ನವದೆಹಲಿ: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ತವರಿಗೆ ಮರಳಿರುವ ಭಾರತ ಪುರುಷರ ಹಾಕಿ ತಂಡಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಪೋಸ್ಟರ್ ಹಿಡಿದು ಜೈಕಾರ ಕೂಗಿದರು.
ನಾಯಕ ಹರ್ಮನ್‌ಪ್ರೀತ್ ಸಿಂಗ್ ಸೇರಿದಂತೆ ಆಟಗಾರರಿಗೆ ಅಧಿಕಾರಿಗಳು ಹೂಮಾಲೆ ಹಾಕಿ ಬರಮಾಡಿಕೊಂಡರು. ವಿಶೇಷ ಡೋಲು ಮೇಳವನ್ನು ಏರ್ಪಡಿಸಲಾಯಿತು.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪುರುಷರ ಹಾಕಿ ತಂಡವು ಸತತ ಎರಡನೇ ಬಾರಿಗೆ ಕಂಚಿನ ಪದಕ ಗೆದ್ದು ಸಾಧನೆ ಮಾಡಿದೆ. ಪ್ಲೇ-ಆಫ್ ಪಂದ್ಯದಲ್ಲಿ ಸ್ಪೇಸ್ ತಂಡವನ್ನು 2-1ರ ಗೋಲುಗಳಿಂದ ಮಣಿಸಿ ಕಂಚಿನ ಪದಕ ಜಯಿಸಿತ್ತು.
ಶ್ರೀಜೇಶ್ ಧ್ವಜಧಾರಿ...
ಅಧಿಕೃತ ಮೂಲಗಳ ಪ್ರಕಾರ ತಂಡದ ಕೆಲವು ಆಟಗಾರರು ಪ್ಯಾರಿಸ್‌ನಲ್ಲಿ ಉಳಿದುಕೊಂಡಿದ್ದಾರೆ. ವೃತ್ತಿಜೀವನದ ಕೊನೆಯ ಪಂದ್ಯ ಆಡಿರುವ ಪಿ.ಆರ್. ಶ್ರೀಜೇಶ್ ಅವರಿಗೆ ಸಮಾರೋಪದಲ್ಲಿ ಧ್ವಜಧಾರಿಯ ಗೌರವ ನೀಡಲಾಗಿದೆ. ಅಮಿತ್ ರೋಹಿತ್ ದಾಸ್, ರಾಜ್ ಕುಮಾರ್ ಪಾಲ್, ಅಭಿಷೇಕ್, ಸುಖ್‌ಜೀತ್ ಸಿಂಗ್ ಮತ್ತು ಸಂಜಯ್ ಕೂಡ ಪ್ಯಾರಿಸ್ ನಗರಿಯಲ್ಲಿದ್ದಾರೆ.
ಮಹತ್ತರ ಸಾಧನೆ: ನಾಯಕ ಹರ್ಮನ್‌ಪ್ರೀತ್
'ನಮಗೆ ಉತ್ತಮ ಬೆಂಬಲ ದೊರಕಿತು. ಎಲ್ಲ ಬೇಡಿಕೆಗಳನ್ನು ಪೂರೈಸಲಾಗಿದೆ. ಪದಕ ಗೆದ್ದಿರುವುದು ಸಂತಸ ತಂದಿದ್ದು, ಹೆಮ್ಮೆಯ ವಿಚಾರ' ಎಂದು ನಾಯಕ ಹರ್ಮನ್‌ಪ್ರೀತ್ ಸಿಂಗ್ ಹೇಳಿದ್ದಾರೆ.
'ಇದೊಂದು ಮಹತ್ತರ ಸಾಧನೆ. ಹಾಕಿ ಮೇಲೆ ನೀವು ತೋರಿದ ಪ್ರೀತಿಯಿಂದಾಗಿ ನಮ್ಮ ಮೇಲಿನ ಜವಾಬ್ದಾರಿ ಇಮ್ಮಡಿಗೊಂಡಿದೆ. ಮುಂದಿನ ಟೂರ್ನಿಗಳಲ್ಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದೇವೆ' ಎಂದು ಹೇಳಿದ್ದಾರೆ.
ಮೇಜರ್ ಧ್ಯಾನ್‌ಚಂದ್‌ಗೆ ಗೌರವ
(ಪಿಟಿಐ ಚಿತ್ರ)
This special feeling 💙🎶
— Hockey India (@TheHockeyIndia) August 10, 2024
Grand welcome for our boys at the New Delhi Airport after they returned from Paris Olympics. #BackHome #HockeyIndia #IndiaKaGame
.
.
.
.@CMO_Odisha @IndiaSports @Media_SAI@sports_odisha @Limca_Official @CocaCola_Ind pic.twitter.com/Nk6GGeGTBt
Paying respect to Hockey Icon Legendary Major Dhyan Chand.
— Hockey India (@TheHockeyIndia) August 10, 2024
Our boys made a visit to National Stadium with their bronze medals paying respect to Maj. Dhyan Chand. #HockeyIndia #IndiakaGame #BronzeMedal
.
.
.
.@CMO_Odisha @IndiaSports @Media_SAI@sports_odisha @Limca_Official… pic.twitter.com/zHDJPl6paj
A special gesture from @airindia for the boys as they headed back to India from Paris. 🇮🇳 #ReturningHome #Hockey #HockeyIndia pic.twitter.com/StTlB7fc9B
— Hockey India (@TheHockeyIndia) August 10, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.