ಸೋಮವಾರ, 9 ಫೆಬ್ರುವರಿ 2026
×
ADVERTISEMENT
ದೇಶ ರಕ್ಷಿಸುವ ವಾಯುಪಡೆಯ ಲೋಹದ ಹಕ್ಕಿಗಳಿವು
ದೇಶ ರಕ್ಷಿಸುವ ವಾಯುಪಡೆಯ ಲೋಹದ ಹಕ್ಕಿಗಳಿವು
ಫಾಲೋ ಮಾಡಿ
Published 9 ಫೆಬ್ರುವರಿ 2026, 7:14 IST
Last Updated 9 ಫೆಬ್ರುವರಿ 2026, 7:14 IST
Comments
ರಕ್ಷಣಾ ದೃಷ್ಟಿಯಿಂದ ಭಾರತಕ್ಕೆ ಒಟ್ಟು 42 ಸ್ಕ್ವಾಡ್ರನ್‍ಗಳ ಅವಶ್ಯಕತೆ ಇದೆ. ಆದರೆ ಪ್ರಸ್ತುತ ಭಾರತೀಯ ವಾಯುಪಡೆಯಲ್ಲಿ 31 ಸ್ಕ್ವಾಡ್ರನ್‍ಗಳು ಮಾತ್ರ ಕಾರ್ಯನಿರ್ವಹಿಸುತ್ತುವೆ. ಪ್ರತಿ ಸ್ಕ್ವಾಡ್ರನ್‍ನಲ್ಲಿ 18 ಯುದ್ಧ ವಿಮಾನಗಳಿವೆ. ಇನ್ನೂ 11 ಸ್ಕ್ವಾಡ್ರನ್‍ಗೆ ಬೇಕಾದ ಯುದ್ಧ ವಿಮಾನಗಳ ಕೊರತೆ ಇದೆ. ಈ ಕೊರತೆಯನ್ನು ಕೆಲವೇ ವರ್ಷಗಳಲ್ಲಿ ತೇಜಸ್ ಯುದ್ಧ ವಿಮಾನ ತುಂಬಲಿದೆ ಎಂಬುದು ರಕ್ಷಣಾ ತಜ್ಞರ ಲೆಕ್ಕಾಚಾರ.
ತೇಜಸ್ ಎಂ.ಕೆ.-1ಎ. ಯುದ್ಧ ವಿಮಾನ

ತೇಜಸ್ ಎಂ.ಕೆ.-1ಎ. ಯುದ್ಧ ವಿಮಾನ

ರಫೇಲ್: ಮಧ್ಯಮ-ಶ್ರೇಣಿಯ, ಏರ್-ಟು-ಲ್ಯಾಂಡ್ ಶಸ್ತ್ರಾಸ್ತ್ರ ವ್ಯವಸ್ಥೆಯುಳ್ಳ ಹ್ಯಾಮರ್ ಆಯುಧವನ್ನು ರಫೇಲ್ ಯುದ್ಧ ವಿಮಾನ ಹೊಂದಿದೆ. ಇದು 4.5 ತಲೆಮಾರಿನ ಯುದ್ಧ ವಿಮಾನವಾಗಿದ್ದು, 50 ಸಾವಿರ ಅಡಿ ಎತ್ತರದಲ್ಲಿ ಹಾರಾಟ ಮಾಡುವ ಸಾಮರ್ಥ್ಯವಿದೆ. ಏಕಕಾಲದಲ್ಲಿ 1,500 ಕಿ.ಮೀ.ಗೂ ಹೆಚ್ಚು ದೂರ ಕ್ರಮಿಸಬಲ್ಲದು. ಅಪರೇಷನ್ ಸಿಂಧೂರ್‌ನಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸಿದೆ.

ಸುಖೋಯ್-30 ಎಂ.ಕೆ.ಐ: ಸು-30 ಎಂ.ಕೆ.ಐ. ಯುದ್ಧ ವಿಮಾನವನ್ನು ರಷ್ಯಾದ ಸುಖೋಯ್ ಕಂಪನಿ ವಿನ್ಯಾಸಗೊಳಿಸಿದ್ದು, ಭಾರತದ ಎಚ್.ಎ.ಎಲ್. ಕಂಪನಿಯ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಏರ್-ಟು-ಏರ್ ಮತ್ತು ಏರ್-ಟು-ಲ್ಯಾಂಡ್ ಕ್ಷಿಪಣಿಗಳನ್ನು ಹೊಂದಿವೆ. ಎರಡು ಆಸನ ಹೊಂದಿರುವ ಬಹುಪಾತ್ರ ನಿರ್ವಹಿಸುವ ಯುದ್ಧ ವಿಮಾನಗಳಾಗಿವೆ. ಒನ್ ಎಕ್ಸ್ 30 ಎಂ.ಎಂ. ಜಿ.ಎಸ್.ಎಚ್ ಬಂದೂಕಿನ ಜೊತೆಗೆ 8 ಸಾವಿರ ಕೆ.ಜಿ. ಬಾಹ್ಯ ಶಸ್ತ್ರಾಸ್ತ್ರಗಳನ್ನು ಹೊರುವ ಸಾಮರ್ಥ್ಯವನ್ನು ಈ ವಿಮಾನಗಳು ಹೊಂದಿವೆ. ಗಂಟೆಗೆ ಗರಿಷ್ಠ 2500 ಕಿ.ಮೀ. ವೇಗದಲ್ಲಿ ಚಲಿಸುವ ಶಕ್ತಿ ಇದೆ.

ಮಿರಾಜ್-2000: ಭಾರತೀಯ ವಾಯುಪಡೆಯಲ್ಲಿ ಬಹುಪಾತ್ರ ನಿರ್ವಹಿಸುವ ವಿಮಾನಗಳಲ್ಲಿ ಒಂದಾದ ಮಿರಾಜ್-2000ಅನ್ನು 1985ರಲ್ಲಿ ಪರಿಚಯಿಸಲಾಯಿತು. ಮಿರಾಜ್-2000ಅನ್ನು ಡಸಾಲ್ಟ್ ಏವಿಯೇಷನ್ ಕಂಪನಿಯು ಅಭಿವೃದ್ಧಿಪಡಿಸಿದೆ. ಒಂದು ಆಸನ, ಒಂದು ಎಂಜಿನ್ ಹೊಂದಿರುವ ಫ್ರೆಂಚ್ ಮೂಲದ ಬಹುಪಾತ್ರ ನಿರ್ವಹಿಸುವ ಯುದ್ಧ ವಿಮಾನ ಇದಾಗಿದೆ. ಅತಿ ದೂರದ ಗುರಿಯನ್ನು ನಿಖರವಾಗಿ ತಲುಪಬಲ್ಲ ಸಾಮರ್ಥ್ಯ ಮಿರಾಜ್-2000 ಯುದ್ಧ ವಿಮಾನಕ್ಕೆ ಇದೆ. ಇದು ಗಂಟೆಗೆ 2495 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದೆ. ಎರಡು 30 ಎಂ.ಎಂ. ಅವಿಭಾಜ್ಯ ಫಿರಂಗಿಗಳು ಮತ್ತು ಎರಡು ಆರ್-550 ಮ್ಯಾಜಿಕ್ ಯುದ್ಧ ಕ್ಷಿಪಣಿಗಳನ್ನು ಬಾಹ್ಯ ನಿಲ್ದಾಣಗಳಿಗೆ ಹೊತ್ತೊಯ್ಯುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ.

ಮಿಗ್-29: ರಷ್ಯಾ ನಿರ್ಮಿತ ಮಿಗ್-29 ಯುದ್ಧ ವಿಮಾನಗಳಿಗೆ ಅತ್ಯಾಧುನಿಕ ಯುದ್ಧ ಸೌಲಭ್ಯಗಳನ್ನು ಅಳವಡಿಸುವ ಮೂಲಕ ಮೇಲ್ದರ್ಜೆಗೆ ಏರಿಸಲಾಗಿದೆ. ಇದನ್ನು ರಷ್ಯಾ ಮೂಲದ ಮಿಕೋಯಾನ್-ಗುರೆವಿಚ್ ಡಿಸೈನ್ ಬ್ಯೂರೊ ವಿನ್ಯಾಸಗೊಳಿಸಿದೆ. ತಯಾರಿಸಿದೆ. ಭಾರತ ಸೈನ್ಯಕ್ಕೆ 1985ರಲ್ಲಿ ಪರಿಚಯಿಸಲಾಯಿತು. ಒಂದು ಸೀಟ್‍ನ ವಿಮಾನವಾಗಿದ್ದು, ಎರಡು ಎಂಜಿನ್‍ಗಳನ್ನು ಹೊಂದಿದೆ. ಗಂಟೆಗೆ ಗರಿಷ್ಠ 2,445 ಕಿ.ಮೀ. ವೇಗದಲ್ಲಿ ಚಲಿಸಬಲ್ಲದು. 30 ಎಂ.ಎಂ. ಫಿರಂಗಿ, ನಾಲ್ಕು ಆರ್-60 ಫಿರಂಗಿಗಳು ಮತ್ತು ಮಧ್ಯಮ ಶ್ರೇಣಿಯ ಎರಡು ಆರ್-27ಆರ್ ರೆಡಾರ್ ಮಾರ್ಗದರ್ಶಿ ಕ್ಷಿಪಣಿಗಳನ್ನು ಈ ವಿಮಾನ ಹೊಂದಿದೆ.

ಮಿಗ್-21 ಬಿಸನ್: 1961ರಲ್ಲಿ, ಮಿಕೋಯಾನ್-ಗುರೆವಿಚ್ ಡಿಸೈನ್ ಬ್ಯೂರೊ ನಿರ್ಮಿತ ಮಿಗ್-21 ಬಿಸನ್ ಯುದ್ಧ ವಿಮಾನವನ್ನು ಭಾರತ ವಾಯುಸೇನೆ ಆಯ್ಕೆ ಮಾಡಿಕೊಂಡಿತು. ರಷ್ಯಾ ಮೂಲದ ವಿಮಾನವು ಒಂದು ಎಂಜಿನ್, ಒಂದು ಸೀಟ್ ಹೊಂದಿದೆ. ಬಹುಪಾತ್ರ ನಿಭಾಯಿಸುವ ವಿಮಾನವು ಭೂ-ದಾಳಿ ನಡೆಸಲು ಅತ್ಯಂತ ಯೋಗ್ಯವಾಗಿದೆ. ಇದು ಗಂಟೆಗೆ 2230 ಕಿ.ಮೀ. ಗರಿಷ್ಠ ವೇಗದಲ್ಲಿ ಚಲಿಸುವ ಶಕ್ತಿ ಹೊಂದಿದ್ದು, ನಾಲ್ಕು ಆರ್-60 ಯುದ್ಧ ಕ್ಷಿಪಣಿ, ಒಂದು 23 ಎಂ.ಎಂ. ಎರಡು ಬ್ಯಾರೆಲ್ ಫಿರಂಗಿಗಳನ್ನು ಹೊಂದಿದೆ.

ಜಾಗ್ವಾರ್: ಬ್ರಿಟಿಷ್‌ ಮತ್ತು ಫ್ರೆಂಚ್ ವಾಯುಸೇನೆ ಒಟ್ಟಾಗಿ ಅಭಿವೃದ್ಧಿಪಡಿಸಿದ ಯುದ್ಧ ವಿಮಾನ ಇದಾಗಿದೆ. ಇದು ಒಂದು ಸೀಟ್‍ನ ಎರಡು ಎಂಜಿನ್ ವಿಮಾನವಾಗಿದ್ದು ಗಂಟೆಗೆ 1350 ಕಿ.ಮೀ. ವೇಗದಲ್ಲಿ ನುಗ್ಗುವ ಸಾಮರ್ಥ್ಯ ಹೊಂದಿದೆ. ಎರಡು 30 ಎಂ.ಎಂ. ಬಂದೂಕುಗಳು ಮತ್ತು ಎರಡು ಆರ್ -350 ಮ್ಯಾಜಿಕ್ ಸಿಸಿಎಂಗಳ ಜೊತೆಗೆ 4750 ಕೆ.ಜಿ. ಬಾಹ್ಯ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲದು.

ಜಗತ್ತಿನ ನಂಬರ್ ಒನ್ ಸೂಪರ್ ಸಾನಿಕ್ ಕ್ಷಿಪಣಿ:
ವಿಶ್ವದಲ್ಲಿಯೇ ಹೆಚ್ಚು ವೇಗದ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ ಭಾರತದ ಬತ್ತಳಿಕೆಯಲ್ಲಿದೆ. ಮ್ಯಾಕ್ 3.5 ನಿಂದ 4ರ ವೇಗದಲ್ಲಿ ಅಂದರೆ ಶಬ್ದಕ್ಕಿಂತ 4 ಪಟ್ಟು ವೇಗದಲ್ಲಿ ದಾಳಿ ಮಾಡುವ ಸಾಮರ್ಥ್ಯ ಬ್ರಹ್ಮೋಸ್‌ಗಿದೆ. ಜೊತೆಗೆ ವಾಯು, ಭೂಮಿ ಹಾಗೂ ಜಲ ಮೂರರಲ್ಲಿಯೂ ಇದನ್ನು ಹಾರಿಸಬಹುದು. ಫಿಲಿಪಿನ್ಸ್ ಈಗಾಗಲೇ ಬ್ರಹ್ಮೋಸ್‌ ಖರೀದಿ ಮಾಡಿದೆ. ವಿಯೆಟ್ನಾಂ , ಮಲೇಷ್ಯಾ, ಸಿಂಗಾಪುರ, ಲ್ಯಾಟಿನ್ ಅಮೆರಿಕದ ದೇಶಗಳು, ಬ್ರೆಜಿಲ್, ಚಿಲಿ, ಅರ್ಜೆಂಟೀನಾ, ವೆನೆಜುವೆಲಾ, ಈಜಿಪ್ಟ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ , ಕತಾರ್, ಓಮಾನ್, ಸೌತ್ ಆಫ್ರಿಕಾ ಹಾಗೂ ಬಲ್ಗೇರಿಯಾನ ದೇಶಗಳಿಗೆ ಬ್ರಹ್ಮೋಸ್ ನೀಡುವ ಬಗ್ಗೆ ಮಾತುಕತೆ ನಡೆದಿವೆ. ಸದ್ಯ ಸುಖೋಯ್-30 ಎಂ.ಕೆ.ಐ. ಯುದ್ಧ ವಿಮಾನದಿಂದ ಮಾತ್ರ ಬ್ರಹ್ಮೋಸ್ ಹಾರಿಸಬಹುದಾಗಿದೆ. ಜೊತೆಗೆ ತೇಜಸ್ ಯುದ್ಧ ವಿಮಾನಗಳಿಗೂ ಇದರ ಆಳವಡಿಕೆಯಾಗಲಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.‌
ಎಚ್‍ಎಎಲ್ ಕೈ ತಪ್ಪಿದ 5ನೇ ತಲೆಮಾರಿನ ಯುದ್ಧ ವಿಮಾನ ಎಎಂಸಿಎ!
ಭಾರತ 5ನೇ ತಲೆಮಾರಿನ ಯುದ್ಧ ವಿಮಾನ ತಯಾರಿಕೆಗೆ ಚಾಲನೆ ನೀಡಿದೆ. ಈ ಯೋಜನೆಗೆ ಅತ್ಯಾಧುನಿ ಮಧ್ಯಮ ಶ್ರೇಣಿಯು ಯುದ್ಧ ವಿಮಾನ (ಎಎಂಸಿಎ)’ ಎಂದು ಹೆಸರಿಡಲಾಗಿದೆ. ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಎಚ್‍ಎಎಲ್ ಈ ಯೋಜನೆಯಿಂದ ಹೊರ ಬಿದ್ದಿದ್ದು, ಸದ್ಯಕ್ಕೆ ಟಾಟಾ, ಎಲ್‍ಎನ್‍ಟಿ ಹಾಗೂ ಭಾರತ್ ಫೋರ್ಜ್ ಸಂಸ್ಥೆಗಳಿಗೆ ಯುದ್ಧ ವಿಮಾನದ ಮಾದರಿ ತಯಾರಿಕೆಯ ಟೆಂಡರ್ ನೀಡಲಾಗಿದೆ. ಈ ಯುದ್ಧ ವಿಮಾನವು 25 ಟನ್ ತೂಕ, ಎರಡು ಎಂಜಿನ್‍ಗಳನ್ನು ಹೊಂದಿರಲಿದೆ. 1.5 ಟನ್ ತೂಕದ ಆಯುಧ ಹೊತ್ತೊಯ್ಯುವ ಸಾಮರ್ಥ್ಯವಿರಲಿದೆ. ರಾಡಾರ್‌ನಿಂದ ತಪ್ಪಿಸಿಕೊಳ್ಳುವ ಸೆಲ್ಫ್ ತಂತ್ರಜ್ಞಾನವಿದ್ದು, ಶತ್ರುಗಳ ಮೇಲೆ ನಿಖರ ದಾಳಿ ನಡೆಸುವ ಸಾಮರ್ಥ್ಯವಿರುತ್ತದೆ. ಸದ್ಯ ಯೋಜನೆಯ ಆರಂಭಿಕ ವೆಚ್ಚ ₹15 ಸಾವಿರ ಕೋಟಿ ಎಂದು ಹೇಳಲಾಗಿದೆ.
ಇನ್ನೂ ಎಷ್ಟು ತೇಜಸ್ ಬಾಕಿ ಇವೆ?
ಭಾರತೀಯ ವಾಯು ಪಡೆ 2021ರಲ್ಲಿ ಒಟ್ಟು 83 ತೇಜಸ್ ಯುದ್ದ ವಿಮಾನಗಳನ್ನು ಒದಗಿಸಲು ಎಚ್‍ಎಎಲ್‍ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದಾದ ನಂತರ 2025 ಸೆಪ್ಟೆಂಬರ್‌ನಲ್ಲಿ ₹62,370 ಕೋಟಿಗೂ ಹೆಚ್ಚು ವೆಚ್ಚದಲ್ಲಿ 97 ವಿಮಾನಗಳಿಗೆ ವಾಯು ಸೇನೆ ಬೇಡಿಕೆ ಸಲ್ಲಿಸಿತ್ತು. ಒಟ್ಟು 180 ತೇಜಸ್ ಯುದ್ಧ ವಿಮಾನಗಳು ವಾಯುಪಡೆಗೆ ಸೇರ್ಪಡೆಗೊಳ್ಳಬೇಕಿದೆ.
ಭಾರತದ ಯುದ್ಧ ವಿಮಾನ ತಯಾರಿಕಾ ಸಾಮರ್ಥ್ಯ ಎಷ್ಟು?
ಪ್ರಸ್ತುತ ಎಚ್‍ಎಎಲ್‍ನ ಯುದ್ಧ ವಿಮಾನ ಉತ್ಪಾದನಾ ಸಾಮರ್ಥ್ಯ ವರ್ಷಕ್ಕೆ 24ರಷ್ಟಿದೆ. ಈ ಲೆಕ್ಕಚಾರದಲ್ಲಿ 180 ಯುದ್ಧ ವಿಮಾನಗಳ ತಯಾರಿಕೆ ಪೂರ್ಣಗೊಳಿಸಲು ಏಳು ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. 2033ರ ವೇಳೆಗೆ ಸೇನೆ ಸೇರುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT