ಬಿಗ್‌ಬಾಸ್ ಸ್ಪರ್ಧೆ ಮುಂದುವರಿಯುವಾಗಲೇ ಸ್ಪರ್ಧಿಗಳಿಂದಲೇ ಪರಸ್ಪರ ಎಲಿಮಿನೇಷನ್‌ಗೆ ನಾಮನಿರ್ದೇಶನ ಶುರುವಾದಂತಿದೆ. ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಇಂಥದ್ದೊಂದು ದೃಶ್ಯ ಹರಿದಾಡುತ್ತಿದೆ.
ಸ್ಪರ್ಧಿಗಳು ಬಿಗ್‌ಬಾಸ್ 8ನೇ ಸೀಸನ್‌ನ ಇದುವರೆಗೆ ಪ್ರಸಾರವಾದ ಕಂತುಗಳನ್ನು ನೋಡಿ ಮನೆಯೊಳಗೆ ಪ್ರವೇಶಿಸುತ್ತಾರೆ. ಕ್ಯಾಮೆರಾ ಎದುರು ಇರುವ ಮತ್ತು ಕ್ಯಾಮೆರಾದಾಚೆಗಿನ ಮುಖಗಳನ್ನು ಪರಿಚಯಿಸುವ ಕೆಲಸ ಇಲ್ಲಿ ನಡೆದಿದೆ. ಸ್ಪರ್ಧಿಗಳ ಪೈಕಿ ಯಾರು ಯಾರಿಗೆ ಯಾವ ಕಾರಣಕ್ಕೆ ಇಷ್ಟ ಆಗುವುದಿಲ್ಲ ಎಂಬುದನ್ನು ವಿವರಿಸಿ ಅವರ ಭಾವಚಿತ್ರವನ್ನು ಬೆಂಕಿಗೆ ಹಾಕುತ್ತಾರೆ. ಇಂಥ ದುರ್ಗುಣಗಳಿರುವವರು ಬಿಗ್‌ಬಾಸ್ ಮನೆಯಲ್ಲಿ ಇರಬಾರದು ಎಂದು ಹೇಳಿ ಅವರ ಭಾವಚಿತ್ರವನ್ನು ಬೆಂಕಿಗೆ ಹಾಕುತ್ತಾರೆ. ಈ ಪ್ರೋಮೋ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಇದು ಟಾಸ್ಕೋ ಅಥವಾ ಪ್ರಚಾರ ತಂತ್ರವೋ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಆದರೆ ದೃಶ್ಯದಲ್ಲಂತೂ ಪರಸ್ಪರ ದೋಷಾರೋಪಗಳ ಸುರಿಮಳೆಯೇ ಇದೆ.
ಸ್ಪರ್ಧಿಗಳು: ಅರವಿಂದ್ ಕೆ.ಪಿ, ಮಂಜು ಪಾವಗಡ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್, ನಿಧಿ ಸುಬ್ಬಯ್ಯ, ಪ್ರಶಾಂತ್ ಸಂಬರಗಿ ಹಾಗೂ ದಿವ್ಯಾ ಉರುಡುಗ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.