ್ಯಾ ಇಲವೆನ್‌ ಮತ್ತು ವಿಶ್ವ ಇಲವೆನ್‌ ನಡುವಣ ಟೂರ್ನಿಯು ಮಾರ್ಚ್‌18ರಿಂದ 21ರವರೆಗೆ ನಡೆಯಲಿವೆ. ಪಿಎಸ್‌ಎಲ್‌ಮಾರ್ಚ್‌ 22ರಂದು ಮುಕ್ತಾಯವಾಗಲಿದೆ. ಎರಡೂ ಟೂರ್ನಿಗಳ ದಿನಾಂಕ ಬದಲಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಯನ್ನು ನಾವು ಮೌಖಿಕವಾಗಿ ಮತ್ತು ಪತ್ರದ ಮೂಲಕ ಬಿಸಿಬಿ ಜೊತೆ ಹಂಚಿಕೊಂಡಿದ್ದೇವೆ. ಅದನ್ನು ಅವರೂ ಅರ್ಥಮಾಡಿಕೊಂಡಿದ್ದಾರೆ’ ಎಂದು ಪಿಸಿಬಿ ವಕ್ತಾರ ಹೇಳಿದ್ದರು.

ತಂಡಗಳು ಇಂತಿವೆ
ಏಷ್ಯಾ ಇಲವೆನ್‌:
ವಿರಾಟ್‌ ಕೊಹ್ಲಿ, ಕೆ.ಎಲ್‌.ರಾಹುಲ್‌,ಶಿಖರ್‌ ಧವನ್‌, ರಿಷಭ್‌ ಪಂತ್‌, ಮೊಹಮದ್‌ ಶಮಿ, ಕುಲದೀಪ್‌ ಯಾದವ್‌, ತಮೀಮ್‌ ಇಕ್ಬಾಲ್‌, ಲಿಟನ್ ದಾಸ್, ಮುಷ್ಫಿಕರ್‌ ರಹೀಂ, ತಿಸಾರ ಪೆರೆರಾ, ರಶೀದ್ ಖಾನ್‌, ಮುಸ್ತಾಫಿಜುರ್‌ ರೆಹ್‌ಮಾನ್‌, ಸಂದೀಪ್‌ ಲ್ಯಾಮಿಚಾನೆ, ಲಸಿತ್ ಮಾಲಿಂಗ, ಮುಜೀಬ್‌ ಉರ್‌ ರೆಹ್‌ಮಾನ್‌

ವಿಶ್ವ ಇಲವೆನ್‌:ಅಲೆಕ್ಸ್‌ ಹೇಲ್ಸ್‌, ಕ್ರಿಸ್‌ ಗೇಲ್‌, ಫಾಫ್‌ ಡು ಪ್ಲೆಸಿ (ನಾಯಕ), ನಿಕೋಲಸ್‌ ಪೂರನ್‌, ರಾಸ್‌ ಟೇಲರ್‌, ಜಾನಿ ಬೈರ್ಸ್ಟ್ರೋವ್‌, ಕೀರನ್‌ ಪೊಲಾರ್ಡ್‌, ಆದಿಲ್‌ ರಶೀದ್‌, ಶೇಲ್ಡನ್‌ ಕಾರ್ಟೆಲ್‌, ಲುಂಗಿ ಎನ್‌ಗಿಡಿ, ಆಂಡ್ರೋ ಟೈ, ಮಿಚೇಲ್‌ ಮೆಕ್‌ಲಿಂಗನ್‌
ಕೋಚ್‌:ಟಾಮ್‌ ಮೂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT