ಕನ್ನಡದ ಬಿಗ್ಬಾಸ್ 12ನೇ ಆವೃತ್ತಿ ಶುರುವಾಗಿ ಒಂದು ವಾರ ಕಳೆದಿದೆ. ಸೀಸನ್ 12 ಶುರುವಾದ ವಾರದಲ್ಲೇ ಬಿಗ್ಬಾಸ್ ಸ್ಪರ್ಧಿಗಳಿಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡಿದ್ದರು. ಬಿಗ್ಬಾಸ್ ಮನೆಗೆ ಬಂದ ಕೆಲವೇ ಸಮಯದಲ್ಲಿ ಒಂದು ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆದಿತ್ತು.

ಅಚ್ಚರಿ ಎಂಬಂತೆ ಈ ಬಾರಿಯ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಮಂಗಳೂರಿನ ರಕ್ಷಿತಾ ಶೆಟ್ಟಿಯನ್ನು ಒಂಟಿ ತಂಡ ಆಚೆ ಕಳುಹಿಸಿತ್ತು. ಆಗ ರಕ್ಷಿತಾ ಶೆಟ್ಟಿ ಜಾಸ್ತಿ ಮಾತನಾಡದೇ ಬಿಗ್ಬಾಸ್ ಮುಖ್ಯ ದ್ವಾರದಿಂದ ಹೊರ ನಡೆದಿದ್ದರು.
.BBK12: ಕಾಕ್ರೋಚ್ಗೆ ಸಿಕ್ತು ಅಸುರಾಧಿಪತಿ ಪಟ್ಟ: ಈಗ ಸುಧಿ ಆಡಿದ್ದೇ ಆಟ.BBK12 |ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿ: ಕಾಕ್ರೋಜ್ ಸುಧಿ ಯಾರು?.
ಇನ್ನು, ಶನಿವಾರದ ಸಂಚಿಕೆಯಲ್ಲಿ ಮತ್ತೆ ಬಿಗ್ಬಾಸ್ ವೇದಿಕೆಗೆ ರಕ್ಷಿತಾ ಶೆಟ್ಟಿ ಬಂದಿದ್ದರು. ಒಂದು ವಾರಗಳ ಕಾಲ ಬಿಗ್ಬಾಸ್ ರಹಸ್ಯ ಕೋಣೆಯಲ್ಲಿದ್ದ ರಕ್ಷಿತಾಳನ್ನು ಕಿಚ್ಚ ಸುದೀಪ್ ಅವರು ವೇದಿಕೆಗೆ ಬರಮಾಡಿಕೊಂಡಿದ್ದರು. ಇದೇ ವೇಳೆ ಕಿಚ್ಚ ಸುದೀಪ್ ಮುಂದೆಯೇ ರಕ್ಷಿತಾ ಶೆಟ್ಟಿ ಒಂಟಿಗಳ ನಿರ್ಧಾರಕ್ಕೆ ಬೇಸರ ಹೊರ ಹಾಕಿದ್ದರು.

ಆಗ ಕಿಚ್ಚ ಸುದೀಪ್ ಮತ್ತೆ ರಕ್ಷಿತಾಳನ್ನು ಬಿಗ್ಬಾಸ್ ಮನೆಗೆ ಕಳುಹಿಸಿದ್ದರು. ಇದಾದ ಬಳಿಕ ಮತ್ತೆ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ರಕ್ಷಿತಾಳನ್ನು ನೋಡಿದ ಸಹ ಸ್ಪರ್ಧಿಗಳು ಅಚ್ಚರಿಗೊಂಡಿದ್ದರು. ನೀನು ಇಷ್ಟು ದಿನ ಎಲ್ಲಿ ಇದ್ದೇ? ಹೇಗೆ ಇಲ್ಲಿಗೆ ಬಂದೇ? ಹೀಗೆ ನಾನಾ ಪ್ರಶ್ನೆಗಳನ್ನು ಕೇಳಿದ್ದರು. ಆದರೆ, ರಕ್ಷಿತಾ ಮಾತ್ರ ಭಯಪಡದೆ ಎಲ್ಲದಕ್ಕೂ ಉತ್ತರ ಕೊಟ್ಟಿದ್ದಾಳೆ.

ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಮುಂದೆಯೇ ರಕ್ಷಿತಾ ಮನೆಮಂದಿಗೆ ವಾರ್ನಿಂಗ್ ಕೊಟ್ಟಿದ್ದಾಳೆ. ʻಒಬ್ಬರನ್ನು ಹೊರಗೆ ಕಳಿಸಬೇಕು ಅಂದರೆ ಯಾರನ್ನು ಕಳುಹಿಸುತ್ತೀರಾ? ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಆಗ ಉತ್ತರಿಸಿದ ರಕ್ಷಿತಾ ʻಎಲ್ಲರನ್ನೂ ಹೊರಗೆ ಹಾಕ್ತೇನೆ ಎಂದಿದ್ದಾಳೆ. ಇನ್ನು ಮುಂದೆಯಾದರೂ ಸರಿಯಾದ ಕಾರಣ ನೀಡಿ ನಾಮಿನೇಟ್ ಮಾಡಿ ಎಂದು ಹೇಳಿದ್ದಾಳೆ. ರಕ್ಷಿತಾ ಮಾತು ಹೇಳಿದ ಕಿಚ್ಚ ಸುದೀಪ್ ಸೇರಿದಂತೆ ಮನೆಮಂದಿ ದಂಗಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.