ಕೊಣನೂರು: ಕಸದ ವ್ಯವಸ್ಥಿತ ನಿರ್ವಹಣೆಯಿಲ್ಲದೇ ಕಾವೇರಿ ನದಿ ದಂಡೆಯು ಕಸದ ತೊಟ್ಟಿಯಾಗಿ ಮಾರ್ಪಾಡಾಗುತ್ತಿದೆ. ಸುತ್ತಲಿನ ಪ್ರದೇಶಗಳ ಜನರಿಗೆ ಇದರಿಂದ ಅನೇಕ ಸಮಸ್ಯೆಗಳಾಗುತ್ತಿದ್ದು, ಕುಡಿಯುವ ನೀರಿಗೂ ತ್ಯಾಜ್ಯಗಳು ಸೇರುತ್ತಿವೆ.

ರಾಮನಾಥಪುರ ಹೋಬಳಿಯ ಕೇರಳಾಪುರದಲ್ಲಿನ ಕಾವೇರಿ ನದಿ ಡಂಡೆಯಲ್ಲಿ ಸಂಗ್ರಹ ಆಗುತ್ತಿರುವ ಕಸದ ರಾಶಿಯಿಂದ ಸುತ್ತಲಿನ ನಿವಾಸಿಗಳಿಗೆ ಕಸದ ಘಾಟು ವಾಸನೆಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಕಸದಲ್ಲಿರುವ ಆಹಾರ ತಿನ್ನಲು ಬರುವ ನಾಯಿ, ಹಂದಿ ಮತ್ತು ಪಕ್ಷಿಗಳು ಈ ಸ್ಥಳವನ್ನು ಆವಾಸಸ್ಥಾನವನ್ನಾಗಿ ಮಾಡಿಕೊಂಡಿದ್ದು, ಕಸವನ್ನು ಮನಸೋಯಿಚ್ಛೆ ಎಳೆದಾಡಿ ಮನೆಯ ಬಳಿಯೂ ತಂದು ಬಿಡುತ್ತಿವೆ.

ಕಸ ವಿಲೇವಾರಿಗೆ ಪ್ರತ್ಯೇಕ ಸ್ಥಳ ಗುರುತಿಸದೇ ಇದ್ದುದರಿಂದ ಗ್ರಾಮ ಪಂಚಾಯಿತಿಯಿಂದ ಸಂಗ್ರಹಿಸಿದ ಕಸವನ್ನು ಕೆಲ ವರ್ಷಗಳಿಂದ ಇದೇ ಸ್ಥಳದಲ್ಲಿ ಹಾಕಲಾಗುತ್ತಿತ್ತು. ಕೆಲ ತಿಂಗಳಿಂದ ಸ್ಥಳ ಬದಲಿಸಿದ್ದರೂ, ಸ್ಥಳೀಯರು ಮಾತ್ರ ಇಲ್ಲಿಯೇ ಕಸ ಹಾಕುತ್ತಿದ್ದು, ನದಿ ಡಂಡೆಯಲ್ಲಿ ಕಸದ ರಾಶಿಯು ಹೆಚ್ಚುತ್ತಿದೆ. ನಿತ್ಯ ನದಿಗೆ ಬಟ್ಟೆ ತೊಳೆಯಲು ಹಾಗೂ ಶುಭ ಕಾರ್ಯಗಳಿಗೆ ಕಲಶ ತರಲು ಬರುವ ಜನರಿಗೆ ಕಸದ ದುರ್ವಾಸನೆ ಸಹಿಸಿಕೊಳ್ಳಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.

ಕಸದ ರಾಶಿಯಿಂದ ನಿತ್ಯವು ಕಾವೇರಿ ನದಿಗೆ ತ್ಯಾಜ್ಯ ಸೇರುತ್ತಿರುವುದು ಇಲ್ಲಿ ಸಾಮಾನ್ಯ ವಿಷಯವಾಗಿದೆ. ಕಸದ ರಾಶಿಯ ಪಕ್ಕದಲ್ಲೇ ಇರುವ ಈಶ್ವರ, ನವಗ್ರಹ ಮತ್ತು ಇತ್ತೀಚೆಗೆ ಲೋಕಾರ್ಪಣೆಗೊಂಡ ಶನೇಶ್ಚರ ದೇವಾಲಯಗಳಿಗೆ ಬರುವ ಜನರೂ ಮೂಗು ಮುಚ್ಚಿಕೊಂಡು ಹೋಗಬೇಕಿದೆ. ಕೆಲವೇ ಮೀಟರ್ಗಳ ದೂರದಲ್ಲಿರುವ ಚಲುವರಾಯಸ್ವಾಮಿ ಮತ್ತು ಹಂಪಿ ವಿರೂಪಾಕ್ಷೇಶ್ವರ ದೇವಾಲಯಗಳಿಗೂ ಕಸದ ರಾಶಿಯಿಂದ ಸಮಸ್ಯೆ ತಪ್ಪಿಲ್ಲ.

ಮಲ್ಲಿಗೆ ಹೂ ವ್ಯಾಪಾರ ಮತ್ತು ಹಿಂದೂ ಮಿಲಿಟರಿ ಹೋಟೆಲ್ ವ್ಯಾಪಾರದಲ್ಲಿ ಮಂಚೂಣಿಯಲ್ಲಿರುವ ಕೇರಳಾಪುರದಲ್ಲಿನ ಕಸದ ಸಮಸ್ಯೆಯನ್ನು ಬಗೆಹರಿಸಬೇಕು. ಪ್ರತ್ಯೇಕ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಿ, ಗ್ರಾಮಕ್ಕೆ ಅಂಟಿರುವ ಕಸದ ಕಳಂಕ ನಿವಾರಿಸಬೇಕು. ತ್ಯಾಜ್ಯ ಸೇರಿ ನದಿ ನೀರು ಮಲೀನವಾಗುವುದನ್ನು ತಡೆಯಬೇಕು ಎಂಬುದು ಸ್ಥಳೀಯರ ಆಗ್ರಹ.

ಸೇತುವೆ ಬದಿ ಕಸದ ರಾಶಿ

ಇಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ 8 ಸಮುದಾಯ ಭವನಗಳಿದ್ದು ಅಲ್ಲಿ ವಿವಿಧ ಶುಭ ಕಾರ್ಯಗಳು ಜರುಗುವುದರಿಂದ ನಿತ್ಯವೂ ಹೆಚ್ಚಿನ ಕಸ ಉತ್ಪಾದನೆ ಆಗುತ್ತಿದೆ. ಕಾವೇರಿ ನದಿ ದಂಡೆಯ ಸಮೀಪವಿರುವ ಸಮುದಾಯ ಭವನ ಕೋಳಿ ಅಂಗಡಿಗಳು ಮತ್ತು ಸಾರ್ವಜನಿಕರು ಹಾಕುವ ಕಸ ಮತ್ತು ತ್ಯಾಜ್ಯದಿಂದ ಕರ್ತಾಳು ಮತ್ತು ಕೇರಳಾಪುರ ನಡುವಿನ ಸೇತುವೆಯ ಬದಿ ಮತ್ತೊಂದು ಕಸದ ರಾಶಿಯು ಸೃಷ್ಟಿಯಾಗಿದೆ. ಸುಮಾರು 4 ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಿರುವ ಕೇರಳಾಪುರ ಅರಕಲಗೂಡು ತಾಲ್ಲೂಕಿನ ಗಡಿಭಾಗದಲ್ಲಿದ್ದು ಕೃಷ್ಣರಾಜನಗರ ಹೊಳೆನರಸೀಪುರ ಮತ್ತು ಅರಕಲಗೂಡು ಮೂರು ತಾಲ್ಲೂಕುಗಳು ಸೇರುವ ಸಂಗಮ ಸ್ಥಳವಾಗಿದೆ. ಇಲ್ಲಿ ವ್ಯಾಪಾರ ವಹಿವಾಟು ಉತ್ತಮವಾಗಿದ್ದು ನಿತ್ಯ ಕೇರಳಾಪುರಕ್ಕೆ ಹೆಚ್ಚಿನ ಸಂಖ್ಯೆಯ ಜನರು ಬರುತ್ತಾರೆ. ಅಂಗಡಿ ಮುಗ್ಗಟ್ಟುಗಳು ಅಧಿಕ ಸಂಖ್ಯೆಯಲ್ಲಿದ್ದು ಹೆಚ್ಚಿನ ಕಸ ಸಂಗ್ರಹವಾಗುತ್ತಿದೆ.

ನದಿ ದಂಡೆಗೆ ಕಸ ಹಾಕುವುದನ್ನು ವಿರೋಧಿಸುತ್ತಿದ್ದರೂ ಮುಕ್ತಿ ಸಿಕ್ಕಿಲ್ಲ. ಸ್ನಾನ ಮಾಡಲು ಬರುವ ಭಕ್ತರಿಗೆ ಕಸದ ರಾಶಿ ಅಸಹ್ಯ ಹುಟ್ಟಿಸುತ್ತಿದೆ.
-ಭಾಸ್ಕರ್, ಕೇರಳಾಪುರದ ಉದ್ಯಮಿ

ನೇಕಾರ ಸಮುದಾಯಕ್ಕೆ ಸೇರಿದ ಸ್ಥಳವೊಂದರಲ್ಲಿ ಪಂಚಾಯಿತಿ ಕಸ ಹಾಕುತ್ತಿದ್ದು ಕಸ ವಿಲೇವಾರಿಗೆ ಶಾಶ್ವತ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.
- ಕೇಶವಮೂರ್ತಿ, ಕೇರಳಾಪುರ ನಿವಾಸಿ

ಕಸದ ಸಮಸ್ಯೆಯಿಂದ ಕೇರಳಾಪುರಕ್ಕೆ ಕುಖ್ಯಾತಿಯಿದ್ದು ಸರ್ಕಾರದಿಂದ ಮಂಜೂರಾಗಿರುವ ಸ್ಥಳದಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸುವುದು ನಮ್ಮ ಆದ್ಯತೆ
-ಶಿವಕುಮಾರ್, ಕೇರಳಾಪುರ ಗ್ರಾ.ಪಂ. ಸದಸ್ಯ

- ಪಂಚಾಯಿತಿಗೆ ಕಸ ವಿಲೇವಾರಿಗೆ ಬೂದನೂರು ಸಮೀಪ 1 ಎಕರೆ ಜಾಗ 6 ತಿಂಗಳ ಹಿಂದಷ್ಟೇ ಮಂಜೂರಾಗಿದೆ. ನದಿ ದಂಡೆಯಲ್ಲಿ ಕಸ ಹಾಕುವವರಿಗೆ ನೋಟಿಸ್ ನೀಡಲಾಗುತ್ತಿದೆ.
-ಕೆ.ಟಿ.ಲೋಕೇಶ್ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.