ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೊವಾ ದೇಶ ರಷ್ಯಾದ ಮುಂದಿನ ಟಾರ್ಗೆಟ್: ಬೆಲರೂಸ್ ಅಧ್ಯಕ್ಷ

Last Updated 2 ಮಾರ್ಚ್ 2022, 13:13 IST
ಅಕ್ಷರ ಗಾತ್ರ

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮುಂದುವರಿದಿರುವ ಬೆನ್ನಲ್ಲೇ, ಬೆಲರೂಸ್‌ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರು ಆಘಾತಕಾರಿ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪಡೆಗಳು ಮಾಲ್ಡೊವಾವನ್ನು ಆಕ್ರಮಿಸಲು ಯೋಜನೆ ರೂಪಿಸಿವೆ ಎಂದು ಆಕಸ್ಮಿಕವಾಗಿ ಸೂಕ್ಷ್ಮ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ದಕ್ಷಿಣ ಉಕ್ರೇನ್‌‌ಗೆ ಹೊಂದಿಕೊಂಡಿರುವ ಮಾಲ್ಡೊವಾದ ಮೇಲಿನರಷ್ಯಾ ಕಾರ್ಯಾಚರಣೆಯನ್ನು ಸೂಚಿಸುವ ಯುದ್ಧ ನಕ್ಷೆಯ ಮುಂದೆ ನಿಂತು ಈ ಮಾಹಿತಿಯನ್ನು ಹಾರಹಾಕಿದ್ದಾರೆ. ಈ ನಕ್ಷೆಯು ಮಾಲ್ಡೊವಾ ದೇಶದಾದ್ಯಂತರಷ್ಯಾದ ಪಡೆಗಳು ನಡೆಸಲು ಉದ್ದೇಶಿಸಿರುವ ಯುದ್ಧ ಯೋಜನೆಗಳನ್ನು ಸಹ ತೋರಿಸಿದೆ.

ಈ ನಕ್ಷೆಯಲ್ಲಿ ಪ್ರಸ್ತುತ ಉಕ್ರೇನ್‌ನಲ್ಲಿನರಷ್ಯಾದ ದಾಳಿಯಮಾರ್ಗಗಳನ್ನು ವಿವರಿಸಲಾಗಿದೆ.ಇನ್ನೂ ಜಾರಿಗೆ ಬರಬೇಕಾದ ಹಲವಾರು ದಾಳಿಗಳ ಕುರಿತುಸಹ ನಕ್ಷೆಯಲ್ಲಿ ತೋರಿಸಲಾಗಿದೆ. ಅವುಗಳಲ್ಲಿ,ಬಂದರು ನಗರವಾದ ಒಡೆಸ್ಸಾದಿಂದ ಮಾಲ್ಡೊವಾದ ಮೇಲಿನ ದಾಳಿಯ ಕುರಿತುಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ,ರಷ್ಯಾ ಉಕ್ರೇನ್‌ನ ನೆರೆ ದೇಶಗಳಿಗೂ ಸೇನೆ ನುಗ್ಗಿಸಲು ಯೋಜನೆ ರೂಪಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಮಧ್ಯೆ, ಪುಟಿನ್ ಅವರ ಸೇನೆಯು ಯುದ್ಧವನ್ನು ತ್ವರಿತವಾಗಿ ಗೆಲ್ಲಲು ಪ್ರಮುಖ ನಗರಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸುತ್ತಿದೆ. ಇದಕ್ಕೆ ಉಕ್ರೇನ್‌ನ ಸೇನಾಪಡೆಗಳುಪ್ರತಿದಾಳಿ ನಡೆಸುತ್ತಿರುವುದುರಷ್ಯಾದ ಆತಂಕಕ್ಕೆ ಕಾರಣವಾಗಿದೆ.

ಭಾರಿ ಸಾವು ನೋವಿಗೆ ಕಾರಣವಾದ ಕ್ಷಿಪಣಿ ಮತ್ತು ಶೆಲ್ ದಾಳಿ ಬಳಿಕವೂ ರಷ್ಯಾಗೆ ಗೆಲುವಿನ ಖಾತರಿ ಇಲ್ಲದಂತಾಗಿದೆ. ತನ್ನ ವಿವೇಚನಾರಹಿತ ನಿರ್ಧಾರದಿಂದಾಗಿ ಇದೀಗ ಉಕ್ರೇನ್ ಪ್ರತಿರೋಧ ಎದುರಿಸಲು ರಷ್ಯಾ ಭಾರಿ ಶಸ್ತ್ರಾಸ್ತ್ರ ಮತ್ತು ಫಿರಂಗಿಗಳನ್ನು ನಿಯೋಜಿಸಲು ಹೊರಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT