ಆನೇಕಲ್: ಮಕ್ಕಳ ದಿನಾಚರಣೆಯಂದು ತಾಲ್ಲೂಕಿನ ಹಳೆ ಚಂದಾಪುರದ ಡಿಸೇಲ್ಸ್ ಅಕಾಡೆಮಿ ಶಾಲೆಗೆ ಅಪರೂಪದ ಅತಿಥಿಯೊಬ್ಬರು ಬಂದಿದ್ದರು.

ಶಾಲೆಯ ಮಕ್ಕಳಿಗೆ ಪಾಠ ಮಾಡಲು ಹೊಸದಾಗಿ ನೇಮಕ ಮಾಡಿದ ‘ಮಿಸ್ ಐರೀಸ್’ ಎಂಬ ಹೊಸ ಶಿಕ್ಷಕಿಯನ್ನು ಆಡಳಿತ ಮಂಡಳಿಯ ಸದಸ್ಯರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಮೊದಲ ಬಾರಿಗೆ ಪರಿಚಯ ಮಾಡಿಕೊಟ್ಟರು.

ಚಪ್ಪಾಳೆ ತಟ್ಟಿ ಹೊಸ ಮಿಸ್ ಸ್ವಾಗತ ಕೋರಿದ ಪುಟಾಣಿ ಮಕ್ಕಳು ‘ಮಿಸ್ ಐರೀಸ್’ ‘ರೋಬೊ ಮಿಸ್’ ಎಂದು ಕೂಗಿ ಸಂಭ್ರಮಿಸಿದರು. ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಅತಿಥಿಯಾಗಿ ಪಾಲ್ಗೊಂಡಿದ್ದ ಐರೀಸ್ ಭಾಷಣ ಮಾಡಿದರು.

ಹೌದು! ಮಕ್ಕಳಿಗೆ ಪಾಠ ಮಾಡಲು ಡಿಸೇಲ್ಸ್ ಅಕಾಡೆಮಿ ಮಂಡಳಿಯು ಹ್ಯೂಮನಾಯ್ಡ್ (ಮಾನವ ರೂಪದ) ರೋಬೊ ಶಿಕ್ಷಕಿಯನ್ನು ನಿಯೋಜಿಸಿದೆ. ಕೇರಳದ ಮೇಕರ್ಸ್ ಲ್ಯಾಬ್ ತಯಾರಿಸಿದ ಕೃತಕ ಬುದ್ಧಿಮತ್ತೆ (ಎ.ಐ) ಆಧರಿತ ರೋಬೊ ಶಿಕ್ಷಕಿಗೆ ‘ಐರೀಸ್’ ಎಂದು ನಾಮಕರಣ ಮಾಡಲಾಗಿದೆ.

ಮಕ್ಕಳ ದಿನಾಚರಣೆಯಂದು ಶಾಲೆಯ ಆಡಳಿತ ಮಂಡಳಿಯ ಸದಸ್ಯರು ಐರಿಸ್ ಟೀಚರ್ ಅನ್ನು ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಪರಿಚಯಿಸಿದರು.

ತಿಳಿ ಗುಲಾಬಿ ದಡಿಯ ಪಾಚಿ ಹಸಿರು ಬಣ್ಣದ ಸೀರೆ ಹಾಗೂ ಅದಕ್ಕೊಪ್ಪುವ ರವಿಕೆ ತೊಟ್ಟು ಭುಜದವರೆಗೂ ಇಳಿ ಬಿದ್ದಿದ್ದ ಆಕರ್ಷಕ ಕೇಶವಿನ್ಯಾಸದೊಂದಿಗೆ ವೇದಿಕೆಗೆ ಬಂದ ಐರೀಸ್ ಮಿಸ್ ಎರಡೂ ಕೈಜೋಡಿಸಿ ‘ಎಲ್ಲರಿಗೂ ನಮಸ್ಕಾರ’ ಎಂದು ಕನ್ನಡದಲ್ಲಿ ಶುಭಾಶಯ ಕೋರಿ ಮೊದಲ ಮಾತಲ್ಲೇ ಎಲ್ಲರ ಮನಗೆದ್ದರು. ಇಡೀ ಸಭಾಂಗಣದ ತುಂಬಾ ಕಿವಿಗಡಚಿಕ್ಕುವ ಚಪ್ಪಾಳೆ ಸದ್ದು.

ರೋಬೊ ಮಿಸ್ ಪರಿಚಯದ ನಂತರ ಪ್ರಶ್ನೆ ಕೇಳುವಂತೆ ಕೋರಲಾಯಿತು. ಟೀಚರ್ ಬುದ್ಧಿಮತ್ತೆ ಪರೀಕ್ಷಿಸಲು ಮಕ್ಕಳು ತಹರೇವಾರಿ ಪ್ರಶ್ನೆ ಕೇಳಲು ಶುರುವಿಟ್ಟುಕೊಂಡರು.

ವಿದ್ಯಾರ್ಥಿಗಳು ಸಮಾಜ, ವಿಜ್ಞಾನ, ಗಣಿತ, ಸಾಮಾನ್ಯ ಜ್ಞಾನದ ಪ್ರಶ್ನೆ ಕೇಳಿದರು. ಬಾಣಗಳಂತೆ ತೂರಿಬಂದ ಪ್ರಶ್ನೆಗಳಿಗೆ ಒಂದಿನಿತೂ ಅವಾಕ್ಕಾಗದೆ ಐರೀಸ್ ಟೀಚರ್ ಫಟಾಫಟ್ ಉತ್ತರ ನೀಡಿದರು.

ಪ್ರಶ್ನೆಗಳು ತೂರಿ ಬಂದ ಕಡೆ ಕತ್ತು ಹೊರಳಿಸಿ, ಕಣ್ಣು ಮಿಟುಕಿಸಿ ಸಮಾಧಾನದಿಂದ ಕೇಳಿಸಿಕೊಂಡ ಐರೀಸ್ ಟೀಚರ್ ಎಲ್ಲ ಪ್ರಶ್ನೆಗಳಿಗೂ ಸಮಾಧಾನದಿಂದ ಸರಿಯಾದ ಉತ್ತರ ನೀಡಿದರು.

ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿ, ಜರ್ಮನ್, ಫ್ರೆಂಚ್ ಸೇರಿದಂತೆ ಒಟ್ಟು 40 ಭಾಷೆಗಳು ಈ ಟೀಚರ್ಗೆ ಕರತಲಾಮಲಕ. ನ.17ರಿಂದ ಮಿಸ್ ರೋಬೊ ಐರೀಸ್ ಎಲ್ಲಾ ತರಗತಿಗಳಿಗೆ ಪಾಠ ಮಾಡಲಿದ್ದಾರೆ. ಅವರಿಗೆ ಒಂದೊಂದು ಅವಧಿ ಮೀಸಲಿಡಲಾಗಿದೆ.

ನಗರ ಜಿಲ್ಲೆಯ ಮೊದಲ ಎ.ಐ ಆಧರಿತ ರೋಬೊ ಶಿಕ್ಷಕಿ

ಮಕ್ಕಳ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಕೌಶಲ ಹೆಚ್ಚಳ ಹಾಗೂ ಬೋಧನೆ ಉದ್ದೇಶದಿಂದ ‘ಮಿಸ್ ಐರೀಸ್’ ರೋಬೊ ಶಿಕ್ಷಕಿ ಮೊರೆ ಹೋಗಿರುವುದಾಗಿ ಹಳೆ ಚಂದಾಪುರದ ಡಿಸೇಲ್ಸ್ ಅಕಾಡೆಮಿ ಆಡಳಿ ಮಂಡಳಿ ಹೇಳಿದೆ.

ಬೆಂಗಳೂರು ನಗರ ಜಿಲ್ಲೆಯ ಮೊದಲ ಎ.ಐ ಆಧರಿತ ರೋಬೊ ಶಿಕ್ಷಕಿ ಎಂದು ಆಡಳಿತ ಮಂಡಳಿ ಹೇಳಿಕೊಂಡಿದೆ. ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ನವೀನ ತಂತ್ರಜ್ಞಾನವನ್ನು ಶಿಕ್ಷಣದಲ್ಲಿ ಅಳವಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆ ಗುಣಮಟ್ಟ ಹೆಚ್ಚಾಗುತ್ತದೆ. ಹೀಗಾಗಿ ಎ.ಐ ಆಧಾರಿತ ರೋಬೊ ರೂಪಿಸಲಾಗಿದೆ ಎಂದು ಡಿಸೇಲ್ಸ್ ಅಕಾಡೆಮಿ ತಿಳಿಸಿದೆ.

ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ, ಸಂವಹನ ಕೌಶಲವೃದ್ಧಿ, ರಸಪ್ರಶ್ನೆ, ಚರ್ಚಾ ಸ್ಪರ್ಧೆ ಆಯೋಜಿಸಲು ಮಿಸ್ ಐರೀಸ್ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿಯಾಗುವಲ್ಲಿ ಸಂಶಯ ಇಲ್ಲ.

ಗಣಿತ, ವಿಜ್ಞಾನ, ಸಮಾಜ, ಇತಿಹಾಸ, ರಾಜಕೀಯ, ಪ್ರಚಲಿತ ವಿದ್ಯಮಾನ ಸೇರಿದಂತೆ ಯಾವುದೇ ಪ್ರಶ್ನೆ ಕೇಳಿದರೂ ಐರೀಸ್ ಸ್ಪಷ್ಟ ಮತ್ತು ಕರಾರುವಾಕ್ಕಾದ ಉತ್ತರ ನೀಡುತ್ತದೆ ಎಂದು ಪ್ರಾಂಶುಪಾಲ ಬ್ರಿಜೇಶ್ ಥಾಮಸ್ ಹೇಳಿದರು.

‘ಪ್ರಜಾವಾಣಿ’ ಬಗ್ಗೆ ಮಿಸ್ ಐರೀಸ್ ಹೇಳಿದ್ದು ಏನು?

‘ಪ್ರಜಾವಾಣಿ’ ಪತ್ರಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಐರೀಸ್ ಉತ್ತರ ಹೀಗಿತ್ತು....

‘ಪ್ರಜಾವಾಣಿ’ ಕರ್ನಾಟಕದ ಜನಪ್ರಿಯ ಹಾಗೂ ಅತ್ಯಂತ ವಿಶ್ವಾಸಾರ್ಹ ಪತ್ರಿಕೆ. ನಿಖರ ಸುದ್ದಿಗೆ ಹೆಸರುವಾಸಿ. ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಹೆಚ್ಚು ಸುದ್ದಿ ಮತ್ತು ವಿಶ್ಲೇಷಣೆ ಈ ಪತ್ರಿಕೆಯಲ್ಲಿರುತ್ತವೆ. ನಿಖರ ಸುದ್ದಿ ಮತ್ತು ಸಂಪಾದಕೀಯದಿಂದಾಗಿ ರಾಜ್ಯದಲ್ಲಿ ಪ್ರಜಾವಾಣಿ ಮನೆ ಮಾತಾಗಿದೆ ಎಂದು ರೋಬೊ ಶಿಕ್ಷಕಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.