ಸಂಜೆ ವೇಳೆಯಲ್ಲಿ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ಜ್ಯೋತಿಷ ಹೇಳುತ್ತದೆ. ಶಾಸ್ತ್ರಗಳ ಪ್ರಕಾರ ಸಂಜೆಯಲ್ಲಿ ಲಕ್ಮ್ಮೀ ದೇವಿಯು ಎಲ್ಲರ ಮನೆಗೆ ಬರುತ್ತಾಳೆ. ಯಾರ ಮನೆಯಲ್ಲಿ ಚಲನಶೀಲತೆ, ಸ್ವಚ್ಛತೆ ಹಾಗೂ ಸಂಜೆ ಮನೆಯಲ್ಲಿ ದೀಪ ಹಚ್ಚುತ್ತಾರೋ ಅವರ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.
.ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?.ಕಾಲನ್ನು ಪಾದದಿಂದ ಉಜ್ಜಿದರೆ ಆರ್ಥಿಕ ಸಂಕಷ್ಟಕ್ಕೆ ಕಾರಣ ಎನ್ನುತ್ತದೆ ಜ್ಯೋತಿಷ.
ಹಿಂದೂ ಧಾರ್ಮಿಕ ಗ್ರಂಥಗಳ ಪ್ರಕಾರ ಮುಸ್ಸಂಜೆ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು. ಇದರಿಂದಾಗಿ ಹಣಕಾಸಿನ ಸಮಸ್ಯೆ, ಆರೋಗ್ಯ ಸಮಸ್ಯೆ ಹಾಗೂ ಅಶಾಂತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಸಂಜೆಯ ಸಮಯದಲ್ಲಿ ನಿದ್ದೆ ಮಾಡುವುದು ತಪ್ಪು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ದೇವಾನುದೇವತೆಗಳ ಸಂಚಾರವಿರುತ್ತದೆ ಎಂಬ ನಂಬಿಕೆ ಇದೆ. ಈ ಸಮಯದಲ್ಲಿ ಮಲಗುವುದರಿಂದ ಬಡತನ ಎದುರಿಸಬೇಕಾಗುತ್ತದೆ.

ಸಂಜೆ ಸಮಯದಲ್ಲಿ ಊಟ ಮಾಡುವುದು ಆರೋಗ್ಯಕ್ಕೆ ಕಂಟಕವಾಗಿದೆ ಎಂದು ಜ್ಯೋತಿಷ ಹೇಳುತ್ತದೆ. ಇದು ಆನಾರೋಗ್ಯಕ್ಕೆ ಕಾರಣವಾಗಬಹುದು.

ಮುಸ್ಸಂಜೆ ಸಮಯದಲ್ಲಿ ದೈಹಿಕ ಸಂಬಂಧವನ್ನು ಹೊಂದುವುದು ತಪ್ಪು ಎಂದು ಜ್ಯೋತಿಷದಲ್ಲಿ ಪರಿಗಣಿಸಲಾಗಿದೆ. ಏಕೆಂದರೆ, ಈ ಸಮಯದಲ್ಲಿ ಸ್ತ್ರೀಯರಿಗೆ ಗರ್ಭ ನಿಂತರೆ, ಜನಿಸುವ ಮಗು ದೈಹಿಕ ನೂನ್ಯತೆಗಳಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ.

ಸಂಜೆ ಸಮಯದಲ್ಲಿ ಉಗುರನ್ನು ಕತ್ತರಿಸುವುದರಿಂದ ದಾರಿದ್ರ್ಯ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ.
.ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ .
ಮನೆಯನ್ನು ಗುಡಿಸುವುದು ಹಾಗೂ ಕಸವನ್ನು ಹೊರಗೆ ಎಸೆಯುವುದು ಮಾಡಬಾರದು. ಮಾಡುವುದಾದರೇ, ಸೂರ್ಯಾಸ್ತಕ್ಕೆ ಮೊದಲು ಮಾಡುವುದು ಸೂಕ್ತ.

ಸಂಜೆ ಮಾಡಬೇಕಾದ ಕೆಲಸಗಳು:

ಮನೆಯಲ್ಲಿ ದೇವರ ಪೂಜೆ ಮಾಡುವುದು ಅತ್ಯಂತ ಶುಭಕರವಾಗಿದೆ. ಆದ್ದರಿಂದ ಸಾಧ್ಯವಾದಷ್ಟು ಸಂಜೆ ವೇಳೆ ಭಕ್ತಿಯಿಂದ ದೇವರ ಪೂಜೆ ಮಾಡುವುದು ಒಳಿತು ಎಂದು ಜ್ಯೋತಿಷ ಹೇಳುತ್ತದೆ.

ಮಕ್ಕಳಿಗೆ ರಾಮಾಯಣ, ಮಹಾಭಾರತ ಅಥವಾ ಇತರ ಪಠ್ಯಗಳನ್ನು ಕಲಿಸುವುದಕ್ಕೆ ಸೂಕ್ತ ಸಮಯವಾಗಿದೆ. ಶ್ಲೋಕ ಮಂತ್ರಗಳ ಪಠಣೆಯನ್ನೂ ಮಾಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.