ಬಾಗಲಕೋಟೆ: ‘ಮುಂದಿನ ಮೂರು ತಿಂಗಳಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಿಸಿದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ಗೆ ಒಂದು ಕಿಲೋ ಚಿನ್ನ ನೀಡಿ, ರಥದಲ್ಲಿ ಮೆರವಣಿಗೆ ಮಾಡಲಾಗುವುದು’ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರವಿದ್ದಾಗ ಸುವರ್ಣಸೌಧದ ಮುಂದೆ ಮೀಸಲಾತಿಗೆ ಪ್ರತಿಭಟನೆ ಮಾಡುತ್ತಿದ್ದಾಗ ಲಕ್ಷ್ಮಿ ಹೆಬ್ಬಾಳಕರ್, ಅಣ್ಣ ಮೀಸಲಾತಿ ಕೊಡಿಸಿದರೆ ಕುಂದಾ ತಿನಿಸಿ, ಸನ್ಮಾನ ಮಾಡುವೆ ಎಂದಿದ್ದರು. ನಿಮಗೆ ಆಗದಿದ್ದರೆ, ನಮ್ಮ ಸರ್ಕಾರದಲ್ಲಿ ಮೂರು ತಿಂಗಳಲ್ಲಿ ಮಾಡುವೆ. ಒಂದು ಜೋಡು ಬಳೆ ಕೊಡಿಸಬೇಕು ಎಂದು ಕೇಳಿದ್ದರು. ಕಿಲೋ ಚಿನ್ನ ಕೊಡಿಸಲು ಸಿದ್ಧ. ಮೀಸಲಾತಿ ಕೊಡಿಸಿ’ ಎಂದು ಆಗ್ರಹಿಸಿದರು.

‘ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಅಧಿಕಾರದಲ್ಲಿರದಿದ್ದಾಗ ಯಾವ ರೀತಿ ರೋಷ ಇತ್ತು. ಅದನ್ನು ಮೀಸಲಾತಿಗೆ ಈಗಲೂ ತೋರಿಸಿ. ಸಮಾಜದಿಂದ ಸಚಿವೆಯಾಗಿದ್ದೀರಿ. ನಿಮ್ಮ ರಾಜೀನಾಮೆ ಕೇಳುವುದಿಲ್ಲ. ನಿಮಗೆ ಬಹಳ ಶಕ್ತಿ ಇದೆ. ಸಚಿವರಾಗಲು ಬಳಸಿದ ಶಕ್ತಿಯನ್ನು 2ಎ ಕೊಡಿಸಲು ಬಳಸಿರಿ ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.